ಯಲಬುರ್ಗಾ –
ಸರ್ಕಾರಿ ಶಾಲೆಯ ಬಿಸಿಯೂಟಕ್ಕೆ ಗ್ರಾಮಸ್ಥರೇ ಸ್ವಯಂ ಪ್ರೇರಿತವಾಗಿ ಮೊಳಕೆ ಕಾಳುಗಳನ್ನು ನೀಡುವ ಮೂಲಕ ವಿಶೇಷ ಆಂದೋಲನ ಆರಂಭ ಮಾಡಿದ್ದಾರೆ ಹೌದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಬಿಸಿಯೂಟ,ಕ್ಷೀರಭಾಗ್ಯದ ಜೊತೆಗೆ ಸ್ಥಳೀಯ ದಾನಿಗಳ ಸಹಕಾರದೊಂದಿಗೆ ಮೊಳಕೆ ಕಾಳು ವಿತರಣೆ ಮಾಡಲಾಗುತ್ತಿದೆ.ಗ್ರಾಮೀಣ ಪ್ರದೇಶದಲ್ಲಿ ಅನೇಕ ರೈತರು ಮಡಿಕೆ ಹಾಗೂ ಹೆಸರು ಕಾಳುಗಳನ್ನು ಶಾಲೆಗೆ ದೇಣಿಗೆ ನೀಡಲು ಆಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ವಾರದಲ್ಲಿ ಒಂದು ದಿನ ಮೊಳಕೆಯೊಡೆದ ಕಾಳುಗಳನ್ನು ಮಕ್ಕಳಿಗೆ ನೀಡುವ ಕಾರ್ಯಕ್ರಮವನ್ನು ತಾಲ್ಲೂಕಿನಲ್ಲಿ ಸ್ವಯಂ ಪ್ರೇರಿತರಾಗಿ ಜಾರಿಗೊಳಿಸಿದ್ದಾರೆ

ತಾಲ್ಲೂಕಿನಲ್ಲಿ ಸುಮಾರು 200 ಶಾಲೆಗಳ ಪೈಕಿ ಈಗಾಗಲೇ 50ಕ್ಕೂ ಅಧಿಕ ಶಾಲೆಗಳಲ್ಲಿ ಮೊಳಕೆಯೊಡೆದಕಾಳುಗಳನ್ನು ವಿತರಿಸುತ್ತಿದ್ದಾರೆ.ಮಕ್ಕಳಿಗೆ ಪೌಷ್ಟಿಕಾಂಶವನ್ನು ಒದಗಿಸುವ ಉದ್ದೇಶದಿಂದ ನಡೆಯುತ್ತಿರುವ ಈ ಕಾರ್ಯದ ಯಶಸ್ಸಿಗೆ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಫ್.ಎಸ್. ಕಳ್ಳಿ ಶ್ರಮಿಸುತ್ತಿದ್ದಾರೆ

ವಾರದಲ್ಲಿ ಒಂದಲ್ಲಾ ಒಂದು ದಿನ ಸರ್ಕಾರ ನೀಡಿದ ವಿವಿಧ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ.ಆದರೆ ಶನಿವಾರ ದಿನ ಯಾವುದೇ ಕೊಡುಗೆ ಇಲ್ಲದೇ ಇರುವುದನ್ನು ಗಮನಿಸಿ ನೆನೆಸಿರುವ ಕಾಳುಗಳ ವಿತರಣೆಗೆ ಮುಂದಾಗಿದೆ. ಗ್ರಾಮಸ್ಥರು ತಮ್ಮ ಕೈಲಾದಷ್ಟು ಕಾಳುಗಳನ್ನು ನೀಡಲು ಆಸಕ್ತಿ ತೋರಿದ್ದರಿಂದ ಅವುಗಳನ್ನೆ ಮಕ್ಕಳಿಗೆ ನೀಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಲು ಪ್ರಯತ್ನಿಸ ಲಾಗುತ್ತಿದೆ


ನೆನೆಸಿದ ಕಾಳುಗಳನ್ನು ಮಕ್ಕಳು ಇಷ್ಟಪಡುವುದರಿಂದ ಎಲ್ಲರೂ ಸ್ವೀಕರಿಸುತ್ತಿದ್ದಾರೆ.ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾ ರಿಗಳು, ಬಿಆರ್‌ಸಿ ಹಾಗೂ ಇನ್ನಿತರ ಇಲಾಖೆಯ ಅಧಿಕಾ ರಿಗಳ ಸಹಾಯದ ಜೊತೆಗೆ ಗ್ರಾಮಸ್ಥರು ಕೈ ಜೋಡಿಸಿ ಉತ್ತಮ ಕಾರ್ಯಕ್ಕೆ ಅಣಿಯಾಗುತ್ತಿದ್ದಾರೆ ಎಂದು ಶಿಕ್ಷಕ ಶರಣಯ್ಯ ಗಣಾಚಾರ ಹೇಳಿದ್ದಾರೆ.