ಚಿಕ್ಕಬಳ್ಳಾಪೂರ –
ಬರೊಬ್ಬರಿ ಒಂದೂವರೆ ವರ್ಷದ ನಂತರ ರಾಜ್ಯ ದಲ್ಲಿ ಶಾಲೆಗಳು ಆರಂಭವಾಗಿವೆ. ಮಹಾಮಾರಿ ಕೋವಿಡ್ ನ ನಡುವೆ ಮಕ್ಕಳು ಶಾಲೆಯತ್ತ ಮುಖ ವನ್ನು ಮಾಡಿದ್ದು ಇನ್ನೂ ಇವರಿಗಿಂತ ಶಿಕ್ಷಕರು ಮೊದಲೇ ಶಾಲೆಗೆ ಹೋಗುತ್ತಿದ್ದು ಇದೇಲ್ಲ ಒಂದು ವಿಚಾರವಾದರೆ ಇನ್ನೂ ಪ್ರಮುಖವಾಗಿ ಶಾಲೆಗಳು ಆರಂಭಗೊಂಡ ಬೆನ್ನಲ್ಲೆ ದೂರನ್ನು ನೀಡಲಾಗಿದೆ.
ಹೌದು ಈಗಷ್ಟೇ ಶಾಲೆಗಳು ಆರಂಭಗೊಂಡಿದ್ದು ಇದರ ಬೆನ್ನಲ್ಲೇ ಕೆಲವೊಂದಿಷ್ಟು ವಿಚಾರಗಳ ಕುರಿತಂತೆ ಸಾರ್ವಜನಿಕರು ಇಲಾಖೆಯ ಮೇಲಾಧಿ ಕಾರಿಗಳಿಗೆ ದೂರನ್ನು ನೀಡಿದ್ದಾರೆ.ಹೌದು ಶಾಲೆ ಆರಂಭಗೊಂಡರು ಕೂಡಾ ಶಾಲೆಗೆ ಶಿಕ್ಷಕರು ಸರಿ ಯಾಗಿ ಬರುತ್ತಿಲ್ಲ ಸಮಯಕ್ಕೆ ತಕ್ಕಂತೆ ಬರುತ್ತಿಲ್ಲ ಶಾಲೆಗಳನ್ನು ಸರಿಯಾಗಿ ಸ್ವಚ್ಚಗೊಳಿಸುತ್ತಿಲ್ಲ ಶುಚಿತ್ವ ಕಾಪಾಡುತ್ತಿಲ್ಲ ಇದರೊಂದಿಗೆ ಇನ್ನೂ ಕೆಲವು ಸಮಸ್ಯೆಗಳ ಕುರಿತಂತೆ ಸಾರ್ವಜನಿಕರು ಮೇಲಾಧಿ ಕಾರಿಗಳಿಗೆ ದೂರನ್ನು ನೀಡಿದ್ದಾರೆ.
ಚಿಕ್ಕಬಳ್ಳಾಪೂರ ಜಿಲ್ಲಾ ಡಿಡಿಪಿಐ ಅವರಿಗೆ ಈ ಕುರಿತಂತೆ ಲಿಖಿತವಾದ ದೂರನ್ನು ನೀಡಿದ್ದಾರೆ. ಈ ಒಂದು ದೂರು ಬರುತ್ತಿದ್ದಂತೆ ಜಿಲ್ಲೆಯ ಎಲ್ಲಾ ಬಿಇಓ ಗಳಿಗೆ ಖಡಕ್ ಆಗಿ ಸೂಚನೆಯನ್ನು ನೀಡಿ ಈ ಕುರಿ ತಂತೆ ಕೂಡಲೇ ಪರಿಶೀಲನೆ ಮಾಡಿ ಸೂಕ್ತವಾದ ಮಾಹಿತಿಯನ್ನು ಕೈಗೊಂಡು ಕೂಡಲೇ ವರದಿಯನ್ನು ನೀಡುವಂತೆ ಆದೇಶವನ್ನು ಮಾಡಿದ್ದಾರೆ. ಏನೇ ಆಗಲಿ ಶಾಲೆ ಆರಂಭಗೊಂಡರು ಶಾಲೆಗೆ ಶಿಕ್ಷಕರು ಹೋಗದಿದ್ದರೆ ಖಂಡಿತವಾಗಿಯೂ ತಪ್ಪು ಆದರೆ ಶಾಲೆಗಳಿಗೆ ಶಿಕ್ಷಕರು ಬರುತ್ತಿದ್ದರೂ ಕೂಡಾ ವಿನಾಕಾರಣ ದೂರನ್ನು ನೀಡಿದ್ದರೆ ಖಂಡಿತವಾಗಿ ಯೂ ತಪ್ಪು ಒಟ್ಟಾರೆ ಈಗಷ್ಟೇ ಶಾಲೆಗಳು ಆರಂಭ ಗೊಂಡಿದ್ದು ಶಿಕ್ಷಕರು ಮತ್ತು ಸಾರ್ವಜನಿಕರ ಸಹಕಾರ ಈ ಒಂದು ವಿಚಾರದಲ್ಲಿ ಅವಶ್ಯಕವಾಗಿದೆ.