ಮಂಡ್ಯ –
ಮಂಡ್ಯದಲ್ಲಿ ಶಿಕ್ಷಣ ಸಚಿವ ನಾಗೇಶ್ ಸ್ಪಷ್ಟನೆ…
ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ತಿನ್ನಲು ಒತ್ತಡ ಹೇರಿಲ್ಲ ಪ್ರೋಟಿನ್ ಗಾಗಿ ಈ ಒಂದು ಮೊಟ್ಟೆಗಳನ್ನು ನೀಡಲಾಗು ತ್ತಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು ಮಂಡ್ಯ ದಲ್ಲಿ ಮಾತನಾಡಿದ ಅವರು ಮಕ್ಕಳು ಅಪೌಷ್ಟಿಕ ತೆಯಿಂದ ಬಳಲುತ್ತಾ ಮಕ್ಕಳು ತುಂಬಾ ಒದ್ದಾಡುತಿದ್ದಾರೆ ಹೀಗಾಗಿ ಇದನ್ನು ಜಾರಿಗೆ ಮಾಡಲಾಗಿದೆ ಎಂದರು
ಮಕ್ಕಳ ಮೇಲೆ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಸರ್ಕಾರ ಯೋಜನೆ ಜಾರಿ ಮಾಡಿದೆ.ಪ್ರೋಟಿನ್ ಗಾಗಿ ಮೊಟ್ಟೆ ನೀಡಲಾಗುತ್ತಿದ್ದು ಈ ಒಂದು ವಿಚಾರ ಕುರಿತು ರಾಜ್ಯದಲ್ಲಿ ತಜ್ಞರು ಸಲಹೆ ನೀಡಿದ್ದಾರೆ.ಮಕ್ಕಳಿಗೆ ಬಾಳೆ ಹಣ್ಣನ್ನು ಕೂಡಾ ಕೊಡ್ತಿದ್ದೇವೆ ಎಂದರು.
ಹೀಗಾಗಿ ಇದನ್ನು ಅರಿತುಕೊಂಡು ನಾವು ಶಾಲೆಯಲ್ಲಿ ಮಕ್ಕಳಿಗೆ ಪ್ರೋಟಿನ್ ಯುಕ್ತ ಆಹಾರ ಪದಾರ್ಥ ಆಯ್ಕೆ ಮಾಡಿದ್ದೇವೆ ಎಂದರು.