ಬೆಂಗಳೂರು –
ಕೊನೆಗೂ ರಾಜ್ಯ ಸರ್ಕಾರ ನಿನ್ನೆಯಷ್ಟೇ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬೇಸಿಗೆ ರಜೆಯನ್ನು ಘೋಷಣೆ ಮಾಡಿದೆ. ಕರೋನ ಮಹಾಮಾರಿಯ ನಡುವೆ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಶಿಕ್ಷಕರಿಗೆ ಬೇರೆ ಅವಧಿಯ ಲ್ಲಿ ಬೇಸಿಗೆ ರಜೆ ಘೋಷಿಸಲಾಗಿದೆ.ರಜೆ ಘೋಷಣೆ ವಿಚಾರದಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಈ ನಡೆಗೆ ಪ್ರೌಢಶಾಲಾ ಶಿಕ್ಷಕರು ಅಸಮಾಧಾನಗೊಂಡಿದ್ದಾರೆ
ಹೌದು ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಮೇ 1ರಿಂದ ಜೂನ್ 14 ರವರೆಗೆ ಹಾಗೂ ಪ್ರೌಢ ಶಾಲೆಗಳ ಶಿಕ್ಷಕ ರಿಗೆ ಜೂನ್ 15 ರಿಂದ ಜುಲೈ 14 ರವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ.
ಬೇಸಿಗೆ ರಜೆ ನೀಡುವ ವಿಷಯದಲ್ಲಿ ಶಿಕ್ಷಣ ಇಲಾಖೆ ಯ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ.ಹಿಂದೆ ಂದೂ ಈ ರೀತಿ ಆಗಿರಲಿಲ್ಲ.ಈ ವಿಚಾರವನ್ನು ಸರ್ಕಾರ ಮರುಪರಿಶೀಲಿಸಿ ಮಾರ್ಗಸೂಚಿ ಬದಲಿಸ ಬೇಕು ಎಂದು ಪ್ರೌಢ ಶಾಲೆಯ ಶಿಕ್ಷಕರು ಆಗ್ರಹಿಸಿ ದ್ದಾರೆ.
ಇಲ್ಲಿಯವರೆಗೆ ಒಂದೇ ರೀತಿ ಇತ್ತು. ಈ ಬಾರಿಯೂ ಕೋವಿಡ್ ಜೊತೆಗೆ ಬಿಸಿಲಿನ ಸಮಸ್ಯೆ ಇದೆ.ಸದ್ಯ ನಿಗದಿಪಡಿಸಿರುವಂತೆ SSLC ಪರೀಕ್ಷೆಗಳು ಜೂನ್ 21 ರಿಂದ ಆರಂಭಗೊಂಡು ಜುಲೈ 5 ರವರೆಗೆ ನಡೆ ಯಲಿದೆ. SSLC ಪರೀಕ್ಷೆ ಸಂದರ್ಭದಲ್ಲಿ ಎಲ್ಲ ಆರೂ ವಿಷಯಗಳ ಶಿಕ್ಷಕರೂ ಶಾಲೆಗಳಲ್ಲಿ ಹಾಜರಿರಬೇಕಾ ಗುತ್ತದೆ.
ಬಳಿಕ ಮೌಲ್ಯಮಾಪನದಲ್ಲಿ ಭಾಗವಹಿಸ ಬೇಕು. ಪರೀಕ್ಷೆ ಮತ್ತು ಮೌಲ್ಯಮಾಪನ ಕೆಲಸದಲ್ಲಿ ಯೇ ಬೇಸಿಗೆ ರಜೆ ಮುಗಿದು ಹೋಗುತ್ತದೆ ಎಂಬ ಆತಂಕ ದಲ್ಲಿ ಶಿಕ್ಷಕರಿದ್ದಾರೆ. ಇದರಿಂದ ನಮಗೆ ಅನ್ಯಾಯವಾ ಗುತ್ತದೆ ಎನ್ನುವುದು ಪ್ರೌಢ ಶಿಕ್ಷಕರ ಆಕ್ಷೇಪ ವಾಗಿದ್ದು ಹೀಗಾಗಿ ಇದನ್ನು ಅರಿತ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಏನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು