ಮೈಸೂರು –
ಈ ಮೂಲಕ ಎಲ್ಲ ಮುಖ್ಯ ಶಿಕ್ಷಕರಿಗೆ ಅತಿ ಗಂಭೀರ ಹಾಗೂ ಅತಿ ತುರ್ತು ವಿಷಯವೇನೆಂದರೆ ದಿನಾಂಕ 15/12/2021 ರಂದು ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 6ನೇ ತರಗತಿ ಓರ್ವ ವಿದ್ಯಾರ್ಥಿಗೆ ಕೋವಿಡ್ ಪಾಸಿಟಿವ್ ಆಗಿದ್ದು ತಾಲೂಕಿನ ಪ್ರಥಮ ಪ್ರಕರಣವಾಗಿದೆ.ಹಾಗಾಗಿ ಎಲ್ಲಾ ಮುಖ್ಯ ಶಿಕ್ಷಕರು ಈ ಸಂಬಂಧ ಶಾಲೆಗಳಲ್ಲಿ ಕೋವಿಡ್ SOP ಪಾಲನೆ ಕಟ್ಟುನಿಟ್ಟಾಗಿ ನಡೆಯಬೇಕಿದೆ.ಯಾವುದಾ ದರೂ ವಿದ್ಯಾರ್ಥಿಗೆ ಕೆಮ್ಮು ಜ್ವರ ನೆಗಡಿ ಇತ್ಯಾದಿ ರೋಗಲಕ್ಷ ಣಗಳು ಇದ್ದಲ್ಲಿ ಆ ವಿದ್ಯಾರ್ಥಿಯ ಪೋಷಕರಿಗೆ ತಿಳಿಸಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಗುವನ್ನು ತಪಾಸಣೆಗೆ ಒಳಪಡಿಸುವುದು ಹಾಗೂ ವಿದ್ಯಾರ್ಥಿಯನ್ನು ಶಾಲೆಗೆ ಹಾಜರಾಗದಂತೆ ತಿಳಿಸಬೇಕು ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಾಮಾಜಿಕ ಅಂತರದೊಂದಿಗೆ ಸ್ಯಾನಿಟೈ ಸರ್ ಬಳಸಿ ಮುಖಗವಸು ಹಾಕಿರುವುದನ್ನು ಕಡ್ಡಾಯಗೊ ಳಿಸಿ ಎಂದಿದ್ದಾರೆ
ಎಲ್ಲ ಶಾಲೆಯವರು ಪ್ರತಿದಿನ ಮಕ್ಕಳಿಗೆ ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಿ ಜ್ವರವಿರುವುದನ್ನು/ಇಲ್ಲದಿರುವ ಬಗ್ಗೆ ದೃಢೀಕರಣ ಮಾಡಿಕೊಳ್ಳುವುದು ಕಡ್ಡಾಯ ಕಡ್ಡಾಯವಾಗಿ ಬಿಸಿ ಊಟದ ಸಮಯದಲ್ಲಿ ಹಾಗೂ ಕುಡಿಯಲು ಸಂದರ್ಭಗಳಲ್ಲಿ ಬಿಸಿನೀರು ಉಪಯೋಗಿಸುವುದು ಶಾಲೆಯ ಎಲ್ಲಾ ಶಿಕ್ಷಕರಿಗೆ ಹಾಗೂ ಅಡುಗೆಯ ಸಿಬ್ಬಂದಿಗಳಿಗೆ 2ಡೋಸ್ ಲಸಿಕೆ ಪಡೆದಿರುವು ದನ್ನು ಖಾತ್ರಿ ಪಡಿಸಿ ಕೊಳ್ಳುವುದು ಇಂದೇ ತಮ್ಮ ಗ್ರಾಮ ಪಂಚಾಯಿತಿ ಕಚೇರಿಗೆ ಮಾಹಿತಿಯನ್ನು ತಿಳಿಸಿ ನಿಮ್ಮ ಶಾಲೆಯ ಎಲ್ಲಾ ಕೊಠಡಿಗಳನ್ನು ಸೋಂಕುನಿವಾರಕ ಸಿಂಪಡಿಸಲು ತಿಳಿಸುವುದು.ಪ್ರತಿಯೊಬ್ಬ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮಾಸ್ಕ ಧರಿಸುವುದು ಕಡ್ಡಾಯ ಹಾಗೂ 50 ವರ್ಷ ಮೇಲ್ಪಟ್ಟ ಶಿಕ್ಷಕರು ಜೊತೆಗೆ ಫೇಸ್ ಶೀಲ್ಡ್ ಅನ್ನು ಬಳಸುವುದು ಕಡ್ಡಾಯ.ತಮ್ಮ ಶಾಲೆಗಳಿಗೆ ಕೋವಿಡ್ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಒಳಪಡಿಸಿದಲ್ಲಿ ಆ ವಿದ್ಯಾರ್ಥಿ ಗಳ ಪ್ರತಿಯೊಬ್ಬರನ್ನು srf id ಯನ್ನು ಪ್ರತ್ಯೇಕವಾಗಿ ಶಾಲೆಯಲ್ಲಿ ನಮೂದುಮಾಡಿಕೊಳ್ಳುವುದು ಒಟ್ಟಿನಲ್ಲಿ ಸರ್ಕಾರದ ಕೋವಿಡ್ ಸದಾಚಾರಗಳ ಆದೇಶದಲ್ಲಿರುವ ಎಲ್ಲಾ ಅಂಶಗಳನ್ನು ಕಟ್ಟುನಿಟ್ಟಾಗಿ ಚಾಚು ತಪ್ಪದೆ ಪಾಲಿಸುವುದು…. ಇದಕ್ಕೆ ಎಲ್ಲಾ ಶಾಲೆಯ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಜವಾಬ್ದಾರರಾಗಿರುತ್ತಾರೆ
BEO /BRC ಪಿರಿಯಾಪಟ್ಟಣ