ವಿಜಯಪುರ –
ಜಿ ಓ ಸಿ ಸಿ ಬ್ಯಾಂಕ್ ವಿಜಯಪುರ (ರಾಜ್ಯ ಸರ್ಕಾರಿ ನೌಕರರ ಬ್ಯಾಂಕ್) ನೂತನ ಅಧ್ಯಕ್ಷರಾಗಿ ಅರವಿಂದ ಹೂಗಾರ (ಕೃಷಿ ಇಲಾಖೆ)ಉಪಾಧ್ಯಕ್ಷರಾಗಿ ಆನಂದ ಬಿರಾದಾರ(ಆರೋಗ್ಯ ಇಲಾಖೆ) ಇತ್ತೀಚೆಗೆ ರಾಜೀ ನಾಮೆ ನೀಡಿದ ಪ್ರಯುಕ್ತ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ಜರುಗಿತು.
ಸದಾ ಅಧಿಕಾರಕ್ಕಾಗಿ ಕಚ್ಚಾಡುವ ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳ ಸರ್ಕಾರಿ ನೌಕರರ ಸದಸ್ಯತ್ವ ಹೊಂದಿದ ಶತಮಾನ ಕಂಡ ಬ್ಯಾಂಕಿನ ಅಧ್ಯಕ್ಷರ ಚುನಾವಣೆ ಇಂದು ಜರುಗಿತು.ಒಟ್ಟು 15 ನಿರ್ದೇಶಕ ಮಂಡಳಿ ಇರುವುದು. ಅದರಲ್ಲಿ ಶಿಕ್ಷಣ ಇಲಾಖೆಯ 8 ನಿರ್ದೇಶಕರು(ಶಿಕ್ಷಕರು) ಇರುವರು.
ಇನ್ನುಳಿದ ಎಲ್ಲಾ ಇಲಾಖೆ ಸೇರಿ 7 ನಿರ್ದೇಶಕರು ಇರುವರು. ಒಟ್ಟು ಸದಸ್ಯರು 24000 ಅದರಲ್ಲಿ 16000 ಶಿಕ್ಷಣ ಇಲಾಖೆ ಸೇರಿದವರು.
8 ಜನ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿರುವ ಶಿಕ್ಷಕರು ಪರಸ್ಪರ ಕಚ್ಚಾಡಿ,ಪಂಗಡವಾದ ಪ್ರಯುಕ್ತ ಕೃಷಿ ಇಲಾಖೆಯ ಅರವಿಂದ ಹೂಗಾರ ಅಧ್ಯಕ್ಷರಾಗಿ ಆಯ್ಕೆಯಾಗಿರುವರು.ಉಪಾಧ್ಯಕ್ಷರಾಗಿ ಆನಂದ ಬಿರಾದಾರ ಆಯ್ಕೆಯಾಗಿರುವರು.
ಬಹುಸಂಖ್ಯೆಯ ನಿರ್ದೇಶಕ ಹೊಂದಿದ ಶಿಕ್ಷಣ ಇಲಾಖೆಯಿಂದ ಕೈ ತಪ್ಪಲು ಶಿಕ್ಷಕರಿಂದ ಆಯ್ಕೆ ಯಾದ 8 ಜನ ನಿರ್ದೇಶಕರೇ ಕಾರಣಿಕರ್ತರು.ಇದು ಅವಳಿ ಜಿಲ್ಲೆಯ ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ
ಶಿಕ್ಷಣ ಇಲಾಖೆಯ ಒಂದು ಗುಂಪಿನ ಪರವಾಗಿ ಶಿಕ್ಷಕ ಸಂಘದ ರಾಜ್ಯ ನಾಯಕರು ನೇತೃತ್ವ ವಹಿಸಿದ್ದರು. ರಾಜ್ಯ ಶಿಕ್ಷಕ ಸಂಘದ ನೇತೃತ್ವದ ತಂಡಕ್ಕೆ ಸೋಲುಂ ಟಾಗಿದೆ. ಸ್ಥಳೀಯ ನಾಯಕರಿಗೆ ಜಯವಾಗಿದೆ.