ರಾಯಚೂರು –
ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ಶಾಲೆಗೆ ಬರುತ್ತಿದ್ದಂತೆ ಹಿಜಾಬ್ ತೆಗೆದಿಟ್ಟು ತರಗತಿಯೊಳಗೆ ಕೋವಿಡ್ ನಿಯಮ ಪಾಲಿಸುತ್ತಾ ಕುಳಿತರು.ಆದರೆ ಇಲ್ಲಿನ ಶಿಕ್ಷಕಿಯರು ಮಾತ್ರ ಬುರ್ಕಾ-ಹಿಜಾಬ್ ಧರಸಿಕೊಂಡೇ ಮಕ್ಕಳಿಗೆ ಪಾಠ ಮಾಡಿದ್ದಾರೆ.ಹೌದು ಇಂಥಹ ಘಟನೆ ಯೊಂದು ರಾಯಚೂರು ನಗರದ ಪೋರ್ಟ್ ಪ್ರೌಢಶಾಲೆ ಯಲ್ಲಿ ಇಂದು ಕಂಡು ಬಂದಿತು

ಹಿಜಾಬ್ ತೆಗೆದು ಪಾಠ ಕೇಳಲು ತರಗತಿಗಳಲ್ಲಿ ಮಕ್ಕಳು ಕುಳಿತಿದ್ದರೆ ಕೊವೀಡ್ ನಿಯಮವನ್ನೂ ಪಾಲಿಸುವ ಮೂಲಕ ಮಾಸ್ಕ್ ಧರಿಸಿದ್ದರು.ಹೈಕೋರ್ಟ್ ಆದೇಶ ಪಾಲಿಸುವ ಮೂಲಕ ಈ ಮಕ್ಕಳೂ ರಾಜ್ಯದ ಎಲ್ಲ ಶಾಲೆಗೂ ಮಾದರಿ ಎನ್ನಿಸಿದರು.ಆದರೆ ಶಿಕ್ಷಕಿಯರು ಮಾತ್ರ ಹಿಜಾಬ್ ತೆಗೆಯಲೇ ಇಲ್ಲ.ಶಾಲಾ-ಕಾಲೇಜುಗಳ ತರಗತಿ ಯೊಳಗೆ ಹಿಜಾಬ್,ಕೇಸರಿ ಶಾಲುಗಳನ್ನು ಧರಿಸುವಂತಿಲ್ಲ ಎಂದು ಹೈಕೋರ್ಟ್ ಪೂರ್ಣಪೀಠ ಮಧ್ಯಂತರ ಆದೇಶ ನೀಡಿದ್ದರೂ ಶಿಕ್ಷಕಿಯರು ಕ್ಯಾರೆ ಎಂದಿಲ್ಲ.


ರಾಜ್ಯದೆಲ್ಲಡೆ ಇಂದು ಬಹುತೇಕ ಶಾಲೆಗಳಿಗೆ ಹಿಜಾಬ್ ಧರಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಬಂದಿದ್ದರು ಕೆಲವೆಡೆ ಮಕ್ಕಳಿಗೆ ತಿಳಿಹೇಳಿ ಹಿಜಾಬ್ ತೆಗೆಸಿ ಶಾಲೆ ಪ್ರವೇಶಕ್ಕೆ ಅನುವು ಮಾಡಿಕೊಡುವಲ್ಲಿ ಆಡಳಿತ ಮಂಡಳಿ ಹರಸಾಹ ಸಪಟ್ಟಿದೆ.ಕೆಲ ಮಕ್ಕಳು ಹಿಜಾಬ್ ತೆಗೆಯಲು ಒಪ್ಪದೆ ವಾಪಸ್ ಮನೆಗೆ ಹೋಗಿದ್ದಾರೆ ಕೆಲ ಮಕ್ಕಳು ಹಿಜಾಬ್ ಧರಿಸಿಯೇ ತರಗತಿಗೆ ಹೋಗಿದ್ದಾರೆ.


