ಬೆಂಗಳೂರು –
ಶಿಕ್ಷಕರ ವರ್ಗಾವಣೆಯ ವಿಚಾರ ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಯಾಗುತ್ತಿದೆ. ಅದರಲ್ಲೂ ಸರಕಾರದ ವರ್ಗಾವಣೆ ನೀತಿಯಿಂದ ನೊಂದ ಶಿಕ್ಷಕರು ಸಾಮಾಜಿಕ ತಾಣದಲ್ಲಿ ಬರೆದಿರುವ ಪತ್ರವಿದು.ಇದನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ. ಶಿಕ್ಷಕರ ಸಂಘದ ವಿರುದ್ಧ ತೀವ್ರ ಅಸಮಾಧಾನ ಇಲ್ಲಿ ವ್ಯಕ್ತವಾಗಿದ್ದು ಒಂದು ಆರೋಗ್ಯಕರ ಚರ್ಚೆಗೆ ಇದು ನಾಂದಿಯಾಗಲಿ ಎಂಬ ಕಾಳಜಿ ಸುದ್ದಿ ಸಂತೆ ಯದ್ದು.
ಸದಾ ಸಮಸ್ಯೆಗಳನ್ನು ಜೀವಂತವಾಗಿಡುತ್ತಿರುವ ಸಂಘದ ನಡೆ ಖಂಡಿಸಿ 2021ನೇ ಸಾಲಿನ ಸದಸ್ಯತ್ವ ಶುಲ್ಕ ಕಡಿತಗೊಳಿಸದಿರಲು ಶಿಕ್ಷಕರ ದಿಟ್ಟ ನಿರ್ಧಾರ
ಕಳೆದ 10-15 ವರ್ಷಗಳಿಂದ ಪಾರದರ್ಶಕ ಮತ್ತು ಪ್ರಾಮಾಣಿಕ ಲೆಕ್ಕಾಚಾರಗಳಿಲ್ಲ ಪ್ರಾಮಾಣಿಕವಾಗಿ ಇವರಿಗೆ ಸದಸ್ಯತ್ವ ಶುಲ್ಕ ಕಡಿತಗೊಳಿಸಿದರೂ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕ್ತಾರೆ
1-8 ಗೆ ಹೋಗಿ 1-5 ಗೆ ಹಿಂಬಡ್ತಿ ಆದರೆ ಇವರು ಮಾತ್ರ ನಿವೃತ್ತಿಯಾದರೂ ರಾಷ್ಟ್ರಮಟ್ಟದ ಹುದ್ದೆಗಳು ನಿವೃತ್ತ ನೌಕರರ ಸಂಘದಲ್ಲೂ ಮೆರೆತಾರೆ
ವರ್ಷಕ್ಕೊಮ್ಮೆ ವರ್ಗಾವಣೆ ಪ್ರಕ್ರಿಯೆ ಇಲ್ಲ ಆದರೆ ಇವರು ತಮಗೆ ಬೇಕಾದ ಜಿಲ್ಲೆಗೆ ನಿಯೋಜನೆ ಹೋಗ್ತಾರೆ ಹೋರಾಟ ಇಲ್ಲ ಮತ್ತು ಅನೇಕ ಸಂಘಟನೆಗಳ ಹುಟ್ಟಿಗೆ ಕಾರಣ ಆದರೆ ವಿರೋಧಿಸುತ್ತಾರೆ ಅವರಿಗೆ ಸಂಘ ಬಿಟ್ಟು ಹೋಗಲು ಪ್ರೇರೇಪಿಸ್ತಾರೆ ಹಿಂಬಾಲಕರಿಗೆ ಹುದ್ದೆ,ಪ್ರಶಸ್ತಿ ಕೊಡಿಸ್ತಾರೆ ಕೆಲವರಂತೂ ಶಿಕ್ಷಕರ ಸಮಸ್ಯೆಗಳಿಗಿಂತ ಬೇನಾಮಿ ಬಡ್ಡಿ ದಂಧೆ ಬೇನಾಮಿ ಬ್ಯುಸಿನೆಸ್, ಬೇನಾಮಿ ಶಾಲೆ, ಬೇನಾಮಿ ರಿಯಲ್ ಎಸ್ಟೇಟ್ ಮಾಡ್ತಿರೋದನ್ನು ಕಣ್ಣಾರೆ ಕಂಡಿದ್ದೇವೆ
ಎನ್ ಪಿ ಎಸ್ ವಿರುದ್ಧ ಹೋರಾಟ ಮಾಡಿದರೆ ಶಿಕ್ಷಕರನ್ನು ಎತ್ತಿಕಟ್ಟಿ ಅಲ್ಲಿಯೂ ಒಂದು ಸಂಘ ಮಾಡಿಸ್ತಾರೆ ಎಲ್ಲ ನೌಕರರಿಗೂ ವೇತನ ಏರಿದರೂ ಅದು ನಮ್ಮದೇ ಸಾಧನೆ ಅಂತಾರೆ ಆದರೆ SSA ದವರಿಗೆ ವೇತನ ಮಾತ್ರ ಸರಿಯಾಗಿ ದೊರೆಯುತಿಲ್ಲ
ಸಂಘಕ್ಕೊಂದು ಸ್ವಂತ ಕಟ್ಟಡ, ಸ್ವಂತ ವಿದ್ಯಾಭವನ ಸ್ವಂತ ಕಚೇರಿಗಳಿಲ್ಲ.ಆದರೆ ಕೆಲವರಿಗೆ ದೊಡ್ಡ ದೊಡ್ಡ ಮನೆಗಳು ಕಾರುಗಳಿವೆ 2025 ಮಾರ್ಚ ರೊಳಗೆ ನಿವೃತ್ತಿಯಾಗುವ ಶಿಕ್ಷಕರ ದಿಟ್ಟ ನಿರ್ಧಾರ
ಇಷ್ಟು ವರ್ಷಗಳ ಕಾಲ ಇವರಿಗೆ ಸದಸ್ಯತ್ವ ಶುಲ್ಕ ಕೊಟ್ಟಿದ್ದು ಸಾಕು,ನಿವೃತ್ತಿ ಅಂಚಿನಲ್ಲಿದ್ದೇವೆ ,2025 ರ ಚುನಾವಣೆಯಲ್ಲಿಯೂ ನಾವು ಮತದಾರರಾಗಿರಲ್ಲ ಯಾಕೆಂದರೆ ನಾವು ನಿವೃತ್ತಿಯಾಗಿರುತ್ತೇವೆ ಜೊತೆಗೆ ಕಡಿತಗೊಂಡ ನಮ್ಮ ಸ್ವಂತ ವೇತನದಲ್ಲಿನ 200 ರೂಗಳಿಗೆ ಸ್ವಾಭಿಮಾನ ಬೇಡವೇ? ಹೋರಾಟಗಳೇ ಇಲ್ಲ ಬರೀ ಹೊಂದಾಣಿಕೆ, ಸ್ನಾತಕೋತ್ತರ ಡಿಗ್ರಿ ಮಾಡಿ ನಿವೃತ್ತಿಗೆ ಸಮೀಪ ಇದ್ರೂ ಸರಿಯಾಗಿ ಬಡ್ತಿ ಇಲ್ಲ, ಅದಕ್ಕೆ ಈ ವರ್ಷದಿಂದ ನಮ್ಮ ಸದಸ್ಯತ್ವ ಶುಲ್ಕ ಕಡಿತಗೊಳಿಸಲ್ಲವೆಂದು ನಿರ್ಧಾರ ಮಾಡಿರುತ್ತೇವೆ
ಎಲ್ಲರಿಗೂ ಮಾದರಿ ಅನ್ನುವಂತೆ ತಮ್ಮ 6-8 ಪದವೀದರ ಶಿಕ್ಷಕರೆಂದು ನೇಮಕಗೊಂಡ ಶಿಕ್ಷಕರ ಹಿತಕಾಯಲು ಸ್ವತಃ ಹೋರಾಡಿ, ಸ್ವಂತ ಬೈಲಾ ಸ್ವಂತ ಸಂಘ ಅಂತಾ ಮಾಡಿ ನ್ಯಾಯಾಲಯ ದಲ್ಲಿಯೂ ತಮ್ಮ ಪರವಾಗಿ ತೀರ್ಪು ಬರಲು ದಿಟ್ಟ ಹೋರಾಟ ಹಾಗೂ ಶಿಕ್ಷಕರ ಹಿತಕಾಯುತ್ತಿರುವ ಪದವೀದರ ಶಿಕ್ಷಕರು ಕೂಡಲೇ KSPSTA ಗೆ ಸದಸ್ಯತ್ವ ಶುಲ್ಕ ಕಡಿತ ಸ್ಥಗಿತಗೊಳಿಸಲು ಈಗಾಗಲೇ ಲಿಖಿತ ಮನವಿ ಸಲ್ಲಿಸಿದ್ದಾರೆ
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರ ಪ್ರತಿಭಟನೆ 2017ರಲ್ಲೇ ಸಿ&ಆರ್ ನಿಯಮಾವಳಿ ಗಳು ಇವರ ಉಪಸ್ಥಿತಿಯಲ್ಲಿಯೇ ಅಂತಿಮ ಗೊಂಡು ಪ್ರಕಟಗೊಂಡು ನಮಗೆ ಹಿಂಬಡ್ತಿ ದೊರೆತರೂ ಗಟ್ಟಿಯಾಗಿ ಹೋರಾಟ ಮಾಡದ ಸಂಘದ ನಡೆಯನ್ನು ಖಂಡಿಸಿ ಅವರು ಕೂಡಾ ಸದಸ್ಯತ್ವ ಶುಲ್ಕ ಕಡಿತಗೊಳಿಸದಿರಲು ನಿರ್ಧಾರ
ದೈಹಿಕ ಶಿಕ್ಷಕರ ವಿಷಯದಲ್ಲಿ ಮಲತಾಯಿ ಧೋರಣೆ ಬಡ್ತಿ ಇಲ್ಲ, ಪ್ರಭಾರಿ ಇಲ್ಲ, ಹುದ್ದೆಗಳಿಲ್ಲ ಹೀಗೆ ಅವರು ಕೂಡಾ ಸ್ವಂತ ಸಂಘ ಮಾಡಿಕೊಂಡಿದ್ದಾರೆ
ತಮ್ಮ ಹುದ್ದೆ ಬೇಕು, ಕಾರು ಬೇಕು, ಡೀಸೆಲ್ ಬೇಕು ಅದಕ್ಕೆ ನಮ್ಮ ದುಡ್ಡು ಬೇಕು ಆದರೆ ಲೆಕ್ಕಾಚಾರ ಕೊಡಲ್ಲ ವರ್ಗಾವಣೆ ಇಲ್ಲ ಇಂತವರಿಗೆ ದೊಡ್ಡ ದಿಕ್ಕಾರ ಲೆಕ್ಕ ಕೊಡಿ ಅಭಿಯಾನ ಶುರುವಾದರೂ ಆಗಬಹುದು
ದೊಡ್ಡದಾಗಿ ಅಚ್ಚುಕಟ್ಟಾಗಿ ಮತಾನಾಡುತ್ತಾ ತಮ್ಮನ್ನು ಇಂದ್ರ ಚಂದ್ರ ಎಂದು ಹೊಗಳುವ ಹಿಂಬಾಲಕರನ್ನು ಇಟ್ಟುಕೊಂಡು ತಾವು ಹುದ್ದೆಯಲ್ಲಿ ಮುಂದುವರೆಯಲಿ ಆದರೆ ಈ ನಡೆ ಸಂಘದ ಅವನತಿಗೆ ಕಾರಣ ಆಗುತ್ತೆ ಅಂತಾ ಮರೆಯದಿರಲಿ
ಇಂತಿ ನೊಂದ ಶಿಕ್ಷಕರು