ನವಲಗುಂದ –
ಅರ್ಥಪೂರ್ಣವಾಗಿ ಯಶಶ್ವಿಯಾಗಿ ನಡೆಯಿತು ಜನಸೇವಕ NH ಕೋನರೆಡ್ಡಿ ಹುಟ್ಟು ಹಬ್ಬ – ಹುಟ್ಟು ಹಬ್ಬದ ದಿನದಂದ ಕ್ಷೇತ್ರದ ಜನತೆಗೆ ಗಿಪ್ಟ್ ಕೊಟ್ಟ 47 ಕೋಟಿ ರೂಪಾಯಿ ಕಾಮಗಾರಿಯೊಂದಿಗೆ ಅದ್ದೂರಿಯಾಗಿ ನಡೆಯಿತು ರಕ್ತದಾನ…..ಜನ ಜಂಗುಳಿಯ ನಡುವೆ ನಡೆಯಿತು ಜನಸೇವಕನ ಕಾರ್ಯಕ್ರಮ ಹೇಗಿತ್ತು ಒಮ್ಮೇ ನೋಡಿ…..
ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕ ಎನ್ ಹೆಚ್ ಕೋನರೆಡ್ಡಿಯವರ ಹುಟ್ಟು ಹಬ್ಬವನ್ನು ಕ್ಷೇತ್ರದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.ಹೌದು ಪ್ರತಿಯೊಂದರಲ್ಲೂ ಸಾಮಾನ್ಯರಂತೆ ಕಾಣಿಸಿಕೊಳ್ಳುವ ಶಾಸಕ ಎನ್ ಹೆಚ್ ಕೋನರೆಡ್ಡಿಯವರು ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಅರ್ಥಪೂರ್ಣವಾಗಿ ಆಚರಣೆ ಮಾಡಿಕೊಂಡಿದ್ದು ಕಂಡು ಬಂದಿತು.ಹುಟ್ಟು ಹಬ್ಬದ ದಿನದಂದೇ ಕ್ಷೇತ್ರದ ಜನತೆಗೆ ಶಾಸಕರು 47 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಜನತೆಗೆ ಗಿಪ್ಟ್ ನೀಡಿದ್ದಾರೆ.
ಹೌದು 47.52 ಕೋಟಿ ವೆಚ್ಚದಲ್ಲಿ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕಿನ ವಿವಿಧ ರಸ್ತೆಗಳನ್ನು ಡಾಂಬರೀಕರಣ ಹಾಗೂ ಶಾಲಾ ಕಾಲೇಜು ಕಟ್ಟಡ ನವಲಗುಂದ ವಕೀಲರ ಸಂಘಕ್ಕೆ ಸೋಲಾರ ಅಳವಡಿಸುವ ಕಾಮಗಾರಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಭೂಮಿ ಪೂಜೆ ನೆರವೇರಿಸಿ ಜನಸೇವಕನ ಹುಟ್ಟು ಹಬ್ಬದ ದಿನದಂದು ಭರ್ಜರಿಯಾದ ಗಿಪ್ಟ್ ನ್ನು ಜನತೆಗೆ ನೀಡಿದ್ದು ಒಂದೆಡೆಯಾದರೆ ಇನ್ನೂ ಅಪ್ಪಾಜಿ ಗಾರ್ಡ್ ನಲ್ಲಿನ ಬೃಹತ್ ರಕ್ತದಾನ ಶಿಬಿರ ನಡೆಯಿತು.





ಪೊಲೀಸ್ ಸಿಬ್ಬಂದಿಗಳು ಅಧಿಕಾರಿಗಳು, ಸಾರ್ವಜ ನಿಕರು,ಪಕ್ಷದ ಕಾರ್ಯಕರ್ತರು,ಸೇರಿದಂತೆ ಅಪಾರ ಸಂಖ್ಯೆಯಲ್ಲಿನ ಜನಸ್ತೋಮ ಈ ಒಂದು ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ರಕ್ತದಾನವನ್ನು ಮಾಡಿದರು
ಇಧರೊಂದಿಗೆ ಜನಸೇವನಕ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದು ಕಂಡು ಬಂದಿತು.ಸರಳ ಸಜ್ಜನಿಕೆಯ ರಾಜಕಾರಣಿಯಾಗಿರುವ ಕೋನರೆಡ್ಡಿ ಯವರ ಹುಟ್ಟು ಹಬ್ಬವನ್ನು ಕೂಡಾ ಅವರ ಆಫ್ತರು ಅಭಿಮಾನಿಗಳು ಸೇರಿದಂತೆ ಹಲವರು ರಕ್ತದಾನದೊಂ ದಿಗೆ ಆಚರಣೆ ಮಾಡಿದ್ದು ಕಂಡು ಬಂದಿತು.
ಇನ್ನೂ ಈ ಒಂದು ವಿಶೇಷವಾದ ಕಾರ್ಯಕ್ರಮದಲ್ಲಿ ಸಚಿವ ಸತೀಶ್ ಜಾರಕಿಹೋಳಿ,ಶಾಸಕ ಪ್ರಸಾದ್ ಅಬ್ಬಯ್ಯ,ಸೇರಿದಂತೆ ಹತ್ತಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡು ಅರ್ಥಪೂರ್ಣವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ಕಂಡು ಬಂದಿತು.ಈ ಒಂದು ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನಸ್ತೋಮ ಪಾಲ್ಗೊಂಡಿದ್ದು ಕಂಡು ಬಂದಿತು.
ಸುದ್ದಿ ಸಂತೆ ನ್ಯೂಸ್ ನವಲಗುಂದ…..