ಶಿವಮೊಗ್ಗ –
ರಾಜ್ಯದ ಎಲ್ಲಾ ಪ್ರಾಥಮಿಕ ಶಾಲಾ ಮಾಕ್ಕಳಿಗೆ ಶಾಲೆಗಳು ಇಂದು ಪ್ರಾರಂಭಗೊಂಡಿದ್ದು ಮಾನ್ಯ ಶಿಕ್ಷಣ ಸಚಿವರು ಬಿ.ಸಿ.ನಾಗೇಶ್ ರವರು ಇಂದು ಶಿವಮೊಗ್ಗ ನಗರದ ಆಯನೂರು ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಶಿವಮೊಗ್ಗ ಘಟಕದ ಪದಾಧಿಕಾರಿಗಳು ರಾಜ್ಯದ PST ಶಿಕ್ಷಕರ 6-8 ನೇ ತರಗತಿ ದಾಖಲೆ ನಿರ್ವಹಣೆ ಸ್ಥಗಿತ ಮಾಡುವ ಸಂಬಂದ ಚಳುವಳಿ ಪತ್ರವನ್ನು ನೀಡಿ ಗಮನ ಸೆಳೆದರು.
ರಾಜ್ಯದ ಎಲ್ಲಾ ಪ್ರಾಥಮಿಕ ಶಿಕ್ಷಕರು 1-7 ನೇ ತರಗತಿ ಶಾಲೆಗಳಿಗೆ ನೇಮಕ ಮಾಡಿಕೊಂಡಿದ್ದು ಈಗಾಗಲೇ ಅದೆಷ್ಟೊ ಶಿಕ್ಷಕರು ಪದವಿ ಪಡೆದಿರುವವರು ಕರ್ತವ್ಯ ಮಾಡುತ್ತಲಿದ್ದು ಅವರಿಗೆ GPT ಶಿಕ್ಷಕರಾಗಿ ವಿಲೀನ ಮಾಡುವ ಸಂಬಂದ ನ್ಯಾಯ ಒದಗಿಸಲು ಸುಮಾರು ಸಲ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸಹಾ ಸರ್ಕಾರ ಗಮನ ಹರಿಸಿಲ್ಲ ಎಂದು ಸಮಸ್ಯೆ ಯನ್ನು ಮುಂದಿಟ್ಟರು
ಹೊಸ ಸಿ.ಅಂಡ್.ಆರ್.ನಿಯಮದ ಪ್ರಕಾರ ನಾವೆಲ್ಲ ಇಂದು PST ಶಿಕ್ಷಕರಾಗಿ 1-5 ನೇ ತರಗತಿಗಳಿಗೆ ಸೀಮಿತ ವಾಗಿದ್ದಿವಿ. ಆದರು 6-8 ನೇ ತರಗತಿಗೆ ಬೋದಿಸುತ್ತಿ ರುವುದು ಹೆಚ್ಚುವರಿ ಕೆಲಸವೇ ಸರಿ.ಆಗಾಗಿ ಕರ್ತವ್ಯ ನಿರತ ಪಧವೀದರ ಶಿಕ್ಷಕರನ್ನು ನ್ಯಾಯಬದ್ದವಾಗಿ GPT ಶಿಕ್ಷಕರಾಗಿ ಮಾಡುವವರೆಗೆ ಯಾವುದೇ ದಾಖಲೆ ನಿರ್ವಹಿಸಲ್ಲ ಎಂಬ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷರಾದ ಶ್ರೀಮತಿ ರಾಧಾ ಈ ಸಂದರ್ಭದಲ್ಲಿ ಸಚಿವರಿಗೆ ಪತ್ರ ನೀಡುವ ಮೂಲಕ ಚಳುವಳಿಯನ್ನು ಮತ್ತಷ್ಟು ಚುರುಕು ಮಾಡಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲೆಯ ಹಾಗೂ ತಾಲ್ಲೂಕಿನ ಪದಾಧಿಕಾರಿಗಳು ಸಹಾ ಬಾಗಿಯಾಗಿ ಪತ್ರ ಸಲ್ಲಿಸಿದ್ದಾರೆ.