ಬೀದರ್ –
ಸರ್ಕಾರಿ ಶಾಲೆಯ ಶಿಕ್ಷಕ ರೊಬ್ಬರು ದೇಹದಾನ ವನ್ನು ಮಾಡಿದ ಘಟನೆ ಬೀದರ್ ನಲ್ಲಿ ಕಂಡು ಬಂದಿದೆ ತಾಲ್ಲೂಕಿನ ಚಿಮಕೋಡ್ ಗ್ರಾಮದ ಉರ್ದು ಮಾಧ್ಯಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಕಾಶ ರೆಡ್ಡಿ ಅವರು ದೇಹದಾನ ಮಾಡುವ ಮೂಲಕ ಗಮನ ಸೆಳೆದಿ ದ್ದಾರೆ.
ಬೀದರ್ ನ ಬ್ರಿಮ್ಸ್ ಸಿಬ್ಬಂದಿ ಅವರಿಗೆ ದೇಹದಾನದ ಪ್ರಮಾಣ ಪತ್ರ ವಿತರಿಸಿದರು.ದೇಹದಾನದಿಂದ ನಾವು ಮೃತಪಟ್ಟ ನಂತರವೂ ನಮ್ಮ ಶರೀರ ಉಪಯೋಗಕ್ಕೆ ಬರುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗುತ್ತದೆ.ಹೀಗಾಗಿ ಬ್ರಿಮ್ಸ್ ಗೆ ದೇಹದಾನ ಮಾಡಿ ದ್ದೇನೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷರೂ ಆದ ಶಿಕ್ಷಕ ಪ್ರಕಾಶ ರೆಡ್ಡಿ ತಿಳಿಸಿದರು.ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ದೇಹದಾನ ಹಾಗೂ ಇತರರ ಬಾಳಿಗೆ ಬೆಳಕಾಗಲು ನೇತ್ರದಾನ ಮಾಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.