ಉಡುಪಿ
ನಾನು ತಾಯಿ ಆಗಬೇಕು ಎಂದು ಇದ್ದ ಬಿದ್ದ ಗುಡಿಗಳನ್ನು ಅದೇಷ್ಟೋ ಹೆಣ್ಣುಮಕ್ಕಳು ಸುತ್ತುತ್ತಾ, ಹಲವು ಕಠಿಣ ವೃತಗಳನ್ನು ಮಾಡುತ್ತಾರೆ. ಆದರೆ ಅದರಲ್ಲಿ ಕೆಲವರಿಗೆ ಮಕ್ಕಳು ಆಗುತ್ತವೆ, ಇನ್ನೂ ಕೆಲವರಿಗೆ ಮಕ್ಕಳ ಭಾಗ್ಯ ಬರುವುದಿಲ್ಲ. ಆದರೆ ಇಲ್ಲಿ ಓರ್ವ ಮಹಿಳೆ ಆಗ ತಾನೇ ಜಗತ್ತಿಗೆ ಕಾಲು ಇಟ್ಟಿದ ಮಗುವನ್ನು ಕಸದ ತೋಟ್ಟಿಗೆ ಹಾಕಿ ಹೋಗಿದ್ದಾಳೆ. ಹೌದು ಇಂತಹದೊಂದು ಘಟನೆಗೆ ಕಳೆದ ಮೂರು ತಿಂಗಳ ಹಿಂದೆ ಕೃಷ್ಣ ನಗರಿ ಉಡುಪಿಯು ಸಾಕ್ಷಿಯಾಗಿತ್ತು. ಅಂದು ಉಡುಪಿಯ ಜನರು ಈ ತಾಯಿ ಕ್ರೂರ ವರ್ತನೆಗೆ ಹಿಡಿಹಿಡಿಶಾಪ ಹಾಕಿದ್ದರು. ನಗರದ ಸರ್ಕಾರಿ ಆಸ್ಪತ್ರೆಯ ಮುಂದಿನ ಕಸದ ತೊಟ್ಟಿಗೆಯಲ್ಲಿ, ಆಗತ್ತಾನೇ ಜಗತ್ತಿಗೆ ಕಾಲಿಟ್ಟಿತು.
ತಾನೂ ಮಾಡದ ತಪ್ಪಿಗೆ ಹುಟ್ಟಿದ ತಕ್ಷಣವೇ ಶಿಕ್ಷೆಗೆ ಕಂದಮ್ಮ ಗುರಿಯಾಗಿತ್ತು. ಅಂದೂ ಎಂದಿನಂತೆ ತಮ್ಮ ಕೆಲಸಕ್ಕೇ ಬಂದ ಸ್ವಚ್ಚತಾ ಕಾರ್ಮಿಕ ಮಗು ಅಳುವ ಶಬ್ದವನ್ನು ಕೇಳಿದ್ದಾನೆ. ಪುಟ್ಟ ಕಂದಮ್ಮನನ್ನು ನೋಡಿದ ಕೂಡಲೇ ಮುಂದೇನು ಮಾಡಬೇಕು ಎಂದು ದಿಕ್ಕೂ ತೊಚದೆ ಅಂದು, ಸಾಮಾಜಿಕ ಕಾರ್ಯಕರ್ತ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದನು. ಪೊನ್ ಕರೆ ಬರುತ್ತಿದ್ದಂತೆ ಸ್ಥಳಕ್ಕೇ ಭೇಟಿ ನೀಡಿದ್ದ, ನಿತ್ಯಾನಂದರು ಆಗತ್ತಾನೆ ಜನಿಸಿದ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಹತ್ತಿರದಲ್ಲಿದ್ದ, ಬಿ ಆರ್ ಶೆಟ್ಟಿ ಸರ್ಕಾರಿ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಿದರು.
ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ,ಇಪ್ಪತ್ತು ದಿನಗಳ ಚಿಕಿತ್ಸೆಯನ್ನು ಮಗುವಿಗೆ ನೀಡಲಾಯಿತು. ವೈಧ್ಯರ ಚಿಕಿತ್ಸೆ ಮತ್ತು ನಿತ್ಯಾನಂದರ ಸಮಯ ಪ್ರಜ್ಞೆ ಇವೆಲ್ಲವುದರ ನಡುವೆ ಕಂದಮ್ಮ ಆರೋಗ್ಯವಾಗಿ ಗುಣಮುಖವಾದ ನಂತರ ಮಗುವಿಗೆ ಜಿಲ್ಲಾ ಮಕ್ಕಳ ಹಾರೈಕೆ ಕೇಂದ್ರದಲ್ಲಿ ಇಡಲಾಯಿತು. ಅಂದು ಬಹುಶಃ ಸ್ವಚ್ಚತಾ ಕಾರ್ಮಿಕ ಹಾಗೂ ಸಮಾಜ ಕಾರ್ಯಕರ್ತ ನಿತ್ಯಾನಂದ ನಿರ್ಲಕ್ಷ್ಯ ತೋರಿದ್ದರೆ. ಆ ಮಗು ಇಂದು ನಗುವನ್ನೇ ಮರೆಯಬೇಕಾಗಿತ್ತು. ಆದರೆ ಅಂದೂ ಮೂರು ತಿಂಗಳ ಹಿಂದೆ ತಾನೂ ಮಾಡದ ತಪ್ಪಿಗೆ ಕ್ರೂರ ತಾಯಿ ಹೊಟ್ಟೆಯಲ್ಲಿ ಜನ್ಮ ಪಡೆದು ಅನಾಥವಾಗಿದ. ಆ ಮಗುವಿಗೆ ತೊಟ್ಟಿಲು ಶಾಸ್ತ್ರವನ್ನು ಮಾಡಲಾಯಿತು.
ಆದ್ರೆ ಸಂಭ್ರಮಿಸಲು ತಂದೆ ತಾಯಿ ತೊಟ್ಟಿಲ ಬಳಿ ಇರಲಿಲ್ಲ, ರಕ್ತ ಸಂಬಂಧಿಗಳು ಎತ್ತಿ ಮುದ್ದಿಸಲಿಲ್ಲ. ಆದರೇನಂತೆ ಮಾನವೀಯತೆ ಇರುವವರು ಹೆಸರಿಟ್ಟರು, ತೊಟ್ಟಿಯಲ್ಲಿ ಸಿಕ್ಕಿದ ಮಗುವನ್ನು ತೊಟ್ಟಿಲಿಗೆ ಹಾಕಿ ತೂಗಿದರು, ಜೋಗುಳ ಹಾಡಿದರು. ಸರಿ ಸುಮಾರು 3 ತಿಂಗಳ ಹಿಂದೆ ಈ ಮಗು ತೊಟ್ಟಿಯಲ್ಲಿ ಅನಾಥವಾಗಿ ಮಲಗಿತ್ತು. ಹೆತ್ತಮ್ಮನಿಗೇ ಈ ಮಗು ಬೇಡವಾಯ್ತೋ ಅಥವಾ ಸಮಾಜಕ್ಕೆ ಅಂಜಿ ಈ ಮಗುವನ್ನು ಹೀಗೆ ಬಿಟ್ಟು ಹೋಗಿದ್ದಳೋ ಗೊತ್ತಿಲ್ಲ. ಬೆಳ್ಳಂ ಬೆಳಗ್ಗೆ ಕಸ ಗುಡಿಸಲು ಬಂದಿದ್ದ ಯುವಕನಿಗೆ ಈ ಪುಟ್ಟ ಕಂದಮ್ಮನ ಕೂಗು ಕೇಳಿಸಿ ಮಗುವಿನ ಜೀವ ಉಳಿಸಿದ್ದರು. ಈ ಮಗುವಿನ ತೊಟ್ಟಿಲು ಶಾಸ್ತ್ರ ನಡೆದಿದೆ. ಕಾರ್ಯಕ್ರಮಕ್ಕೆ ಬಂದವರೆಲ್ಲ ಮಗುವನ್ನು ಮುದ್ದಿಸಿ, ಎತ್ತಿ ಹಾಡಿಸಿದ್ದಾರೆ. ಮಗು ಬೆಳೆದು ಪ್ರಜ್ವಲಿಸಲಿ ಅಂತ ಮಗುವಿಗೆ ಪ್ರಜ್ವಲಾ ಅಂತ ಹೆಸರಿಡಲಾಗಿದೆ. ಊರವರು ಅವರಿವರು ಸೇರಿಕೊಂಡು ತೊಟ್ಟಿಲಿಗೆ ಶೃಂಗಾರ ಮಾಡಿ ಅದ್ದೂರಿಯಾಗಿ ನಾಮಕರಣ ಮಾಡಿದರು. ವಿವಿಧ ಸಂಸ್ಥೆಗಳ ಸಹಕಾರವೂ ಇದಕ್ಕಿತ್ತು. ಕಾರ್ಯಕ್ರಮ ಸರಳ ಆಗಿದ್ರೂ ಸಂಭ್ರಮ ಮೊಗದಲ್ಲಿ ಎದ್ದು ಕಾಣುತ್ತಿತು. ಒಟ್ಟಾರೆ, ಹೆತ್ತಮ್ಮನೇ ಬೇಡವೆಂದು ತೊಟ್ಟಿಗೆ ಎಸೆದು ಹೋಗಿದ್ದ ಹೆಣ್ಣು ಮಗುವಿಗೆ ಈಗ ದೊಡ್ಡ ಕುಟುಂಬವೇ ಸಿಕ್ಕಂತಾಗಿದೆ.
ತೊಟ್ಟಿಯಲ್ಲಿ ಅಳುತ್ತಾ ಮಲಗಿದ್ದ ಈ ಜೀವಕ್ಕೆ ಹೊಸ ಜೀವನ ಸಿಕ್ಕಿದೆ. ಸಧ್ಯ ಮಗವು ಉಡುಪಿ ಸಮೀಪದಲ್ಲೇ ಇರುವ ಕೃಷ್ಣಾನುಗ್ರಹ ಅನಾಥ ಮಕ್ಕಳ ದತ್ತು ಸ್ವೀಕಾರ ಸಂಸ್ಥೆಗೆ ಹಸ್ತಾಂತರಿಸಿಲಾಗಿದೆ. ತನ್ನಂತಿರುವ ದೇವರ ಮಕ್ಕಳ ಜೊತೆಗೆ ಪ್ರಜ್ವಲಾ ಚೆನ್ನಾಗಿ ಬೆಳೆಯಲಿ, ವಿದ್ಯಾವಂತಳಾಗಿ ಪ್ರಜ್ಚಲಿಸಲಿ ಎನ್ನುವುದೇ ಸುದ್ದಿ ಸಂತೆ ವೇಬ್ ನ್ಯೂಸ್ ನೊಮ ಎಲ್ಲರ ಹಾರೈಕೆ.