ಮೈಸೂರು –
ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿ ಆದೇಶ ಹೊರಡಿಸುವ ಮೂಲಕ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿರುವ ವಿಚಾರ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ ಸರ್ಕಾರದ ಆದೇಶದಂತೆ ಸಮವಸ್ತ್ರ ಪಾಲಿಸಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ.ಮೈಸೂರಿನಲ್ಲಿ ಮಾತನಾಡಿದ ಅವರು ಈಗಾಗಲೇ ರಾಜ್ಯ ಸರ್ಕಾರ ಶಾಲಾ ಕಾಲೇಜು ಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿದೆ.ಆದೇಶ ಕಟ್ಟುನಿ ಟ್ಟಾಗಿ ಪಾಲನೆಯಾಗಬೇಕು.ಒಂದು ವೇಳೆ ಪೊಲೀಸ್ ಇಲಾಖೆಯಲ್ಲಿ ಮುಸ್ಲಿಂರು ನಾವು ಕ್ಯಾಪ್ ಹಾಕಲ್ಲ ಟೋಪಿ ಹಾಕ್ತೀವಿ ಎಂದರೆ ನಡೆಯುತ್ತಾ ಎಂದರು ಇನ್ನೂ ಇದು ಕೂಡ ಅದೇ ರೀತಿ ಸಮವಸ್ತ್ರ ಆದೇಶ ಪಾಲಿಸಬೇಕು ಎಂದರು.
ಇನ್ನೂ ಕಾಂಗ್ರೆಸ್ ನಾಯಕರು ಸಮಾಜ ಒಡೆಯುವು ದರಲ್ಲಿ ಧರ್ಮ ಒಡೆಯುವುದರಲ್ಲಿ ಪ್ರೊಫೆಸರ್ ಗಳು. ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಈ ವಿಚಾರದ ಬಗ್ಗೆ ಮಾತನಾಡುವ ನೈತಿಕತೆಯೂ ಇಲ್ಲ.ಒಂದೇ ಸಮು ದಾಯದ ವಿದ್ಯಾರ್ಥಿಗಳಿಗೆ ಶಾದಿ ಭಾಗ್ಯ ಪ್ರವಾಸ ಭಾಗ್ಯ ಜಾರಿಗೆ ತಂದು ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ. ಶಾಲೆಗಳಲ್ಲಿ ಶಾರದಾ ಪೂಜೆ ಗಣಪತಿ ಪೂಜೆ ಇದೆಲ್ಲವೂ ಈಗ ಶುರುವಾಗಿದ್ದಲ್ಲ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.ಈ ಮಣ್ಣಿನ ಸಂಸ್ಕೃತಿಯದು ಅದನ್ನು ಪ್ರಶ್ನೆ ಮಾಡಲು ಆಗಲ್ಲ.ನಾವು ಕಾಂಗ್ರೆಸ್ ನಾಯಕರಿಂದ ಪಾಠ ಕಲಿಯಬೇಕಿಲ್ಲ ಎಂದು ಹೇಳಿದರು.