ತುಮಕೂರು –
ಕೋವಿಡ್ ಮಹಾಮಾರಿಗೆ ಜಗವೇ ತಲ್ಲಣಗೊಂಡಿ ದ್ದು ಸಾವು ನೋವುಗಳೇ ಹೆಚ್ಚುತ್ತಿದೆ.ಕೊರೊನಾ ಅಟ್ಟಹಾಸಕ್ಕೆ ಇಂದು ದಕ್ಷ ಮಹಿಳಾ ಶಿಕ್ಷಣ ಅಧಿಕಾರಿ ಯೊಬ್ಬರು ರಾಜ್ಯದಲ್ಲಿ ಸಾವಗೀಡಾಗಿದ್ದಾರೆ.ಹೌದು ಶ್ರೀಮತಿ ಕಾಮಾಕ್ಷಿ.ಕೆ.ಎಂ ಮೃತ ಅಧಿಕಾರಿಯಾಗಿ ದ್ದಾರೆ.ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದ ಅವರು ಇಂದು ಮದ್ಯಾಹ್ನ 12 ರ ಸುಮಾ ರಿಗೆ ಕೊನೆ ಉಸಿರೆಳೆದಿದ್ದಾರೆ.ಈ ಹಿಂದೆ ಬಾಗಲಕೋ ಟೆ ಜಿಲ್ಲೆ ಹಾಗೂ ತುಮಕೂರು (ದಕ್ಷಿಣ) ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಗಿ ಕರ್ತವ್ಯ ನಿರ್ವಹಿಸಿ ಅವರ ದಕ್ಷ ಪ್ರಾಮಾಣಿಕ ಆಡಳಿತದಿಂದ ಜಿಲ್ಲೆಗೆ ಹೆಸರಾಗಿದ್ದರು.ಕಳೆದ ವರ್ಷ ವಷ್ಟೇ ಚಿತ್ರದುರ್ಗ ಜಿಲ್ಲೆಯ ಸಿ.ಟಿ.ಇ ಶಿಕ್ಷಣ ಸಂಸ್ಥೆಗೆ ಹಿರಿಯ ಪ್ರವಾಚಕರಾಗಿ ವರ್ಗಾವಣೆಗೊಂಡು ಕೆಲಸ ನಿರ್ವಹಿಸುತ್ತಿದ್ದರು.

ಅಲ್ಲಿಯೂ ಸಹ ಶಿಕ್ಷಕರ ಆನ್‌ಲೈನ್ ನಿಷ್ಟಾ ತರಬೇತಿ ಯ ಜವಾಬ್ದಾರಿಯನ್ನು ಬಹಳ ಅಚ್ಚುಕಟ್ಟಾಗಿ ನಿಬಾ ಯಿಸಿ ಎಲ್ಲ ಶಿಕ್ಷಕರ ಮನದಲ್ಲಿ ನೆಲೆಯಾಗಿ ನಿಂತವ ರಾಗಿದ್ದರು. ದುರಾದೃಷ್ಟವಶಾತ್ ಇಂದು ಕೋರೊನಾ ಮಹಾಮಾರಿಗೆ ಸಿಲುಕಿ ಮರಣ ಹೊಂದಿದ್ದಾರೆ.ಈ ಒಂದು ವಿಚಾರ ಕೇಳಿ ತುಮಕೂರು ಜಿಲ್ಲೆಯ ಎಲ್ಲಾ ಶಿಕ್ಷಕ ಬಳಗದವರು,ಅಧಿಕಾರಿ ವೃಂದದವರು ಕಂಬ ನಿ ಮಿಡಿದಿದ್ದಾರೆ ಅಂತೆಯೇ ತುಮಕೂರು ಜಿಲ್ಲಾ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವೂ ಕೂಡ ಕಂಬನಿ ಮಿಡಿದಿದೆ.

ಅಕಾಲಿಕ ಸಾವನ್ನಪಿದ ಶ್ರೀಮತಿ ಕಾಮಾಕ್ಷಿ ಮೆಡಂ ರವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಅವರ ದುಂಖತಪ್ತ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ಭಗ ವಂತ ಕರುಣಿಸಲಿ ಎಂದು ಫುಲೆ ಶಿಕ್ಷಕಿಯರ ಸಂಘ ವು ಭಾವಪೂರ್ಣ ಶ್ರದ್ದಾಂಜಲಿ ಸಮರ್ಪಿಸುತ್ತಿ ದೆ.ರಾಜ್ಯಾಧ್ಯಕ್ಷರಾದ ಡಾ ಲತಾ ಎಸ್ ಮುಳ್ಳೂರ,

ಸಂಘದ ಪ್ರಧಾನ ಕಾರ್ಯದರ್ಶಿ ಜ್ಯೋತಿ ಹೆಚ್, ಹೇಮಾ ಕೊಡ್ಡನ್ನನವರ ,ಶ್ರೀಮತಿ ಸಾರಿಕಾ ಗಂಗಾ, ಶಿವಮೊಗ್ಗ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ರಾಧಾ, ರಾಜ್ಯ ಸಂಘಟನಾ ಕಾರ್ಯದರ್ಶಿ ಕಲ್ಪನಾ, ಶ್ರೀಮತಿ ಶಮಾ ಪಾಟೀಲ, ಶ್ರೀಮತಿ ಲಕ್ಷ್ಮೀ ದೇವಮ್ಮ, ಶ್ರೀಮತಿ ಶೇವಂತ ಚವ್ಹಾಣ, ಶ್ರೀಮತಿ ಬುವನೇ ಶ್ವರಿ ಪ್ರಧಾನ ಕಾರ್ಯದರ್ಶಿ ಬೀದರ ಜಿಲ್ಲೆ, ರಾಜ್ಯ ಪದಾಧಿಕಾರಿಗ ಳಾದ ಶ್ರೀಮತಿ ಜಯಶ್ರೀ ಬೆಣ್ಣಿ, ರೂಪಾ ಕೆಎನ್, ಅಂಜುಮ್ ಶಬಾನ್,ಶ್ರೀಮತಿ ಲಲಿತಾ ಕ್ಯಾತನ್ನವರ, ಶ್ರೀಮತಿ ಪ್ರೇಮಾ ಹೆಗಡೆ.ಜಿಲ್ಲಾ ಪದಾಧಿಕಾರಿಗಳಾದ ಶ್ರೀಮತಿ ಛಾಯಾ,ಶ್ರೀಮತಿ ಸರಸ್ವತಿ,ಶ್ರೀಮತಿ ಅನ ಸೂಯಾ, ಅಕ್ಕಮಹಾದೇವಿ, ಶ್ರೀಮತಿ ಜಾನಕಿ, ಶ್ರೀಮತಿ ಉಮಾದೇವಿ,ಶ್ರೀಮತಿ ಚಂದ್ರಲೇಖಾ, ಶ್ರೀಮತಿ ಸಾವಿತ್ರಿ ಪಾಟೀಲ, ಸೇರಿದಂತೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿ ಯರ ಸಂಘ(ರಿ) ರಾಜ್ಯಘಟಕ ಧಾರವಾಡದ ಎಲ್ಲಾ ಸರ್ವ ಸದಸ್ಯರು ಅಗಲಿದ ಹಿರಿಯ ದಕ್ಷ ಮಹಿಳಾ ಅಧಿಕಾರಿಗಳಿಗೆ ಭಾವಪೂರ್ಣ ನಮನ ಸಂತಾಪವನ್ನು ಸೂಚಿಸಿದ್ದಾ ರೆ.