ದಾವಣಗೆರೆ –
ದಾವಣಗೇರಿಯಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಮಹಿಳಾ ಕುಸ್ತಿ ವಿಭಾಗದಲ್ಲಿ ಬೀದರ ಜಿಲ್ಲೆಯ ಶಿಕ್ಷಕಿ ಹಾಗೇ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಪಾಟೀಲ ಅವರು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಹೌದು ಇಂದು ನಡೆದ ಅಂತಿಮ ಪಂಧ್ಯದಲ್ಲಿ ಎದುರಾಳಿಯ ವಿರುದ್ದ ಕುಸ್ತಿ ಹಿಡಿದು ಅಂತಿಮವಾಗಿ ವಿಜೇತರಾಗಿದ್ದಾರೆ.
ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನೂ ವಿಜೇತರಾದ ಇವರಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ರಾಜ್ಯ ಘಟಕದ ಸಂಸ್ಥಾಪಕ ಅಧ್ಯಕ್ಷ ರಾಗಿರುವ ಡಾ ಲತಾ ಎಸ್ ಮುುಳ್ಳೂರು ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಹೆಚ್ ಹಾಗೇ ರಾಜ್ಯ ಘಟಕದ ಸರ್ವ ಸದಸ್ಯರು ಅಭಿನಂದನೆಗಳನ್ನು ಹೇಳಿದ್ದಾರೆ
ಇನ್ನೂ ಬೀದರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾಗಿರುವ ಸಾರಿಕಾ ಗಂಗಾ ಹಾಗೇ ಪ್ರಧಾನ ಕಾರ್ಯದರ್ಶಿ ಭುವನೇ ಶ್ವರಿ ಸೇರಿದಂತೆ ಸರ್ವ ಸದಸ್ಯರು ಅಭಿನಂದನೆಗಳನ್ನು ಹೇಳಿ ಶುಭ ಹಾರೈಸಿದ್ದಾರೆ.