ಬೆಂಗಳೂರು –
ರಾಜ್ಯದ ಸರಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ ಬರಲು ಕಾರಣ ಸನ್ಮಾನ್ಯ ಬಸವರಾಜ್ ಹೊರಟ್ಟಿಯವರು ಬಸವರಾಜ್ ಹೊರಟ್ಟಿ ಅವರು 2006..2007ರಲ್ಲಿ ಪ್ರಾಥಮಿಕ ಹಾಗೂಪ್ರೌಢ ಶಿಕ್ಷಣ ಸಚಿವರಾಗಿ ಹಲವಾರು ಐತಿಹಾಸಿಕ ಕಾರ್ಯಗಳನ್ನು ಮಾಡಿದ್ದಾರೆ.ಅದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಗೆ ಹತ್ತಾರು ಉಪಯುಕ್ತ ಕಾರ್ಯಗಳನ್ನು ನೀಡಿದ್ದಾರೆ. ದೇಶದಲ್ಲೇ ಪ್ರಥಮ ಎನ್ನುವಂತೆ, ಪ್ರಾಥಮಿಕ ದಿಂದ ಪದವಿಪೂರ್ವ ಶಿಕ್ಷಣ ವರೆಗೆ ದೈಹಿಕ ಶಿಕ್ಷಣ ಕಡ್ಡಾಯ ಮಾಡಿದ ಕೀರ್ತಿ ಸನ್ಮಾನ್ಯ ಬಸವರಾಜ್ ಹೊರಟ್ಟಿ ಅವರಿಗೆ ಸಲ್ಲುತ್ತದೆ.

ದೈಹಿಕ ಶಿಕ್ಷಣವನ್ನು ಸಮಗ್ರವಾಗಿ ಪರಿಷ್ಕರಿಸಲು ನಿವೃತ್ತ ಪ್ರಾಚಾರ್ಯ ಪ್ರೊ.ಎಲ್ ಆರ್ ವೈದ್ಯನಾಥ ನ್ ನೇತೃತ್ವದಲ್ಲಿ ಸಮಿತಿ ರಚಿಸಿ ಗದುಗಿನ ಡಾ. ಬಸವರಾಜ್ ಧಾರವಾಡ,ಮೈಸೂರು ವಿಶ್ವವಿದ್ಯಾ ಲಯದ ಪ್ರೊ ಶೇಷಣ್ಣ, ಬೆಂಗಳೂರು ವಿದ್ಯಾಲಯದ ಡಾ. ಸುಂದರಾಜ ಅರಸ್ ರಾಷ್ಟ್ರೀಯ ಕ್ರೀಡಾಪಟು ಶಿವಮೊಗ್ಗದ ಸುವರ್ಣ ನಾಗರಾಜ್ ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕಿಯಾದ ರಾಣೆಬೆನ್ನೂರಿನ ಗಿರಿಜಾ ದೇವಿ ದುರ್ಗದಮಠ.ಇವರನ್ನೊಳಗೊಂಡ ಸಮಿತಿ ರಚಿಸಿ.ವರದಿ ನೀಡಲು ಅಂದಿನ ಸರ್ಕಾರ ಆದೇಶಿ ಸಿತ್ತು.

ಕೇವಲ ಆರು ತಿಂಗಳಲ್ಲಿ ಸಮಿತಿಯು ವರದಿ ನೀಡಿದ್ದ ನ್ನು ಅಂದಿನ ಸಚಿವರಾದ ಬಸವರಾಜ್ ಹೊರಟ್ಟಿ ಯವರು ಪರಿಗಣಿಸಿ ಸಚಿವ ಸಂಪುಟದಿಂದ ಒಪ್ಪಿಗೆ ಯನ್ನು ಪಡೆದರು.ಅದರ ಫಲವಾಗಿ ಹಲವಾರು ಸಮಗ್ರ ಬೆಳವಣಿಗೆಗಳು ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಆದವು.ಒಂದನೇ ತರಗತಿಯಿಂದ 10ನೇ ತರಗತಿ ಯವರೆಗೆ ದೈಹಿಕ ಶಿಕ್ಷಣ ಕಡ್ಡಾಯ ವಿಭಾಗವಾರು ಜಿಲ್ಲಾವಾರು ತಾಲೂಕುವಾರು ಅಧಿಕಾರಿ ನೇಮಕ, ಕ್ರೀಡಾ ವೃದ್ಧಿಗೆ ತಾಲೂಕುವಾರು ಜಿಲ್ಲಾವಾರು ಅನುದಾನ ಬಿಡುಗಡೆ ಹೀಗೆ ಹಂತಹಂತವಾಗಿ ದೈಹಿಕ ಶಿಕ್ಷಣದಲ್ಲಿ, ಹಲವಾರು ಬದಲಾವಣೆಗೆ ಬಸವರಾಜ್ ಹೊರಟ್ಟಿಯವರು ನಾಂದಿ ಹಾಡಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಿಗೆ ವೈದ್ಯನಾಥನ್ ವರದಿ ಒಂದು ರೀತಿ ಭಗವದ್ಗೀತೆ, ಬೈಬಲ್,ಕುರಾನ್ ಇದ್ದಂತೆ ಸ್ವಾತಂತ್ರ್ಯ ಪೂರ್ವ ಸ್ವತಂತ್ರ ನಂತರ, ದೈಹಿಕ ಶಿಕ್ಷಣ ಶಿಕ್ಷಕರಿಗೆ ಯಾವುದೇ ರೀತಿಯಾದ ಕಾನೂನು ಚೌಕಟ್ಟು ಸೌಲಭ್ಯಗಳಿಗೆ ಬೇಕಾದ ಮಾನ ದಂಡಗಳು.ನೀತಿ-ನಿಯಮಗಳು.ಇದ್ದಿರಲಿಲ್ಲ. ವೈದ್ಯ ನಾಥನ್ ವರದಿಯಿಂದಾಗಿ ಹಂತ ಹಂತ ವಾಗಿ ದೈಹಿಕ ಶಿಕ್ಷಣ ಕ್ಷೇತ್ರಕ್ಕೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿ ಗೆ ಸಿಗುತ್ತಿರುವ ಸೌಲಭ್ಯಗಳು ಸನ್ಮಾನ ಬಸವರಾಜ್ ಹೊರಟ್ಟಿ ಅವರ ದೂರದೃಷ್ಟಿಯ ಯೋಜನೆಯಿಂದ ತೆಗೆದುಕೊಂಡ ನಿರ್ಣಯಗಳು.ದೈಹಿಕ ಶಿಕ್ಷಕರಿಗೆ ಧ್ವನಿಯೆತ್ತಲು ಯಾವುದೇ ಪುರಾವೆಗಳು ಇದ್ದಿರ ಲಿಲ್ಲ.ಅದರ ಫಲವೇ ದಿನಾಂಕ 21 ರಂದು ನಡೆಯು ವ 148 ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕರ ನೇಮಕ ಕಾರ್ಯ.


ಈ ಹಿಂದೆ ಜಿಲ್ಲಾದೈಹಿಕ ಶಿಕ್ಷಣ ಹುದ್ದೆಗಳು, ತಾಲೂಕ ದೈಹಿಕ ಶಿಕ್ಷಣ,ಹುದ್ದೆಗಳು ವೈದ್ಯನಾಥನ್ ವರದಿಯ ಶಿಫಾರಸ್ಸಿನಂತೆ, ನೇಮಕವಾಗಿದ್ದವು ಆದರೆ ಕಳೆದ ಐದು ವರ್ಷಗಳಿಂದ ಖಾಲಿ ಇದ್ದ ಹುದ್ದೆಗಳಿಗೆ ಬಡ್ತಿ ನೀಡದೆ ಹಿಂದಿನ ಸರಕಾರಗಳು ಕಾಲಹರಣ ಮಾಡಿ ದ್ದವು ಬಸವರಾಜ್ ಹೊರಟ್ಟಿಯವರು ಹಿಂದಿನ ಸರಕಾರಕ್ಕೆ ಹಲವಾರು ಬಾರಿ ಎಚ್ಚರಿಸುತ್ತಾ ಬಂದಿ ದ್ದರು.ಅದರ ಫಲವಾಗಿ, ದೈಹಿಕ ಶಿಕ್ಷಣ ಶಿಕ್ಷಕರಿಗೆ ಗುಡ್ ನ್ಯೂಸ್. ಈ ಶುಭ ಸಂದರ್ಭದಲ್ಲಿ ಸಹಕರಿ ಸಿದ ಎಲ್ಲ ಮಹನೀಯರಿಗೆ ರಾಜ್ಯದ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಿಂದ,ದೈಹಿಕ ಶಿಕ್ಷಣ ವೃತ್ತಿ ಬಾಂಧವರಿಂದ, ಸನ್ಮಾನ್ಯ ಬಸವರಾಜ್ ಹೊರಟ್ಟಿ ಅವರಿಗೆ ವೈದ್ಯನಾಥನ್ ಸಮಿತಿಯ ಸರ್ವ ಸದಸ್ಯರಿಗೆ ಗುಡ್ ನ್ಯೂಸ್ ನೀಡಿದ ಶಿಕ್ಷಣ ಸಚಿವ ರಾದ ಎಸ್ ಸುರೇಶ್ ಕುಮಾರ್ ಅವರಿಗೆ, ನಾಡಿನ ಸಮಸ್ತ ದೈಹಿಕ ಶಿಕ್ಷಣ ಶಿಕ್ಷಕರಿಂದ ಹೃತ್ಪೂರ್ವಕ ಅಭಿನಂದನೆಗಳು