ಬಿಷ್ನಳ್ಳಿ –
ಕರೊನಾ ಮಹಾಮಾರಿ ಇನ್ನೂ ಕಡಿಮೆಯಾಗಿಲ್ಲ. ಕರೋನಾಗೆ ಲಸಿಕೆ ಬರುವವರೆಗೆ ಜಾಗೃತಿ ಮುಖ್ಯ ಎಂದು ದೇಶದ ಪ್ರಧಾನಿಯೇ ಖುದ್ದಾಗಿ ಹೇಳಿದ್ದಾರೆ. ಜಾಗೃತಿ ಮಾಡಬೇಕಾದ ಜನಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳು ಎಲ್ಲವನ್ನೂ ಮರೆತು ಡ್ಯಾನ್ಸ್ ಮಾಡಿದ್ದಾರೆ. ಹೌದು ಇಂಥಹದೊಂದು ಶೋಕಿಲಾಲ ಜನಪ್ರತಿನಿಧಿಗಳ ಪೊಲೀಸ್ ಅಧಿಕಾರಿಗಳ ಡ್ಯಾನ್ಸ್ ಮಾಡಿದ ವಿಡಿಯೊವೊಂದು ವೈರಲ್ ಆಗಿದೆ.
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜೋಗಿ ಕಲಾವಿದರ ಗ್ರಾಮ ಬಿಷ್ನಳ್ಳಿ, ಗ್ರಾಮಕ್ಕೆ ಹತ್ತಿರದ ತೋಟವೊಂದರಲ್ಲಿ ತಾಲೂಕಿನ ಪ್ರಭಾವಿಗಳೆಂದು ಗುರುತಿಸಿಕೊಂಡಿರುವ ಕೆಲ ರಾಜಕಾರಣಿಗಳು.ಜಿಲ್ಲಾ ಪಂಚಾಯತ ಜನಪ್ರತಿನಿಧಿಗಳು ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳು ಒಂದೇ ವೇದಿಕೆಯ ಮೇಲೆ ಕುಣಿದು ಕುಪ್ಪಳಿಸಿದ್ದಾರೆ.ಬಿಷ್ನಳ್ಳಿ ಜೋಗಿಕಲಾವಿದರ ಹಾಡಿಗೆ ಹೆಜ್ಜೆ ಹಾಕಿದ್ದಾರೆಂದು ಹೇಳಲಾಗುತ್ತಿದೆ. ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಮೆಲ್ನೋಟಕ್ಕೆ ಬಿಷ್ನಳ್ಳಿ ಜೋಗಿಕಲಾವಿದರ ಹಾಡಿಗೆ ಕುಣಿದಿದ್ದಾರೆಂದು ಗೋಚರಿಸುತ್ತಿದೆ,
ಹಳದಿ ಕಣ್ಣಿಗೆ ಕಂಡದ್ದೆಲ್ಲಾ ಹಳದಿ ಎನ್ನೊ ರೀತಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಲೆಯನ್ನು ಕಲಾವಿದರನ್ನು ಗೌರವಿಸಿ ಆದರೆ ಸಧ್ಯದ ಪರಸ್ಥಿತಿಯಲ್ಲಿ ಹೀಗೆ ಮಾಡಿದ್ದು ಸರಿನಾ ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಸಾರ್ವಜನಿಕರು ಕೇಳ್ತಾ ಇದ್ದಾರೆ.ಕುಣಿದು ಮೈಮರೆತು ಶೋಕಿತನದ ಪರಮಾವಧಿಯಲ್ಲಿ ಮುಳುಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಹುತೇಕರು.ಜಿಪಂ ಸದಸ್ಯರು ಹಾಗೂ ರಾಜಕಾರಣಿಗಳು ಮತ್ತು ಇಬ್ಬರು ಡಿವೈಎಸ್ಪಿಯವರು ಕುಣಿದಿದ್ದಾರೆ, ಕೊರೋನಾ ಮಹಾಮಾರಿಯಿಂದ ಜನ ತತ್ತರಿಸುತ್ತಿರುವ ಈ ಸಂದಿಗ್ಧ ಸ್ಥಿತಿಯಲ್ಲಿ ಜನಸಾಮಾನ್ಯರೊಂದಿಗೆ ಬೆರೆತು ಅವರ ನೋವಿಗೆ ಧ್ವನಿಯಾಗಿರಬೇಕಿದ್ದ ಜನಪ್ರತಿ ನಿಧಿಗಳು ಶೋಕಿಗಳಾಗಿದ್ದಾರೆ.ಶಿಸ್ತು ಹಾಗೂ ಕರ್ತವ್ಯ ಪ್ರಜ್ಞೆ,ಕಾನೂನು ಸುವ್ಯವಸ್ಥೆಗೆ ಸಾಕ್ಷಿಯಾಗಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳು ಎಲ್ಲವನ್ನೂ ಮರೆತು ವೇದಿಕೆಯ ಮೇಲೆ ಸಾಮೂಹಿಕವಾಗಿ ಕುಣಿದಿದ್ದಾರೆ ಎನ್ನಲಾದ ವಿಡಿಯೋ ಇದಾಗಿದೆ.
ಈ ವೀಡಿಯೋವನ್ನು ಅವರೇ ಉದ್ದೇಶಪೂರ್ವಕಾಗಿ ಮಾಡಿಸಿದ್ದಾರೆಯೇ ಅಥವಾ ಇನ್ನೂ ಇವರು ಪ್ರಚಾರದ ಖಯಾಲಿ ಹೊಂದಿದ್ದು ವೀಡಿಯೋ ಮಾಡಿಸಿ ಹರಿಬಿಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಯಾಕೆಂದರೆ ಅಲ್ಲಿರುವುದು ಪ್ರಭಾವಿ ರಾಜಕಾರಣಿಗಳು,ಜನಪ್ರತಿನಿಧಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಮಾತ್ರ ಜನರ ಸೇವೆಯ ಹೆಸರಲ್ಲಿ ಅಧಿಕಾರಕ್ಕೇರಿದ ರಾಜಕಾರಣಿಗಳು ಹಾಗೂ ಜನತೆಯ ಸೇವೆಗೆಂದು ಪೊಲೀಸ್ ಇಲಾಖೆ ಸಾಕಷ್ಟು ಸಂಬಳಕೊಟ್ಟು ನಿಯೋಜಿಸಿರುವ ಅಧಿಕಾರಿಗಳು.
ಜನರು ಕೊರೋನಾ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ,ಜನಪರ ಕಾಳಜಿ ಹೊಂದದೇ ಜನ ಸೇವೆ ಮಾಡದೇ,ಬಿಟ್ಟಿ ಸಖತ್ ಮಜಾ ಮಾಡುತ್ತಾ ಹೀಗೆ ಕುಣಿದು ಕುಪ್ಪಳಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಪ್ರಚಾರಕ್ಕಾಗಿ ಕುಣಿದು ಅನಾಗರೀಕರಂತೆ ವರ್ತಿಸಿರಿವುದು ಅವರ ದುರ್ಬಲ ಮನಸ್ಥಿತಿಗೆ ಸಾಕ್ಷಿ ಎನ್ನುತ್ತಾರೆ ಪ್ರಜ್ಞಾವಂತರು. ಒಟ್ಟಾರೆ ಕಲೆಗೆ ಮಾರುಹೊಗಿ ಕಲಾಭಿಮಾನದಿಂದ ಕುಣಿದಿದ್ದಾರೋ ಇಲ್ಲವೋ ಯಾತಕ್ಕಾಗಿ ಕುಣಿದಿದ್ದಾರೊ..ಆ ದೇವರೆ ಬಲ್ಲ ಒಟ್ಟಾರೆಯಾಗಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು ಯಾತಕ್ಕಾಗಿ ಕುಣಿದ್ರು ಎಂಬುದಕ್ಕೇ ಪೊಲೀಸ್ ಅಧಿಕಾರಿಗಳೇ ಜನಪ್ರತಿನಿಧಿಗಳೇ ಉತ್ತರಿಸಬೇಕು.