ಯಾದಗಿರಿ –
ಹೌದು ಹೆಸರಿಗೆ ಇದೊಂದು ಸರ್ಕರಿ ಮಾದರಿ ಶಾಲೆ ಯಾಗಿದೆ. ಆದರೆ ಈ ಒಂದು ಶಾಲೆಗೆ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳಾಗಲಿ ವ್ಯವಸ್ಥೆಗಳಾಗಲಿ ಹೀಗೆ ಯಾವುದೇ ವ್ಯವಸ್ಥೆಗಳಿಲ್ಲ ಹೀಗಾಗಿ ಶಿಕ್ಷಣ ಸಚಿವರು ಈ ಒಂದು ಶಾಲೆಯ ಚಿತ್ರಣವನ್ನು ನೊಡಲೆಬೇಕಾದ ಸ್ಟೋರಿ ಯಾಗಿದೆ.
ಹೆಸರಿಗೆ ಮಾತ್ರ ಮಾದರಿ ಶಾಲೆ ಮಾದರಿ ಪದಕ್ಕೂ ಶಾಲೆಗೂ ಯ್ಯಾವುದು ಸಂಬಂದವಿಲ್ಲವಂತೆ ಕಂಡು ಬರುತ್ತಿದೆ ಯಾದಗಿರಿ ಜಿಲ್ಲೆಯಲ್ಲಿನ ಶಾಲೆಯೊಂದು. ಮಕ್ಕಳನ್ನು ಬಯಲಿನಲ್ಲಿ ಕೂಡಿಸಿ ಪಾಠ ಮಾಡುತ್ತಿದ್ದಾರೆ ಶಿಕ್ಷಕರು. ಕ್ಲಾಸ್ ರೂಮ್ ನ್ನು ಗೊಡೌನ್ ಮಾಡಿಕೊಂಡಿ ದ್ದಾರೆ.
ಹೀಗಾಗಿ ಅನಿವಾರ್ಯವಾಗಿ ತರಗತಿ ನಡೆಸಲು ಕೋಣೆ ಗಳಿಲ್ಲ ಕಾರಣ ಬಯಲಿನಲ್ಲಿಯೇ ಕೂಡಿಸಿ ಶಿಕ್ಷಕರು ಪಾಠವನ್ನು ಮಾಡುತ್ತಿದ್ದಾರೆ.ಯಾದಗಿರಿಯ ಜೂನಿಯರ್ ಕಾಲೇಜು ಗ್ರೌಂಡ್ ನಲ್ಲಿರೊ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಚಿತ್ರಣವಿದು.
ಜಿಲ್ಲೆಗೆ ಸರಬರಾಜು ಮಾಡಬೇಕಾದ ಪುಸ್ತಕಗಳನ್ನು ಕ್ಲಾಸ್ ರೂಂ ನಲ್ಲಿ ತುಂಬಿ ಇಟ್ಟಿದ್ದಾರೆ. ಹೀಗಾಗಿ ಕೋಣೆಗಳಲ್ಲಿ ಕುಳಿತು ಕಲಿಯಬೇಕಾದ ಮಕ್ಕಳಿಗೆ ಬಯಲೇ ಆಸರೆಯಾ ಗಿದ್ದು ಇನ್ನೂ ಶಿಕ್ಷಕರು ಕೂಡಾ ಅವರ ಎದುರಿಗೆ ಕುಳಿತು ಕೊಂಡು ಪಾಠವನ್ನು ಮಾಡುತ್ತಿದ್ದಾರೆ.
ಶಾಲೆಯ ಮುಖ್ಯ ಗುರುಗಳನ್ನ ಕೇಳಿದ್ರೆ ಬೇರೆ ತಾಲೂಕಿಗೆ ಪುಸ್ತಕ ಕಳಿಸಬೇಕು ಇನ್ನೂ ಕಳಿಸಿಲ್ಲ ಅಂತಾರೆ ಹೀಗಾಗಿ ಅವ್ಯವಸ್ಥೆಯ ನಡುವೆ ಬಯಲಿನಲ್ಲಿಯೇ ಕುಳಿತುಕೊಂಡು ಮಕ್ಕಳು ಪಾಠವನ್ನು ಕಲಿಯಬೇಕಾದ ಅನಿವಾರ್ಯತೆ ಬಂದಿದ್ದು ಯಾರು ನೋಡುತ್ತಿಲ್ಲ ಕೇಳುತ್ತಿಲ್ಲ