ಕೊಡಗು –
ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿ ಸಧ್ಯ ಮದುವೆ ಯಾದವರು ಮದುವೆ ಮಾಡಿದವರು ಜೈಲಿಗೆ ಹೋಗಿರುವ ಘಟನೆ ಕೊಡಗಿನಲ್ಲಿ ನಡೆದಿದೆ ಕಾನೂನುಬಾಹಿರವಾದ ಬಾಲ್ಯವಿವಾಹ ಪ್ರಕರಣ ಕೊಡಗು ಜಿಲ್ಲೆಯಲ್ಲಿ ನಡೆದಿದ್ದು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆಕೆಗಿಂತ ದುಪ್ಪಟ್ಟು ವಯಸ್ಸಿನ ವರನೊಂದಿಗೆ ಮದುವೆ ಮಾಡಿಸಿಕೊಡಲಾಗಿದೆ. ಕುಶಾಲನಗರದ ಬೈಚನಹಳ್ಳಿಯ ಮಾರಮ್ಮ ದೇವಸ್ಥಾನದಲ್ಲಿ ಈ ವಿವಾಹ ನೆರವೇರಿದ್ದು ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯನ್ನು ಆಕೆಗಿಂತ ಸುಮಾರು ದುಪ್ಟಟ್ಟು ವಯಸ್ಸಿನ ಅಂದರೆ 30 ವರ್ಷದ ಯುವಕನ ಜೊತೆ ಪಾಲಕರು ಮದುವೆ ಮಾಡಿಸಿದ್ದಾರೆ. ಹೀಗಾಗಿ ವರ, ವರನ ತಂದೆ-ತಾಯಿ, ಬಾಲಕಿಯ ತಾಯಿಯನ್ನು ಬಂಧಿಸಲಾಗಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ಕೊಳ್ಳಲಾಗಿದೆ.