ಯಲ್ಲಾಪುರ –
ಕಾರವಾರದ ಯಲ್ಲಾಪೂರ ತಾಲ್ಲೂಕಿನ ಕಿರವತ್ತಿಯ ಸಣ್ಣ ಯಲವಳ್ಳಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಲಲಿತಾ ಟಿ (29)ನಿಧನರಾಗಿದ್ದಾರೆ ಅವರಿಗೆ 10 ದಿನಗಳ ಹಿಂದೆಯಷ್ಟೇ ಸಿಸೇರಿಯನ್ ಮೂಲಕ ಹೆರಿಗೆಯಾಗಿತ್ತು.ಹುಬ್ಬಳ್ಳಿ ಯ ‘ಕಿಮ್ಸ್’ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ಮೂಲಕ ಅವರು ಗಂಡ ಮಗುವಿಗೆ ಜನ್ಮ ನೀಡಿದ್ದರು.ನಂತರ ಮೇ 2 ರಂದು ಆಸ್ಪತ್ರೆ ಯಿಂದ ಬಿಡುಗಡೆಯಾಗಿ ಸಂಬಂಧಿ ಕರ ಮನೆಯಲ್ಲಿ ಉಳಿದು ಮೇ 5ರಂದು ರಾತ್ರಿ ಕಿರವತ್ತಿಗೆ ಬಂದಿದ್ದರು. ಶುಕ್ರವಾರ ರಾತ್ರಿ ಅವರಿಗೆ ಉಸಿರಾಟದ ಸಮಸ್ಯೆ ಕಂಡು ಬಂದ ಕಾರಣ ಶನಿವಾರ ಬೆಳಿಗ್ಗೆ ಯಲ್ಲಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಂತರ ದೇಹದಲ್ಲಿ ಆಮ್ಲಜನಕದ ಪ್ರಮಾಣ ತೀರಾ ಕಡಿಮೆಯಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ದ ‘ಕ್ರಿಮ್ಸ್’ಗೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ದಾಖಲು ಮಾಡಲಾಗಿತ್ತು ಹೋಗಲಾಗಿತ್ತು.ಅಲ್ಲಿ ಅವರಿಗೆ ಸರಿಯಾದ ಸಮಯದಲ್ಲಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಅವರು ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಇನ್ನೂ ಸರಿಯಾದ ಸಮಯಕ್ಕೆ ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡದ ಆಸ್ಪತ್ರೆಯ ವಿರುದ್ಧ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅಲ್ಲದೇ ಘಟನೆಯನ್ನು ಖಂಡಿಸಿದ್ದಾರೆ.

ಇನ್ನೂ ಮೃತರಾದ ಶಿಕ್ಷಕಿಗೆ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರಾದ ಪವಾಡೆಪ್ಪ, ಅಶೋಕ ಸಜ್ಜನ ಗುರು ತಿಗಡಿ, ಎಸ್ ಎಫ್ ಪಾಟೀಲ, ಶರಣು ಪೂಜಾರ, ಬಾಬಾಜಾನ ಮುಲ್ಲಾ, ನಂದಕುಮಾರ ದ್ಯಾಪೂರ, ರಾಜೀವಸಿಂಗ ಹಲವಾಯಿ, ಅಕ್ಬರಲಿ ಸೋಲಾಪುರ,ಶಂಕರ ಘಟ್ಟಿ, ಕಾಶಪ್ಪ ದೊಡವಾಡ ಸಿ ಎಂ ಹೂಲಿ,, ಎಲ್ ಐ ಲಕ್ಕಮ್ಮನವರ ಮಲ್ಲಿಕಾರ್ಜುನ ಉಪ್ಪಿನ. ಕಿರಣ ರಘುಪತಿ, ಹನಮಂತ ಬೂದಿಹಾಳ ಚಂದ್ರಶೇ ಖರ್ ಶೆಟ್ರು, ಶರಣಬಸವ ಬನ್ನಿಗೋಳ,ನಾಗರಾಜ ಕಾಮ ನಹಳ್ಳಿ, ಆರ್ ಎಮ್ ಕಮ್ಮಾರ,ಕೆ ಬಿ ಕುರಹಟ್ಟಿ, ಎಂ ವಿ ಕುಸುಮಾ, ಜೆ ಟಿ ಮಂಜುಳಾ,ರಾಜಶ್ರೀ ಪ್ರಭಾಕ ರ, ಆರ್ ನಾರಾಯಣಸ್ವಾಮಿ ಚಿಂತಾಮಣಿ, ಬಾಬಾ ಜಾನ ಮುಲ್ಲಾ, ರಂಜನಾ ಪಂಚಾಳ ಸುವರ್ಣ ನಾಯ್ಕ ಕೆ ನಾಗರಾಜ, ಬಿ ಎಸ್ ಮಂಜುನಾಥ, ಅಕ್ಕಮಹಾದೇವಿ ನೂಲ್ವಿ,ಆರ್ ನಾರಾಯಣಸ್ವಾಮಿ ಚಿಂತಾಮಣಿ, ಜಿ ಟಿ ಲಕ್ಷ್ಮೀ ದೇವಮ್ಮ ಎಂ ವಿ ಕುಸುಮ,ವಿ ಎನ್ ಕೀರ್ತಿವತಿ, ಜೆ ಟಿ ಮಂಜುಳಾ ಸೇರಿದಂತೆ ಹಲವರು ಸಂತಾಪ ಸೂಚಿಸಿ ಭಾವಪೂ ರ್ಣ ನಮನ ಸಲ್ಲಿಸಿದ್ದಾರೆ.ಅಲ್ಲದೇ ಕೂಡಲೇ ಮೃತ ಶಿಕ್ಷಕಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೇ ಶಿಕ್ಷಕರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ನೀಡಲು ಒತ್ತಾಯ ಮಾಡಿದರು.