ಸುಬ್ರಹ್ಮಣ್ಯ –
ಪದವಿಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿನಿಯನ್ನು ಅತ್ಯಾಚಾರ ಎಸಗಿದ ಆರೋಪದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿ ಕೆಲವೇ ದಿನಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಆರೋಪಿ ಶಿಕ್ಷಕ ಗುರುರಾಜ್ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.ಹೌದು ಅರ್ಜಿಯನ್ನು ವಜಾ ಮಾಡುವಂತೆ ಹೈಕೋರ್ಟ್ ಗೆ ಸಲ್ಲಿಸಿದ ಮೇಲ್ಮನವಿ ಹಿನ್ನಲೆಯಲ್ಲಿ ಆರೋಪಿ ಗುರುರಾಜ್ ಜಾಮೀನು ಅರ್ಜಿ ವಜಾಗೊಂ ಡಿದೆ.
ಇದು ನಮ್ಮ ನ್ಯಾಯಪರ ಹೋರಾಟಕ್ಕೆ ಸಿಕ್ಕ ಗೆಲುವು ಎಂದು ಸುಬ್ರಹ್ಮಣ್ಯ ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್‌ಎಸ್ ಹೇಳಿದರು ಸುಬ್ರಹ್ಮ ಣ್ಯದಲ್ಲಿ ಮಾತನಾಡಿದ ಅವರು ಹಿರಿಯ ವಿದ್ಯಾರ್ಥಿ ಸಂಘ ಎಬಿವಿಪಿ ಸಹಿತ ವಿವಿಧ ಸಂಘ ಸಂಸ್ಥೆಗಳು ಘಟನೆ ಖಂಡಿ ಸಿದ್ದಲ್ಲದೇ ಕೆಳ ನ್ಯಾಯಾಲಯ ನೀಡಿದ ಜಾಮೀನನ್ನು ವಜಾ ಮಾಡುವಂತೆ ಆಗ್ರಹಿಸಿದ್ದರು ಜೊತೆಗೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು ಆರು ತಿಂಗಳ ಸಮಯದ ಬಳಿಕ ಆರೋಪಿಗೆ ಕೆಳ ನ್ಯಾಯಾಲಯ ನೀಡಿದ ಜಾಮೀನ ನ್ನು ಹೈಕೋರ್ಟ್ ವಜಾಗೊಳಿಸಿದೆ.ಇದು ಸತ್ಯಕ್ಕೆ ಸಿಕ್ಕ ಜಯ ಮುಂದಕ್ಕೆ ಇಂತಹ ನೀಚ ಕೃತ್ಯ ಮುಂದಾಗದೇ ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆ ಸಿಗಬೇಕೆಂಬುದೇ ನಮ್ಮ ಆಗ್ರಹ.ಪುತ್ತೂರಿನ ನ್ಯಾಯವಾದಿ ನರಸಿಂಹಪ್ರಸಾದ್, ಸಚಿನ್ ಬೆಂಗಳೂರು ಅವರು ವಾದ ನಡೆಸಿ ಜಯ ತಂದಿ ದ್ದಾರೆ.ಅವರಿಗೆ ಎಲ್ಲರ ಪರವಾಗಿ ಅಭಿನಂದನೆ ಸಲ್ಲಿಸು ತ್ತೇವೆ ಎಂದ ಅವರು ಆರೋಪಿ ಸಂಸ್ಥೆಗೆ ಸೇರಿಕೊಳ್ಳಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದಂತೆ ನಾವು ವಿರೋ ದಿಸಿದ್ದೇವೆ.ಎಲ್ಲಿಯೂ ಈ ಶಿಕ್ಷಕನಿಗೆ ಅವಕಾಶ ನೀಡಬಾ ರದು.ನ್ಯಾಯದ ಪರವಾಗಿ ನಿರಂತರ ಹೋರಾಟ ನಡೆಸು ತ್ತೇವೆ ಎಂದರು ಪ್ರಮುಖರಾದ ದಿನೇಶ್ ಸಂಪ್ಯಾಡಿ, ಅಚ್ಚತ್ತ ಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.