ನವಲಗುಂದ –
ಧಾರವಾಡ ಜಿಲ್ಲೆಯ ಲೋಕಸಭಾ ಚುನಾವಣೆಯ ಕಾವು ಜೋರಾಗಿದ್ದು ಜಿಲ್ಲೆಯಲ್ಲಿ ಐದನೇಯ ಬಾರಿ ಗೆ ಗೆಲುವಿನ ವಿಜಯದ ಪತಾಕೆಯನ್ನು ಹಾರಿಸಲು ಮತ್ತೊಮ್ಮೆ ಪ್ರಹ್ಲಾದ್ ಜೋಶಿ ಸಜ್ಕಾಗಿದ್ದು ಹೀಗಾಗಿ ಪ್ರಹ್ಲಾದ್ ಜೋಶಿ ಯವರು ಭರ್ಜರಿ ಯಾದ ಮತಯಾಚನೆ ಯಲ್ಲಿ ತೊಡಗಿದ್ದಾರೆ
ಈ ಒಂದು ಹಿನ್ನಲೆಯಲ್ಲಿ ನವಲಗುಂದ ವಿಧಾನ ಸಭಾ ಕ್ಷೇತ್ರದ ತಿರ್ಲಾಪೂರ ಗ್ರಾಮದಲ್ಲಿ ಚುನಾವಣಾ ಪ್ರಚಾರಾರ್ಥ ಸಭೆ ನಡೆಯಿತು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರೊಂದಿಗೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಭಾಗವಹಿಸಿ ಮತ ಯಾಚನೆಯನ್ನು ಮಾಡಿದರು
ಸೌದೆ ಒಲೆಯ ಮುಂದೆ ಬೇಯುತ್ತಿದ್ದ ಮಹಿಳೆ ಯರ ಜೀವನ ಸುಗಮವಾಗಿಸಲು ಪಿಎಂ ಉಜ್ವಲಾ ಯೋಜನೆ ಜಾರಿಗೊಳಿಸಿತು ಪ್ರಧಾನಮಂತ್ರಿಯವರ ನೇತೃತ್ವದ ಕೇಂದ್ರ ಸರ್ಕಾರ. ಸ್ವಯಂ ಉದ್ಯೋಗ ಕಲ್ಪಿಸಿ ಜೀವನ ಉಜ್ವಲ ಮಾಡಬೇಕೆಂದಿರುವವರಿಗೆ ಮುದ್ರಾ ಯೋಜನೆ ಜಾರಿಗೊಳಿಸಿ ಸಹಾಯ ಮಾಡಿದೆ.
ಬಿಜೆಪಿಯನ್ನು ಮತ್ತೊಮ್ಮೆ ಬಹುಮತದಿಂದ ಗೆಲ್ಲಿಸಿ ದೀನ ಬಂಧು ನರೇಂದ್ರ ಮೋದಿಯವ ರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕಿದೆ ಎಂದರು
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ ಪಕ್ಷದ ಪ್ರಮುಖರಾದ ಷಣ್ಮುಖ ಗುರಿಕಾರ, ಎ ಬಿ ಹಿರೇಮಠ, ಅಡಿವೆಪ್ಪ ಮನಮಿ, ಸಿದ್ದನಗೌಡ ಪಾಟೀಲ ಹಾಗು ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ನವಲಗುಂದ…..