ಧಾರವಾಡ –
ಹೊಂದಿದ ಶಿಕ್ಷಕರಾಗುವ ಕನಸು ಹೊತ್ತು ಹತ್ತಿಪ್ಪತ್ತು ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾದು ಕುಳಿತ ಹತ್ತಾರು ಸಾವಿರ ಯುವಪೀಳಿಗೆಗೆ( ಅನೇಕರು ವಯೋಮಿತಿ ಮೀರಿ ದ್ದಾರೆ) ಸರಕಾರ ಮೂಗಿಗೆ ತುಪ್ಪ ಸವರಿದಂತಿದೆ.ಹೌದು ಸುಮಾರು ೫೦ ಸಾವಿರದಷ್ಟು ಹುದ್ದೆಗಳು ಖಾಲಿ ಇರುವಾಗ ಸರಕಾರ ಮೂಲ ವೃಂದದ ಪದವೀಧರ ಪ್ರಾಥಮಿಕ ಶಾಲಾ ( ೬ ರಿಂದ ೮ ) ಶಿಕ್ಷಕರ ಹತ್ತು ಸಾವಿರ ಹುದ್ದೆ ಕಲ್ಯಾಣ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ೫ ಸಾವಿರ ಹುದ್ದೆ ಸೇರಿ ೧೫ ಸಾವಿರ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿ ಸಲಿದೆ.
( ಇನ್ನೂ ಹೊರಡಿಸಿಲ್ಲ )೨೮ ಸಾವಿರ ಅತಿಥಿ ಶಿಕ್ಷಕರ ಸೇವೆ ಪಡೆಯಲಿದೆ.( ಈಗಾಗಲೇ ಶೈಕ್ಷಣಿಕ ಮುಗಿಯುತ್ತಲಿದೆ). ಇರಲಿ ಏನೇ ಆದರೂ ನೇಮಕಾತಿ ಪ್ರಕ್ರಿಯೆ ಸ್ವಾಗತಾರ್ಹ ಇಲ್ಲಿ ಗಮನಿಸಬೇಕಾದ ಗಂಭೀರ ಅಂಶವೆಂದರೆ………..
ಈ ಬಾರಿ ಟಿಇಟಿ ಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತಿರುವದು.ಅದಕ್ಕೆ ಸರಕಾರ ಕೊಡುವ ಕಾರಣ ವಿಜ್ಞಾನ ಹಾಗೂ ಗಣಿತ ಶಿಕ್ಷಕರ ಕೊರತೆಯಂತೆ. ಕಳೆದ ಹತ್ತಿಪ್ಪತ್ತು ವರ್ಷಗಳ Bsc BEd,/MSc BEd /MEd,/PUC Science ದೊಂದಿಗೆ DEd ಪರೀಕ್ಷೆ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಇಂದೋ ನಾಳೆಯೋ ಶಿಕ್ಷಕ ರಾಗುವ ಕನಸು ಹೊತ್ತವರಿರುವಾಗ ಅವರಿಗೆ ಅವಕಾಶ ನೀಡದೆ BE ಪದವಿ ಪಡೆದು ಇನ್ನಾವುದೊ ಉದ್ಯೋಗ ಅರಸುತ್ತಿರುವವರಿಗೆ ಶಿಕ್ಷಕರ ಹುದ್ದೆಗೆ ನೇಮಕ ಮಾಡಿದರೆ ಬಿಎಡ್ ಡಿಎಡ್ ಮಾಡಿದವರು ಕೂಲಿನಾಲಿ ಮಾಡಬೇಕೇ?( ಈಗ ಅನೇಕರು ಅದನ್ನೇ ಮಾಡುತ್ತಿದ್ದಾರೆ)ಈಗಾಗಲೇ ಬಿಇಡಿ, ಡಿಇಡಿ ಪದವಿ ಹೊಂದಿದ ಟಿಇಟಿ ಪಾಸಾದವರು ಸಿಇಟಿಗೆ (ಸಾಮಾನ್ಯ ಪ್ರವೇಶ ಪರೀಕ್ಷೆ )ಅರ್ಹರು ಎಂದು ಹೇಳುವ ಸರಕಾರ ಬಿಇಡಿ,ಡಿಇಡಿ ಪದವೀಧರರಲ್ಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಯಾವ ನಿಯಮಾವಳಿ ಇದೆ ಇಂತಹ ಆಲೋಚನೆ ಹೇಗೆ ಬಂತು? ಒಂದು ಕಡೆ ಕಟ್ಟುನಿಟ್ಟಾದ ನಿಯಮಾವಳಿ ಇನ್ನೊಂದು ಕಡೆ ಸಂಬಂಧವೆ ಇಲ್ಲದವರ ನೇಮಕ.
ಈ ನಿರ್ಧಾರ ಖಂಡನೀಯ.ಇಂಥ ನಿರ್ಧಾರ ಜಾರಿ ಮಾಡುವ ಮುನ್ನ ಸರಕಾರ ಮರು ಆಲೋಚನೆ ಮಾಡಿ ಬಿಇಡಿ ತರಬೇತಿ ಹೊಂದಿದ ವಿಜ್ಞಾನ ಪದವೀಧರರಿಗೆ ಮೊದಲು ಆದ್ಯತೆ ನೀಡಲಿ.ಅದರೊಂದಿಗೆ ಕಿರಿಯ ಶಾಲೆಗಳಿಗೆ ಅಗತ್ಯವಿರುವ PUC DEd ಆದವರ ನೇಮಕ ವೂ ಆಗಬೇಕು.ಸರಕಾರೀ ಶಾಲೆಗಳ ಬಗ್ಗೆ ಕಾಳಜಿ ಮಾಡುವ ಸರಕಾರ ಖಾಸಗೀ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ಗೆ ಶೀಘ್ರ ಅನುಮತಿ ನೀಡುವುದರೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ದಾರಿ ಮಾಡಿಕೊಡಲಿ.
ಮಲ್ಲಿಕಾರ್ಜುನ ಚಿಕ್ಕಮಠ
ಧಾರವಾಡ.