ಹೊಸಪೇಟೆ –
ವಿಶ್ವ ಪ್ರಸಿದ್ಧ ಹಂಪಿಯ ಸಂರಕ್ಷಿತ ಸ್ಮಾರಕದೊಳಗೆ ನಿಯಮ ಮೀರಿ ಪ್ರೀ ವೆಡ್ಡಿಂಗ್ ಫೋಟೊ ಶೂಟ್ ನಡೆದಿದೆ. ಪೊಟೊ ಶೂಟ್ ಮಾಡಿ ಕೆಲವು ದಿನಗಳ ನಂತರ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡ ನಂತರ ಈ ಒಂದು ಶೂಟ್ ಪ್ರಕರಣ ಬೆಳಕಿಗೆ ಬಂದಿದೆ.ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಚಾರ ಗೊತ್ತಾಗಿದೆ ಇಲ್ಲಿ ಚಿತ್ತೀಕರಣ ನಡೆದಿದೆ ಎಂದು.ಪ್ರತಿಯೊಂದು ಸ್ಮಾರಕಗಳ ಬಳಿ ಶಸ್ತ್ರ ಸಜ್ಜಿತ ಸಿಬ್ಬಂದಿಗಳು ಭದ್ರತೆಗೆ ಇದ್ದರೂ ಇದೇಗೆ ಸಾಧ್ಯ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಜನ ಸಾಮಾನ್ಯರು.ಆಂಧ್ರ ಪ್ರದೇಶದ ಜಾಹ್ನವಿ ಮತ್ತು ಸಿದ್ಧಾಂತ ಅವರ ವಿವಾಹಪೂರ್ವ ಫೋಟೊ ಶೂಟ್‌ಗೆ ಸಂಬಂಧಿಸಿದ ವಿಡಿಯೊ ವೈರಲ್ ಆಗಿದೆ.ವಿಜಯಿ ಸ್ಯಾಮಂಡ್ಕೊ ಅವರ ಇನ್‌ಸ್ಟಾಗ್ರಾಂ ಖಾತೆಯಿಂದ ವೈರಲ್ ಆಗಿದೆ. ಒಟ್ಟು 2 ನಿಮಿಷ 49 ಸೆಕೆಂಡಿನ ಈ ವಿಡಿಯೊವನ್ನು 20 ಸಾವಿರಕ್ಕೂ ಅಧಿಕ ಜನ ನೋಡಿ ಈಗಾಗಲೇ ಮೆಚ್ಚಿದ್ದಾರೆ.
ಅಕ್ಟೋಬರ್ 10 ರಿಂದ 15 ರ ನಡುವೆ ಈ ಚಿತ್ರೀಕರಣ ನಡೆಸಲಾಗಿದೆ.ವಿಜಯ ವಿಠಲ ದೇವಸ್ಥಾನದ ಸಪ್ತಸ್ವರ ಮಂಟಪ, ಕಮಲ ಮಹಲ್ ಹಾಗೂ ಮಹಾನವಮಿ ದಿಬ್ಬ ಬಳಿಯಿರುವ ಪುಷ್ಕರಣಿಯಂಥ ಸಂರಕ್ಷಿತ ಸ್ಮಾರಕಗಳಲ್ಲಿ ಚಿತ್ರೀಕರಿಸಿರುವ ವಿಡಿಯೊ. ಹಂಪಿಯ ಪ್ರವಾಸಕ್ಕೆ ಬರುವ ಯಾರೊಬ್ಬರಿಗೂ ಸ್ಮಾರಕದ ಒಳಗಡೆ ಪ್ರವೇಶವಿಲ್ಲ. ಸಪ್ತಸ್ವರ ಹೊರಹೊಮ್ಮಿಸುವ ಕಂಬಗಳನ್ನು ಯಾರೂ ಮುಟ್ಟುವಂತಿಲ್ಲ. ಕಮಲ ಮಹೆಲ್ ಮಂಟಪದ ಮೇಲೆ ಹತ್ತು ಹಾಗಿಲ್ಲ.ಹೀಗಿದ್ದರೂ ಕಂಬಗಳನ್ನು ಹಿಡಿದುಕೊಂಡು ಚಿತ್ರೀಕರಣ ನಡೆಸಲು ಅವಕಾಶ ಆದ್ರೂ ಹೇಗೆ ಚಿತ್ರಿಕರಣ ಮಾಡಿದ್ರು. ಹೇಗೆ ಅಲ್ಲಿ ಶೂಟ್ ಮಾಡಲು ಅವಕಾಶ ಕಲ್ಪಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಜನ ಸಾಮಾನ್ಯರು.
‘ಹಂಪಿಯ ಪ್ರತಿಯೊಂದು ಸ್ಮಾರಕಗಳ ಬಳಿ ಐದಾರು ಜನ ಭದ್ರತಾ ಸಿಬ್ಬಂದಿ ಯಾವಾಗಲೂ ಭದ್ರತೆಗೆ ನಿಯೊಜನೆ.ಸ್ಮಾರಕಗಳಲ್ಲಿ ಮನಬಂದಂತೆ ಓಡಾಡಿ ಚಿತ್ರೀಕರಿಸಿರುವುದಾದರೂ ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನೂ ಪ್ರಭಾವಿ ವ್ಯಕ್ತಿಗಳಾಗಿರಬಹುದು, ಇಲ್ಲವೇ ಇಲ್ಲಿಯ ಸಿಬ್ಬಂದಿ ಹಣ ತೆಗೆದುಕೊಂಡು ಅವಕಾಶ ಕಲ್ಪಿಸಿರಬಹುದು ಎಂಬ ಗುಮಾನೆ ವ್ಯಕ್ತವಾಗಿದೆ.ಹಂಪಿಯಲ್ಲಿ ಯಾವುದಾದರೂ ಸ್ಮಾರಕದ ಬಳಿ ಫೋಟೊ ಶೂಟ್ ಮಾಡಬೇಕಾದರೆ ದಿನಕ್ಕೆ ₹1 ಲಕ್ಷ ಶುಲ್ಕ ನಿಗದಿ ಇದೆ. ನಿಯಮ ಮೀರಿ ಹಂಪಿ ಸ್ಮಾರಕದೊಳಗೆ ಚಿತ್ರೀಕರಣ ಮಾಡಿದವರ ವಿರುದ್ದ ಮತ್ತು ಅವಕಾಶ ಕಲ್ಪಿಸಿ ಕೊಟ್ಟಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಸ್ಮಾರಕ ಪ್ರೀಯರು ಇನ್ನೂ ಈ ಒಂದು ವಿಡಿಯೋ ವೈರಲ್ ಆಗುತ್ತಿದ್ದಂತೆ ಇದರಿಂದ ಎಚ್ಚೇತ್ತುಕೊಂಡಿರುವ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ನಿಯಮ ಉಲ್ಲಂಘಿಸಿ ಹಂಪಿ ಸ್ಮಾರಕಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿದ ಜೋಡಿಗಳ ವಿರುದ್ದ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.ಅವರ ವಿರುದ್ದ ಕ್ರಮ ಕೈಗೊಳ್ಳಲು ಭಾರತೀಯ ಪುರಾತತ್ವ ಇಲಾಖೆ ನಿರ್ಧರಿಸಿದೆ.ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆಯ ಹಂಪಿ ವೃತ್ತದ ಉಪ ಅಧೀಕ್ಷಕ ಕಾಳಿಮುತ್ತು ಅವರು ಪ್ರೀ ವೆಡ್ಡಿಂಗ್ ಶೂಟಿಂಗ್ ನಡೆಸಲು ಅನುಮತಿಯನ್ನು ಪಡೆದುಕೊಂಡಿಲ್ಲ. ನಿಯಮ ಉಲ್ಲಂಘಿಸಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ.ಇನ್ನೂ ಇತ್ತ ಶೂಟಿಂಗ್ ಮಾಡಿದ ಸಮಯದಲ್ಲಿ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದ್ದಿಯ ಮೇಲೂ ದೂರು ದಾಖಲಿಸಿ ಕ್ರಮಕೈಗೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ.