100 ನೇ ಟೆಸ್ಟ್ ಪಂದ್ಯ ಆಡುತ್ತಿರುವ ಇಶಾಂತ್ ಶರ್ಮಾ

ಅಹಮ್ಮದಾಬಾದ್ –

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ 100 ನೇ ಟೆಸ್ಟ್ ಪಂದ್ಯವಾಡುತ್ತಿ ದ್ದಾರೆ‌ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ.ಈ ಒಂದು ಹಿನ್ನಲೆಯಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಂದ ಗೌರವ ಪಡೆದಿದ್ದಾರೆ. ಈ ವೇಳೆ ಪತ್ನಿ ಪ್ರತಿಮಾ ಸಿಂಗ್ ಕೂಡಾ ಇದ್ದರು.

ಇಶಾಂತ್ ರಾಷ್ಟ್ರಪತಿಗಳಿಂದ ಗೌರವ ಪದಕ ಪಡೆಯುವಾಗ ನಾಯಕ ವಿರಾಟ್ ಕೊಹ್ಲಿ ಕೂಡಾ ಪಕ್ಕದಲ್ಲೇ ನಿಂತು ಸಾಥ್ ನೀಡಿದರು. ಇದಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ಇಶಾಂತ್ ಪತ್ನಿ ಪ್ರತಿಮಾ ಸಿಂಗ್ ತಮ್ಮ ಪತಿಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದ ಸಂದೇಶ.

‘ಎಲ್ಲಾ ಏಳು, ಬೀಳುಗಳು, ಯಶಸ್ಸು,ವೈಫಲ್ಯಗಳು, ದುಃಖ, ಖುಷಿ, ಪಾರ್ಟಿ ಮಾಡುವಾಗ ಪ್ರಾಕ್ಟೀಸ್ ನಲ್ಲಿ ಭಾಗವಹಿಸಿದ್ದು, ಸುದೀರ್ಘ ಪ್ರಯಾಣ.ನಿನ್ನ ಎಲ್ಲಾ ಏಳು ಬೀಳುಗಳನ್ನು ಕಂಡಿರುವೆ.ಅದಕ್ಕೆಲ್ಲಾ ತಕ್ಕ ಪ್ರತಿಫಲ ಸಿಕ್ಕಿದೆ ಮೈ ಲವ್. ನಿನ್ನ ವಿಶೇಷ 100 ನೇ ಟೆಸ್ಟ್ ಗೆ ನನ್ನ ಅಭಿನಂದನೆಗಳು’ ಎಂದು ಬರೆದು ಪತಿಗೆ ವಿಶ್ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!
%d bloggers like this: