ಮೊಬೈಲ್ ಟಾವರ್ ಏರಿ ಪ್ರತಿಭಟನೆಗೆ ಕುಳಿತ ದಂಪತಿ
ಹಾಸನ –
ಸಾಮಾನ್ಯವಾಗಿ ಯಾವುದೇ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕುಳಿತುಕೊಂಡು ಇಲ್ಲವೇ ಪಾದಯಾತ್ರೆ ಮಾಡುತ್ತಾ ಪ್ರತಿಭಟನೆ ಮಾಡಿ ಮನವಿ ಕೊಡೊದು ಇಲ್ಲವೇ ಆಮರಣ ಉಪವಾಸ ಸತ್ಯಾಗ್ರಹ ಮಾಡೊದನ್ನು ಕೇಳಿದ್ದೇವೆ ನೋಡಿದ್ದೇವೆ. ಆದರೆ ಇಲ್ಲೊಂದು ಕುಟಂಬ ಮೊಬೈಲ್ ಟಾವರ್ ಏರಿಕೊಂಡು ಪ್ರತಿಭಟನೆ ಮಾಡಿದೆ.
ಹೌದು ಇಂಥಹದೊಂದು ಘಟನೆಗೆ ಸಾಕ್ಷಿಯಾಗಿದ್ದು ಹಾಸನ ಜಿಲ್ಲೆ. ಹಾಸನನ ಜಿಲ್ಲೆಯ ಬೇಲೂರಿನ ನೆಹರು ನಗರದಲ್ಲಿ ಈ ಒಂದು ಘಟನೆ ನಡೆದಿದೆ. ಆಶ್ರಯ ಮನೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಗ್ರಾಮದ ದಂಪತಿಗಳಿಬ್ಬರು ಗ್ರಾಮದಲ್ಲಿನ ಮೊಬೈಲ್ ಟಾವರ್ ಹತ್ತಿಕೊಂಡು ಪ್ರತಿಭಟನೆ ಮಾಡಿದ್ರು. ಬೆಳ್ಳಂ ಬೆಳಿಗ್ಗೆ ಟವರ್ ಏರಿ ಕುಳಿತ ದಂಪತಿ ತಮಗೆ ಮನೆ ಹಂಚಿಕೆ ವಿಚಾರದಲ್ಲಿ ಅನ್ಯಾಯ ಮಾಡುತ್ತಿದ್ದಾರೆಂದು ದೂರಿದರು. ನಾರಾಯಣಪುರದ ಮೋಹನ್ ರಾಜ್ ಚಂದನ ದಂಪತಿ ಯೇ ಮೊಬೈಲ್ ಟಾವರ್ ಹತ್ತಿಕೊಂಡು ಪ್ರತಿಭಟನೆ ಮಾಡಿದ್ದಾರೆ.
ಮನೆಗಾಗಿ ಕಳೆದ ಹಲವಾರು ವರುಷಗಳಿಂದ ಅರ್ಜಿ ಹಾಕಿದ್ದು ಆದರೂ ಕೂಡಾ ಈವರೆಗೆ ಯಾರು ಸ್ಪಂದಿಸಿಲ್ಲ ಎಂದರು.ಇನ್ನೂ ಈ ಹಿಂದೆ ಬಂಟೇನಹಳ್ಳಿ ಗ್ರಾಪಂ ನಿಂದ ಮನೆ ನೀಡುವ ಭರವಸೆಯನ್ನು ಕೂಡಾ ನಮಗೆ ನೀಡಿದ್ದರು. ಇದಕ್ಕಾಗಿ ಗ್ರಾಮಸ್ಥರಿಂದ ತಲಾ 1 ಸಾವಿರ ರೂ.ಹಣ ತಗೆದುಕೊಂಡಿದ್ದಾರೆಂದು ದೂರಿದರು. ಹೀಗಾಗಿ ನಮಗೆ ನ್ಯಾಯಬೇಕು ಎಂದು ಮುಂಜಾನೆಯಿಂದ ಟವರ್ ಏರಿರುವ ದಂಪತಿ ನಮ್ಮ ಬೇಡಿಕೆ ಈಡೇರಿಸುವವರೆಗೂ ಕೆಳಗೆ ಇಳಿಯಲ್ಲ ಎಂದು ಪಟ್ಟು ಹಿಡಿದರು.
ಗ್ರಾಮಸ್ಥರು ಕುಟುಂಬದವರು ಹೀಗೆ ಯಾರು ಹೇಳಿದರು ಮನವಿಗೂ ಸ್ಪಂದಿಸಲಿಲ್ಲ ಪ್ರತಿಭಟನಾಕಾರರು. ಕೊನೆಗೆ ವಿಷಯ ತಿಳಿದ ತಹಶೀಲ್ದಾರ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೇ ಆಗಮಿಸಿ ಟಾವರ್ ಮೇಲೆ ಕುಳಿತುಕೊಂಡು ಪ್ರತಿಭಟನೆ ಮಾಡುತ್ತಿದ್ದ ದಂಪತಿಗಳಿಗೆ ಖಡಕ್ ವಾರ್ನಿಂಗ್ ಮಾಡಿದ್ರು. ಟಾವರ್ ಹತ್ತೊದು ಕಾನೂನು ಬಾಹಿರವಾಗುತ್ತದೆ ನಿಮ್ಮ ಬೇಡಿಕೆ ಏನೇ ಇರಲಿ ಸ್ಥಳಕ್ಕೇ ನಾವು ಬಂದದ್ದೇವೆ ದಯಮಾಡಿ ಕೆಳಗಡೆ ಬನ್ನಿ ಇಲ್ಲವಾದರೆ ನಿಮ್ಮ ಮೇಲೆಯೇ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳುತ್ತಿದ್ದಂತೆ ಮಾತಿಗೆ ಮಣಿದ ದಂಪತಿಗಳಿಬ್ಬರು ಕೂಡಲೇ ಕೆಳಗೆ ಇಳಿದು ಬಂದರು. ನಂತರ ಇವರ ಬೇಡಿಕೆಯನ್ನು ಸ್ಥಳದಲ್ಲಿದ್ದ ತಹಶೀಲ್ದಾರ ಮತ್ತು ಇನ್ನಿತರ ಕಂದಾಯ ಇಲಾಖೆಯ ಅಧಿಕಾರಿಗಳು ಅಲಿಸಿ ಶೀಘ್ರಮದಲ್ಲಿಯೇ ದಂಪತಿಗಳಿಗೆ ಮನೆಯನ್ನು ನೀಡುವ ಭರವಸೆಯನ್ನು ನೀಡಿದರು. ಇನ್ನೂ ಬೆಳ್ಳಂ ಬೆಳಿಗ್ಗೆ ದಂಪತಿಗಳು ಮೊಬೈಲ್ ಟಾವರ್ ಹತ್ತಿದ್ದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು ಗ್ರಾಮಸ್ಥರು ಕುಟುಂಬದಸ್ಥರು ಆತಂಕಗೊಂಡಿದ್ದರು. ಕೊನೆಗೆ ತಹಶೀಲ್ದಾರ ಮತ್ತು ಪೊಲೀಸರು ಸ್ಥಳಕ್ಕೇ ಬಂದು ಟಾವರ್ ಮೇಲೆ ಕುಳಿತಿದ್ದ ದಂಪತಿಗಳನ್ನು ಕೆಳಗಿಳಿಸಿ ಪ್ರತಿಭಟನೆಗೆ ಇತಿಶ್ರೀ ಹಾಡಿದರು.