ಬೆಂಗಳೂರು –
ಶಿಕ್ಷಕರ ವರ್ಗಾವಣೆ ವಿಚಾರ ಕುರಿತಂತೆ ಇಂದು ಸಚಿ ವ ಸಂಪುಟದಲ್ಲಿ ಬಹುತೇಕವಾಗಿ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಹೌದು ಮುಖ್ಯಮಂತ್ರಿ ಯಡಿಯೂರ ಪ್ಪ ಆಸ್ಪತ್ರೆಯಿಂದ ಬಿಡುಗಡೆಯ ಬೆನ್ನಲ್ಲೇ ಇಂದು ಸಂಜೆ ನಾಲ್ಕು ಘಂಟೆಗೆ ಸಚಿವ ಸಂಪುಟದ ಮಹತ್ವದ ಸಭೆ ನಡೆಯಲಿದೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತ್ರತ್ವ ದಲ್ಲಿ ಈ ಒಂದು ಸಚಿವ ಸಂಪುಟ ಸಭೆ ನಡೆಯಿಲಿ ದ್ದು ಪ್ರಮುಖವಾಗಿ ಈ ಒಂದು ಸಭೆಯಲ್ಲಿ ರಾಜ್ಯದ ಲ್ಲಿನ ಸಧ್ಯದ ಕೋವಿಡ್ ಚಿತ್ರಣ ಸೇರಿದಂತೆ ಹಲವಾ ರು ವಿಚಾರಗಳು ವಿಸಯಗಳ ಕುರಿತಂತೆ ಚರ್ಚೆ ನಡೆಯಲಿವೆ

ಇವೆಲ್ಲದರ ನಡುವೆ ಸಧ್ಯ ರಾಜ್ಯದಲ್ಲಿ ದೊಡ್ಡ ಸಮ ಸ್ಯೆಯಾಗಿರುವ ಶಿಕ್,ಕರ ವರ್ಗಾವಣೆಯ ವಿಚಾರವು ಕೂಡಾ ಚರ್ಚೆಯಾಗಲಿದೆ ಈಗಾಗಲೇ ವರ್ಗಾವಣೆ ವಿಚಾರ ಕುರಿತಂತೆ ಕಡತಗಳ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿರುವ ಸಚಿವರು ಇಲಾಖೆಯ ಅಧಿಕಾ ರಿಗಳು ಕಡತವನ್ನು ಇಂದೇ ಸಚಿವ ಸಂಪುಟದಲ್ಲಿ ಅನುಮೋದನೆ ಮಾಡಿಕೊಳ್ಳಲಿದ್ದಾರೆ ಎಂಬ ಮಾತು ಗಳು ದಟ್ಟವಾಗಿ ಕೇಳಿ ಬಂದಿವೆ ಈ ಕುರಿತು ಸಂಘದ ಪದಾಧಿಕಾರಿಗಳೇ ಹೇಳಿದ್ದಾರೆ

ಇವತ್ತೇ ರಾಜ್ಯದಲ್ಲಿನ ಶಿಕ್ಷಕರ ವರ್ಗಾವಣೆ ಕಡತಕ್ಕೆ ಅನುಮೋದನೆ ಪಡೆದುಕೊಂಡು ಶೀಘ್ರದಲ್ಲೇ ವರ್ಗಾವಣೆ ಪ್ರಕ್ರಿಯೆಗೆ ಚಾಲನೆಯನ್ನು ನೀಡಲು ಪ್ಲಾನ್ ಮಾಡಿಕೊಳ್ಳಲಾಗಿದೆ ಎಂಬ ಮಾತುಗಳು ಇಲಾಖೆಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ ಇನ್ನೂ ಈಗಾಗಲೇ ಈ ಒಂದು ವಿಚಾರ ಕುರಿತಂತೆ ಗೂಗಲ್ ಮೀಟ್ ನಲ್ಲೂ ಕೂಡಾ ವರ್ಗಾವಣೆ ಕುರಿತಂತೆ ಎಲ್ಲಾ ಪದಾಧಿಕಾರಿಗಳು ಕೂಡಾ ಇಂದು ನಡೆಯುವ ಸಚಿವ ಸಂಪುಟದಲ್ಲಿನ ಕಡತದ ಬಗ್ಗೆಯೇ ಆಗುವ ಮಾತುಗಳನ್ನು ಹೇಳಿದ್ದು ಹೀಗಾಗಿ ಬಲ್ಲ ಮೂಲಗಳ ಮಾಹಿತಿ ಪ್ರಕಾರ ಶಿಕ್ಷಕರ ವರ್ಗಾವಣೆ ಕಡಕ ಇಂದು ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಅನು ಮೋದನೆ ಆಗಲಿದ್ದು ಅನುಮತಿ ಸಿಕ್ಕರೆ ವರ್ಗಾವ ಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಸಿಹಿ ಸುದ್ದಿ ಸಿಗಲಿದೆ