ಬೆಂಗಳೂರು –
ಆದಾಯಕ್ಕಿಂತ ಮೀರಿ ಅಕ್ರಮವಾಗಿ ಆಸ್ತಿ ಸಂಪಾದನೆ ಹೊಂದಿದ ಆರೋಪದಡಿ ಬಂಧಿತ ರಾಗಿದ್ದ ಬೆಂಗಳೂರು ಮಹಾನಗರ ಕಾರ್ಯಪಡೆಯ ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ಟರ್ ಸೈಮನ್ ಅವರನ್ನು 3 ದಿನಗಳ ಕಾಲ ಎಸಿಬಿ ವಶಕ್ಕೆ ನೀಡಲಾಗಿದೆ.
ಆದಾಯ ಮೀರಿ ಆಸ್ತಿ ಹೊಂದಿದ ಆರೋಪದಡಿ ಬೆಂಗಳೂರು ಮಹಾನಗರ ಕಾರ್ಯಪಡೆಯ ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ಟರ್ ಸೈಮನ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬುಧವಾರ ಬಂಧಿಸಿದ್ದರು. ನಂತರ ಆರೋಪಿ ಅಧಿಕಾರಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸ ಲಾಗಿತ್ತು.ಈಗಾಗಲೇ ಅವರನ್ನು ಮಾರ್ಚ್ 13ರ ವರೆಗೂ ಪೊಲೀಸ್ ವಶಕ್ಕೆ ನೀಡಲಾಗಿದೆ. ಮಂಗಳ ವಾರ ವಿಕ್ಟರ್ ಸೈಮನ್ ಅವರ ನಿವಾಸ ಸೇರಿ ಇತರ ಕೆಲವು ಸ್ಥಳಗಳ ಮೇಲೆ ಎಸಿಬಿ ದಾಳಿ ನಡೆಸಿತ್ತು. ಈ ವೇಳೆ ಅವರ ನಿವಾಸದಲ್ಲಿ 1 ಕೋಟಿ ರೂ ಮೌಲ್ಯದ ಬಾಂಡ್ ಪೇಪರ್ ಸೇರಿ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿತ್ತು.
ಇನ್ನೂ ದಾಳಿ ಸಮಯದಲ್ಲಿ ಕೆಲವು ಆಸ್ತಿಗಳ ಮಾಹಿತಿ ಲಭಿಸಿದೆ. ಬಾಂಡ್ ಪೇಪರ್ ಇರಿಸಿ ಕೊಂಡಿದ್ದರ ಉದ್ದೇಶದ ಕುರಿತು ತನಿಖೆ ನಡೆಯು ತ್ತಿದೆ. ವಿಕ್ಟರ್ ಸೈಮನ್ ತನಿಖೆಗೆ ಸಹಕರಿ ಸುತ್ತಿಲ್ಲ ಎಂಬ ಒಂದು ಕಾರಣದಿಂದ ಬಂಧಿಸ ಲಾಗಿದ್ದು ಎಂದು ಎಸಿಬಿ ಬೆಂಗಳೂರು ನಗರ ಘಟಕದ ಎಸ್ ಪಿ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದು ಸಧ್ಯ ಹೆಚ್ಚಿನ ವಿಚಾರಣೆಗೆ ಅವರನ್ನು ಮೂರು ದಿನಗಳ ಕಾಲ ವಿಚಾರಣೆಗೆ ತೆಗೆದುಕೊಳ್ಳಲಾಗಿದೆ ವಿಚಾರಣೆ ಮಾಡತಾ ಇದ್ದಾರೆ ಎಸಿಬಿ ಅಧಿಕಾರಿಗಳು