ಕುಷ್ಟಗಿ –
ಹೌದು ಇದಕ್ಕೆ ತಾಜಾ ಉದಾಹರಣೆ ಕುಷ್ಟಗಿ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ನೌಕರನಾ ಗಿರುವ ಬಸವರಾಜ ಮುಂಡಾಸದ.ಇವರಿಗೆ ಶುಗರ್ ಹೆಚ್ಚಾ ಗಿದ್ದು ಹೀಗಾಗಿ ಕಾಲು ಗ್ಯಾಂಗ್ರೀನ್ ಆಗಿದ್ದು ಕೊಳೆಯು ತ್ತಿದ್ದು ಆಸ್ಪತ್ರೆಯ ಹೊರ ಅವರಣದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ.ಸರ್ಕಾರಿ ನೌಕರನಾಗಿದ್ದು ಹೆಂಡತಿ ಮಕ್ಕಳು ಇದ್ದರೂ ಕೂಡಾ ಅನಾಥ ಅವಸ್ಥೆಗೆ ಕುಟುಂಬದ ವರು ಇತ್ತ ಸುಳಿಯುತ್ತಿಲ್ಲ ಕೊಪ್ಪಳ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ಎಸ್ ಡಿ ಸಿ ನೌಕರ ಬಸವರಾಜ್ ಮುಂಡಾಸದ.ಇದೀಗ ಕುಷ್ಟಗಿ ಪಶು ಆಸ್ಪತ್ರೆ ಯಲ್ಲಿ ಪ್ರಭಾರ ಸೇವೆಯಲ್ಲಿದ್ದಾರೆ.ಗದಗ ಜಿಲ್ಲೆ ಪೇಟಾ ಲೂರು ಸ್ವಗ್ರಾಮ.ಪತ್ನಿ ಅದೇ ಊರಲ್ಲಿ ಇದ್ದು,ಇಬ್ಬರು ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿದ್ದಾರೆ.ನೌಕರ ಬಸವ ರಾಜ್ ಕುಡಿತದ ವ್ಯಸನಕ್ಕೆ ಕುಟುಂಬದಿಂದ ದೂರವಾಗಿ ಸಂಬಂಧ ಕಡಿದುಕೊಂಡಿದ್ದಾನೆ.

ಇನ್ನೂ ಪ್ರತಿ ತಿಂಗಳ 40 ಸಾವಿರ ರೂಪಾತಿ ವೇತನವು ಬರುತ್ತಿದ್ದು ಇದೇಲ್ಲವೂ ಪತ್ನಿಗೆ ಸೇರುತ್ತಿದ್ದು ಈತನ ಸಿಡು ಕಿನ ವರ್ತನೆಗೆ ಬೇಸತ್ತಿದ್ದಾರೆ.ಅತೀಯಾದ ಶುಗರ್ ಕಾಯಿ ಲೆಯಿಂದ ಬಳಲುತ್ತಿದ್ದ ಬಸವರಾಜ್ ಮುಂಡಾಸ ಕುಡಿತದ ಚಟಕ್ಕೆ ಎಲ್ಲೋ ಬಿದ್ದು ಕಾಲಿಗೆ ಗಾಯವಾಗಿದೆ.ಸರಿಯಾದ ಆರೈಕೆ ಇಲ್ಲದೇ ಕಾಲಿನ ಗಾಯ ಗ್ಯಾಂಗ್ರೀನ್ ಆಗಿದೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಕಾಲು ಕತ್ತರಿಸದೇ ಬೇರೆ ವಿಧಿ ಇಲ್ಲ ವೈದ್ಯರು ತಿಳಿಸಿದ್ದರಿಂದ ಚಿಕಿತ್ಸೆ ಗೆ ನಿರಾಕರಿಸಿ ದ್ದಾನೆ.ನಂತರ ಹುಬ್ಬಳ್ಳಿ ಆಸ್ಪತ್ರೆಯಲ್ಲೂ ಅದೇ ಸಲಹೆ ನೀಡಿದ ಹಿನ್ನೆಲೆಯಲ್ಲಿ ಅಲ್ಲಿಂದ ಕುಷ್ಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಕಾಲಿನ ಗಾಯಕ್ಕೆ ಹುಳು ಬಿದ್ದಿದ್ದು ದುರ್ನಾತದೊಂದಿಗೆ ಜೀವಂತ ಶವವಾಗಿ ಬಿದ್ದಿದ್ದಾನೆ. ಸಂಬಂಧಿಸಿದ ಇಲಾಖೆಯವರು ಸಾದ್ಯವಾದಷ್ಟು ಪ್ರಯತ್ನ ಮಾಡಿದ್ದಾರೆ. ಈತನ ವರ್ತನೆ ಅತಿಯಾದ ಕುಡಿತದ ದುರಭ್ಯಾಸಕ್ಕೆ ಸಾಕಾಗಿ ಸುಮ್ಮನಾಗಿದ್ದಾರೆ.ಇದೇ ಮೇ 31ಕ್ಕೆ ನಿವೃತ್ತಿಯಾಗಲಿರುವ ಮುಂಡಾಸದ ಅವರಿಗೆ ಸ್ಥಳೀಯ ಕ್ರೈಂ ವಿಭಾಗದ ಪಿಎಸೈ ಮಾನಪ್ಪ ವಾಲ್ಮೀಕಿ ಅವರು ಮಾನವೀಯತೆ ಹಿನ್ನೆಲೆಯಲ್ಲಿ ಬಸವರಾಜ್ ಮುಂಡಾಸದ್ ಮಗಳನ್ನು ಸಂಪರ್ಕಿಸಿದಾಗ್ಯೂ ಕುಷ್ಟಗಿ ಬರುವ ಸ್ಥಿತಿಯಲ್ಲಿ ಇಲ್ಲ ಬಸವರಾಜ್ ಮುಂಡಾಸದ ಆರೋಗ್ಯವಾಗಿದ್ದು ಕಾಲಿನ ಗ್ಯಾಂಗ್ರೀನ್ ಚಿಕಿತ್ಸೆ ನೀಡಿದರೆ ಆರೋಗ್ಯವಾಗು ತ್ತಾರೆ ಆದರೆ ಈತನ.ಆರೈಕೆಗೆ ಪತ್ನಿ ಮಕ್ಕಳು ಯಾರು ಮುಂದೆ ಬಂದಿಲ್ಲ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿ ಕಾರಿ ಡಾ. ಕೆ.ಎಸ್ ರಡ್ಡಿ ತಿಳಿಸಿದ್ದಾರೆ.