ಬೆಂಗಳೂರು –
ದಸರಾ ರಜೆ ಮುಗಿದ ಹಿನ್ನೆಲೆಯಲ್ಲಿ ನಾಳೆಯಿಂದ ಮತ್ತೆ ಶಾಲೆಗಳು ಆರಂಭವಾಗಲಿವೆ.ಹೌದು ಶಾಲೆಗಳು ಆರಂಭ ಆಗಲಿದ್ದು ಇದು ಒಂದು ವಿಚಾರವಾದರೆ ಇನ್ನೂ ಶಿಕ್ಷಕರು ಕೆಲವು ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಕರೆ ನೀಡಿದ್ದಾರೆ. ಹೌದು ಪದವೀಧರ ಶಿಕ್ಷಕರ ಸಮಸ್ಯೆ, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಸೇವಾ ವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಆಗ್ರಹಿಸಿ ಅಸಹಕಾರ ಚಳುವಳಿ ನಡೆಸಲು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿರ್ಧರಿಸಿದೆ.
ಹೌದು ಈಗಾಗಲೇ ಅಕ್ಟೋಬರ್ 4 ರಿಂದ ತರಬೇತಿ ಬಹಿಷ್ಕಾರ ಮುಂದುವರಿಸಿರುವ ಪ್ರಾಥಮಿಕ ಶಾಲಾ ಶಿಕ್ಷಕರು ಇದೇ ನಾಳೆಯಿಂದ ಅಂದರೆ 21 ಮತ್ತು 29ರಂದು ಕಪ್ಪ ಪಟ್ಟಿ ಧರಿಸಿ ಶೈಕ್ಷಣಿಕ ಚಟುವಟಿಕೆ ನಿರ್ವಹಿಸಲಿದ್ದಾರೆ. ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಅ. 30 ರಿಂದ ನ. 10 ರವರೆಗೆ ಮಧ್ಯಾಹ್ನದ ಬಿಸಿಯೂಟ ಮಾಹಿತಿ ಅಪ್ ಡೇಟ್ ಮಾಡದಿರಲು 11ರಿಂದ 18ರವರೆಗೆ ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ (ಎಸ್‌ಎಟಿಎಸ್) ಪೋರ್ಟಲ್ ನಲ್ಲಿ ಮಾಹಿತಿ ಅಪ್‌ಡೇಟ್ ಮಾಡದಿರಲು ಸಂಘ ನಿರ್ಧರಿ ಸಿದೆ.ಆ ಬಳಿಕವೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯ ಮಟ್ಟದಲ್ಲಿ ರ‍್ಯಾಲಿ,ಧರಣಿ ಸತ್ಯಾಗ್ರಹ,ತರಗತಿ ಬಹಿಷ್ಕಾರ ಶಾಲಾ ಬಹಿಷ್ಕಾರದಂಥ ಹೋರಾಟ ನಡೆಸಲು ಸಂಘ ಮುಂದಾಗಿದೆ.
ಮುಖ್ಯ ಶಿಕ್ಷಕರಿಗೆ 15,20, 25 ವರ್ಷಗಳ ವೇತನ ಬಡ್ತಿ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು, ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ,ದೈಹಿಕ ಶಿಕ್ಷಕರ ಸಮಸ್ಯೆಯನ್ನೂ ಬಗೆಹರಿಸಬೇಕು ಎಂದು ಸಂಘ ಬೇಡಿಕೆ ಇಟ್ಟಿದೆ.
ಇದೇ 21ರಂದು ತಾಲ್ಲೂಕು ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಮೂಲಕ ಹಾಗೂ 25ರಂದು ಜಿಲ್ಲಾಮಟ್ಟದಲ್ಲಿ ಉಪ ನಿರ್ದೇಶಕರ ಮೂಲಕ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಗುವುದು.ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಯ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಶಂಭುನಿಂಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಿ ತಿಳಿಸಿ ದ್ದಾರೆ.
ಇದು KSPSTA ಸಂಘದ ನಿಲವು ಆದರೆ ಇನ್ನೂ ಇತ್ತ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಇದಕ್ಕೆ ಬೆಂಬಲವನ್ನು ವ್ಯಕ್ತಪಡಿಸೊದಿಲ್ಲ ಎಂದಿದ್ದಾರೆ ಅಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ
ಒಟ್ಟಾರೆ ನಾಳೆ ಒಂದು ಕಡೆ ಶಾಲೆಗಳು ಆರಂಭ ಮತ್ತೊಂದು ಕಡೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿಕ್ಷಕರು ಹೋರಾಟಕ್ಕೆ ಕರೆ ನೀಡಿದ್ದು ಇದೆಲ್ಲದರ ನಡುವೆ ಏನೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು