ಕೋಲಾರ –
ಶಿಕ್ಷಕರ ವರ್ಗಾವಣೆಗೆ ನಿನ್ನೆಯಷ್ಟೇ ಸಮಗ್ರ ಮಾರ್ಗಸೂಚಿ ಪ್ರಕಟಗೊಂಡಿದೆ. ಇದರ ಬೆನ್ನಲ್ಲೇ ಈ ಒಂದು ವರ್ಗಾವಣೆಯಲ್ಲಿ ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕಾಗಿ ರಾಜ್ಯದಲ್ಲಿನ ಶಿಕ್ಷಕ ರೊಬ್ಬರು ರಾಜ್ಯಪಾಲರಿಗೆ ದಯಾಮರಣ ಕೋರಿ ಪತ್ರವನ್ನು ಬರೆದಿದ್ದಾರೆ

ಹೌದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ಲೂರ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಡಿ ಶಿವಕುಮಾರ್ ಅವರೇ ದಯಾ ಮರಣ ಕೋರಿ ಪತ್ರ ಬರೆದ ಶಿಕ್ಷಕರಾಗಿದ್ದಾರೆ

ನಾನು ಒಂದು ಕಡೆಗೆ ನನ್ನ ಪತ್ನಿ ಒಂದು ಕಡೆಗೆ ಶಿಕ್ಷಕ ರಾಗಿ ಕಳೆದ ಎಂಟು ವರ್ಷಗಳಿಂದ ಸೇವೆ ಯನ್ನು ಮಾಡತಾ ಇದ್ದೇವಿ ಸಧ್ಯ ಹನ್ನೊಂದು ತಿಂಗಳ ಮಗು ಇದೆ ಈವರೆಗೆ ವರ್ಗಾವಣೆ ಸಿಕ್ಕಿಲ್ಲ ನನ್ನ ಹೆಂಡತಿ ಮಕ್ಕಳನ್ನು ಅಗಲಿ ಇರಲಾರೆ ಹೀಗಾಗಿ ದಯಮಾಡಿ ನನಗೆ ದಯಾಮರಣಕ್ಕೆ ಅವಕಾಶ ಕೊಡಿ ಎಂದು ರಾಜ್ಯಪಾಲರಿಗೆ ಪತ್ರವನ್ನು ಬರೆದಿದ್ದಾರೆ.

ಈ ಒಂದು ಪತ್ರದ ಪ್ರತಿಯನ್ನು ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಕಳಿಸಿಕೊಟ್ಟಿದ್ದಾರೆ. ಇನ್ನೂ ಶಿಕ್ಷಕ ರೊಬ್ಬರು ಈ ಒಂದು ಹಂತಕ್ಕೆ ಬಂದಿದ್ದು ಇವರ ಧ್ವನಿ ಯಾಗಿ ಕೆಲಸ ಮಾಡುತ್ತಿರುವ ಶಿಕ್ಷಕ ಸಂಘಟನೆ ಯ ನಾಯಕರೇ ದಯಮಾಡಿ ಒಮ್ಮೆ ನೋಡಿ ಇವರ ನೋವಿಗೆ ಸ್ಪಂದಿಸಿ