ಬೆಂಗಳೂರು –
ರಾಜ್ಯದಲ್ಲಿ ಮತ್ತೊರ್ವ ಆದರ್ಶ ಸರಳ ಸಜ್ಜನಿಕೆಯ ಮುಖ್ಯೋಪಾಧ್ಯಾಪಯರೊಬ್ಬರು ನಿಧನರಾಗಿದ್ದಾರೆ. ಹೌದು ಮದ್ದಕ್ಕನಹಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ಮಹದೇವಪ್ಪ ನವರು ನಿಧನರಾದ ಮುಖ್ಯ ಶಿಕ್ಷಕರಾಗಿ ದ್ದಾರೆ. ಎಂದಿನಂತೆ ಶಾಲೆಗೆ ಹೋಗಿದ್ದ ಇವರು ಶಾಲೆಯಿಂದ ಬಂದು ಮನೆಯಲ್ಲಿ ಕುಳಿತುಕೊಂಡಿದ್ದರು ಏಕಾಎಕಿಯಾಗಿ ಎದೆನೋವ ಕಾಣಿಸಿಕೊಂಡಿತು ಇನ್ನೇನು ಆಸ್ಪತ್ರೆಗೆ ಕರೆದು ಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ತೀವ್ರವಾಗಿ ಆರೋಗ್ಯ ಹದಗೆಟ್ಟಿತ್ತು ಇನ್ನೇನು ಆಸ್ಪತ್ರೆ ತಲುಪಬೇಕು ಎನ್ನುವಷ್ಟರಲ್ಲಿಯೇ ದಾರಿ ಮಧ್ಯದಲ್ಲಿಯೇ ಸರ್ ನಿಧನರಾಗಿದ್ದಾರೆ.
ಚಿಕಿತ್ಸೆ ಫಲಿಸದೇ ನಿಧನರಾಗಿದ್ದು ಇವರ ನಿಧನದಿಂದಾಗಿ ಶಿಕ್ಷಣ ಇಲಾಖೆೆಗೆ ತುಂಬಲಾರದ ನಷ್ಟವಾಗಿದ್ದು ಮದ್ದಕ್ಕ ನಹಳ್ಳಿ ಸೇರಿದಂತೆ ಜಿಲ್ಲೆಯ ಸಮಸ್ತ ಶಿಕ್ಷಕ ಬಂಧುಗಳು ಸಂತಾಪವನ್ನು ಸೂಚಿಸಿ ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ.ಇನ್ನೂ ಇಲಾಖೆಯಲ್ಲಿ ತುಂಬಾ ಉತ್ಸಾಹಿ ಆದರ್ಶರಾಗಿದ್ದ ಇವರು ಮಕ್ಕಳಿಗೆ ಅಚ್ಚುಮೆಚ್ಚಿನ ಗುರುಗಳಾಗಿದ್ದರು ಅಲ್ಲದೇ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯಗಳನ್ನು ಮಾಡಿ ಮಾದರಿಯಾಗಿದ್ದ ಇವರ ನಿಧನದಿಂದಾಗಿ ಇಲಾಖೆಗೆ ತುಂಬಲಾರದ ನಷ್ಟವಾಗಿದ್ದು ಬಡವಾಗಿದ್ದು ಇನ್ನೂ ಮೃತರಾದ ಇವರಿಗೆ ನಾಡಿ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಭಾವಪೂರ್ಣ ಸಂತಾಪ ವನ್ನು ಸೂಚಿಸಿ ನಮನವನ್ನು ಸಲ್ಲಿಸಿದ್ದಾರೆ