ಬೆಂಗಳೂರು –
ಎಲ್ಲಾ ಸಿಆರ್ ಪಿ ಹಾಗೂ ಮುಖ್ಯ ಶಿಕ್ಷಕರಿಗೆ ಈ ಮೂಲಕ ತಿಳಿಸುವುದೆನೆಂದರೆ
ದಿನಾಂಕ.27.01.2022 ರಿಂದ ಕ್ಲಸ್ಟರ್ ಕೇಂದ್ರಗಳಿಗೆ ಆಧಾರ್ ವ್ಯಾಲಿಡೇಶನ್ ಮಾಡಿಸಲು ಸಂಬಂಧಿಸಿದ ಆಧಾರ್ ಕೇಂದ್ರದವರನ್ನು ನಿಯೋಜನೆ ಮಾಡಿದ್ದು
ಕ್ಲಸ್ಟರ್ ನಲ್ಲಿ ಆಧಾರ್ ತಿದ್ದುಪಡಿ ಮಾಡುವ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಅಲ್ಲಿಯವರೆಗೆ ಆಧಾರ್ ತಪ್ಪಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಕಲೆಹಾಕುವುದು ಕಲೆಹಾಕುವಾಗ ಶಾಲಾ ಲಾಗಿನ್ ನಲ್ಲಿ ಪ್ರತಿ ವಿದ್ಯಾರ್ಥಿಯ ಮಾಹಿತಿಯನ್ನು ವೆರಿಫೈ ಮಾಡಿ ವೆರಿಫೈ ಮಾಡಿದ ಸಂದರ್ಭದಲ್ಲಿ ಬರುವ ಮಾಹಿತಿ ಯನ್ನು ಆ ವಿದ್ಯಾರ್ಥಿಯ ಆಧಾರ್ ಜೆರಾಕ್ಸ್ ಪ್ರತಿಯ ಮೇಲೆ ಬರೆದುಕೊಳ್ಳುವುದು ಎಲ್ಲಾ ಮಕ್ಕಳನ್ನು ವೆರಿಫೈ ಮಾಡಿ ನಿಮ್ಮ ಶಾಲೆಯ ವಿದ್ಯಾರ್ಥಿ ಗಳ ಮಾಹಿತಿಯನ್ನು ಇಟ್ಟುಕೊಳ್ಳುವುದು
ಆಧಾರ್ ತಿದ್ದುಪಡಿಗಾಗಿ ನಮೂನೆಗಳನ್ನು ಸೋಮವಾರ ದಿಂದ ನಮ್ಮ ಕಚೇರಿಯಲ್ಲಿ ನೀಡಲಾಗುವುದು ಸಂಬಂಧಿ ಸಿದ ಸಿಆರ್ ಪಿ ರವರು,ಮುಖ್ಯ ಮುಖ್ಯಶಿಕ್ಷಕರು( ಶಾಲಾ ಅವಧಿಯ ನಂತರ)ಪಡೆದು ತಮ್ಮ ಶಾಲೆಗಳಿಗೆ ಆಧಾರ್ ತಿದ್ದುಪಡಿ ಆಗ ಬೇಕಾಗುವ ಮಕ್ಕಳ ಮಾಹಿತಿಯನ್ನು ಭರ್ತಿಮಾಡಿ ಸಿದ್ಧಪಡಿಸಿ ಇಟ್ಟುಕೊಳ್ಳುವುದು ಆಧಾರ್ ತಿದ್ದುಪಡಿ ಮಾಡಲು ನಿಯೋಜನೆಯಾಗಿರುವ ಸಿಬ್ಬಂದಿ ಗಳು ಕ್ಲಸ್ಟರ್ ಹಂತಕ್ಕೆ ನಾವು ತಿಳಿಸುವ ದಿನಾಂಕಗಳಂದು ಬರುವರು ಆ ಸಂದರ್ಭದಲ್ಲೇ ಮಕ್ಕಳ ಆಧಾರ್ ಅಪ್ಡೇಟ್ ಮಾಡಿಸಬಹುದಾಗಿದೆ
ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತಾಲ್ಲೂಕಿನಲ್ಲಿ ಡಿಬಿಟಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಹಕರಿಸಲು ಎಲ್ಲಾ ವೃತ್ತಿ ಬಾಂದವರನ್ನ ಕೋರಿದೆ
ಆದ ಅಪ್ಲಿಕೇಷನ್ ಗೆ ಬೇಕಾಗುವ ಎಲ್ಲ ಮಾಹಿತಿಯನ್ನು ಸಿದ್ಧಪಡಿಸಿಟ್ಟುಕೊಳ್ಳುವುದು ಈ ಸಂಬಂಧ ನಮೂನೆ ಗಳನ್ನು ಈ ಕೆಳಗಡೆ ಪೀಡಿಯ ಫಾರ್ಮೆಟ್ ನಲ್ಲೂ ಸಹ ಹಾಕಲಾಗಿದೆ ಗಮನಿಸಿ ಜೊತೆಗೆ ನಮ್ಮ ಕಚೇರಿಯಲ್ಲೂ ಸಹ ದೊರೆಯುವುದು