ಮಾವಿನ ತೋರಣದ ಬಗ್ಗೆ ನಿಮಗೆಷ್ಚು ಗೋತ್ತು
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ
ನಮ್ಮ ಭಾರತೀಯ ಹಿಂದೂ ಸಂಸ್ಕೃತಿ ಶ್ರೀಮಂತವಾದದ್ದು.ಹಬ್ಬ ಹರಿದಿನಗಳು ಸಹಜ ಮತ್ತು ಸರ್ವೇ ಸಾಮಾನ್ಯವಾಗಿದ್ದು ಒಂದರ ಮೇಲೊಂದರಂತೆ ಬಂದೆ ಬರುತ್ತವೆ.ಊರ ಹಬ್ಬ, ಜಾತ್ರೆ, ಸಾಮೂಹಿಕ ಸಮಾರಂಭಗಳಾಗಲೀ ಅಥವಾ ಮನೆಗಳಲ್ಲಿ ಮದುವೆ,ಮುಂಜಿ, ನಾಮಕರಣ ಹೀಗೆ ಏನೇ ಯಾವುದಾದರೂ ಧಾರ್ಮಿಕ ಕಾರ್ಯಕ್ರಮಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಎಲ್ಲಾ ಕಾರ್ಯಕ್ರಮಗಳ ವಿಧಿ ವಿಧಾನಗಳು ಬೇರೆ ಬೇರೆ ತರಹದ್ದಾದರೂ, ಎಲ್ಲದಕ್ಕೂ ಎಲ್ಲದರಲ್ಲೂ ಸಾಮಾನ್ಯವಾಗಿ ಎದ್ದು ಕಾಣುವುದು ಮಾವಿನ ತೋರಣ.
ಪ್ರಮುಖವಾಗಿ ಒಂದು ಅಂಶವೆಂದರೆ ಮಾವಿನ ತಳಿರು ತೋರಣ ಬಳಕೆ ತುಂಬಾ ವರುಷಗಳಿಂದ ನಮ್ಮ ನಮ್ಮ ನಡುವೆ ಇದೆ. ಯಾವುದೇ ಹಬ್ಬ ಹರಿದಿನ ಸಭೆ ಸಮಾರಂಭ ಹೀಗೆ ಏನೇ ಧಾರ್ಮಿಕ ಕಾರ್ಯಕ್ರಮಗಳಾದರೆ ಅಲ್ಲಿ ಮಾವಿನ ತೋರಣ ಇದ್ದೇ ಇರುತ್ತದೆ ಬೇಕೆ ಬೇಕು.ಇನ್ನೂ ಅದು ಊರ ಹೆಬ್ಬಾಗಿಲೇ ಆಗಿರಬಹುದು, ದೇವಸ್ಥಾನದ ಮುಖ್ಯಾದ್ವಾರವಾಗಿರಬಹುದು, ಮನೆಯ ಮುಂಬಾಗಿಲಾಗಿರಬಹುದು, ದೇವರ ಕೋಣೆಯಿಂದ ಹಿಡಿದು ಧಾರ್ಮಿಕ ಮಂಟಪದವರೆಗೆ ಬೇಕೆ ಬೇಕು.ಇಲ್ಲವೇ ತೆರೆದ ಚಪ್ಪರಗಳಾಗಿರಬಹುದು ಈ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಮಾವಿನ ತಳಿರು ತೋರಣ ಕಣ್ಣಿಗೆ ಎದ್ದು ಕಾಣುತ್ತಿರುತ್ತದೆ ಮತ್ತು ಅತ್ಯಂತ ಮಹತ್ವವನ್ನು ಪಡೆದಿರುತ್ತದೆ.
*ಮಾವಿನ ತೋರಣವನ್ನೇ ಏಕೆ ಕಟ್ಟಬೇಕು ? ಅದರ ಮಹತ್ವವೇನು* ?
ಹೌದು ಸಾಮಾನ್ಯವಾಗಿ ಯಾರು ನಾವು ಯಾರು ಕೂಡಾ ಈ ಒಂದು ಮಾವಿನ ತೋರಣವನ್ನು ಯಾತಕ್ಕಾಗಿ ಕಟ್ಟುತ್ತಾರೆ ಯಾಕೆ ಕಟ್ಟುತ್ತಾರೆ ಎಂಬ ಬಗ್ಗೆ ಯಾರು ಕೂಡಾ ವಿಚಾರ ಮಾಡೊದಿಲ್ಲ. ಇದಕ್ಕೇ ಇತಿಹಾಸವೊಂದು ಇದೆ. ಮನೆಯ ಮುಂದೆ ರಂಗು ರಂಗಾದ ರಂಗೋಲಿ ಇಡುವುದು, ಹೊಸಿಲಿಗೆ ತೋರಣ ಕಟ್ಟುವುದು, ಹೆಂಗಸರು ಕೈತುಂಬಾ ಬಳೆ ತೊಟ್ಟು ಹಣೆಗೆ ಸಿಂಧೂರ ಧರಿಸುವುದು, ಗಂಡಸರು ಹಣೆಯಲ್ಲಿ ಕುಂಕುಮ ಅಥವಾ ತಿಲಕಗಳನ್ನು ಧರಿಸುವುದು,ದೇವರಿಗೆ ಹೂವಿನ ಹಾರಗಳನ್ನು ಹಾಕುವುದು ಇವುಗಳೆಲ್ಲವೂ ಅಲಂಕಾರಿಕವೂ ಹೌದು ಮತ್ತು ಶುಭ ಕಾರ್ಯಕ್ರಮಗಳ ಸಂಕೇತವೂ ಹೌದು. ಆದರೆ ಇವೆಲ್ಲವುಗಳ ಹಿಂದೆ ಕೆಲವು ವೈಜ್ಞಾನಿಕ ಸತ್ಯಗಳಿವೆ. ಹಾಗಾಗಿಯೇ, ನಮ್ಮ ಪೂರ್ವಜರು ಸಂಪ್ರದಾಯದ ಹೆಸರಿನಲ್ಲಿ ಇಂತಹ ಪದ್ದತಿಗಳನ್ನು ರೂಢಿ ತಂದಿದ್ದಾರೆ.ಮರಗಳ ಹಸಿರು ಎಲೆಗಳು ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಇಂಗಾಲದ ಡೈಆಕ್ಸೈಡನ್ನು ಹೀರಿಕೊಂಡು ಅದರ ಬದಲಿಗೆ ಶುಧ್ಧವಾದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಶುಭ-ಸಮಾರಂಭಗಳಲ್ಲಿ ಅತಿ ಹೆಚ್ಚಿನ ಜನರು ಒಂದೆಡೆ ಸೇರಿದಾಗ, ಜನದಟ್ಟಣೆಯಿಂದ ಆಮ್ಲಜನಕದ ಕೊರತೆ ಉಂಟಾಗಬಹುದು ಹಾಗಾಗಿ ಅಂತಹ ಆಮ್ಲಜನಕದ ಕೊರತೆಯನ್ನು ನೀಗಿಸಲು ಸಮಾರಂಭದ ಮಂಟಪದ ಸುತ್ತಮುತ್ತಲೂ ತೋರಣ ಕಟ್ಟುವ ಸಂಪ್ರದಾಯವಿದೆ.
ಅದರಲ್ಲೂ ಮಾವಿನ ಎಲೆಯನ್ನೇ ತೋರಣವನ್ನಾಗಿ ಏಕೆ ಕಟ್ಟುತ್ತಾರೆಂದರೆ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಯು ಅತ್ಯಂತ ಹೆಚ್ಚು ಕಾಲ ಹಚ್ಚ ಹಸಿರಾಗಿರುತ್ತದೆ ಮತ್ತು ಮರದಿಂದ ಕಿತ್ತು ತಂದ ಬಹಳ ಕಾಲಗಳ ನಂತರವೂ ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಆಮ್ಲಜನಕವವನ್ನು ಉತ್ಪತ್ತಿ ಮಾಡುವ ಶಕ್ತಿಯನ್ನು ಹೊಂದಿದೆ. ಹೀಗಾಗಿ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಗಳನ್ನೇ ತೋರಣಕ್ಕಾಗಿ ಬಳೆಸುತ್ತೇವೆ.
ಇನ್ನು ಮನೆಯ ಮುಂಬಾಗಿಲು ಮತ್ತು ದೇವರ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟುವುದರಿಂದ ಮನೆಯಲ್ಲಿ ಹಬ್ಬದ ವಾತಾವರಣ ಮೂಡಿ ಎಲ್ಲರ ಮನಸ್ಸು ಉತ್ಸಾಹ ಮತ್ತು ಆಹ್ಲಾದಕರವಾಗಿಡಲು ಸಹಾಯ ಮಾಡುತ್ತದೆ. ಅದೆ ರೀತಿ ಮನೆಯನ್ನು ಪ್ರವೇಶಿಸುತಿದ್ದಂತೆಯೇ ಹಚ್ಚ ಹಸಿರ ತೋರಣ ಕಣ್ಣಿಗೆ ತಂಪನ್ನು ನೀಡುತ್ತದೆ ಮತ್ತು ಮನೆಯ ವಾತವಾರಣ ಶುಭ್ರವಾಗಿದ್ದು ಆ ವ್ಯಕ್ತಿಯ ಮನಸ್ಸು ತಾಜಾತನವಾಗಿ ಮತ್ತು ಧನಾತ್ಮಕವಾಗಿ ಯೋಚಿಸಲು ಸಹಕಾರಿಯಾಗಿರುತ್ತದೆ ಹೀಗಾಗಿ ಮಾವಿನ ತೋರಣವನ್ನು ಹೆಚ್ಚು ಬಳಸುತ್ತಾರೆ ಕಟ್ಟುತ್ತಾರೆ.ಮನೆಯ ಬಾಗಿಲಿಗೆ ಮಾವಿನ ತಳಿರು ತೋರಣದ ಜೊತೆಗೆ ಬೇವಿನ ಸೊಪ್ಪಿನ ಎಲೆ ಅಥವಾ ಟೊಂಗೆಗಳನ್ನು ಸಿಕ್ಕಿಸುವುದರಿಂದ, ಮಾವು ಮತ್ತು ಬೇವಿನ ಎಲೆಯಲ್ಲಿ ಔಷಧೀಯ ಗುಣಗಳು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ, ಮನೆಯ ದ್ವಾರದ ಮೂಲಕ ಪ್ರವೇಶಿಸುವ ಗಾಳಿಯೊಂದಿಗೆ ಮನೆಯೊಳಗೆಲ್ಲಾ ಹರಡಿ ಆರೋಗ್ಯ ದೃಷ್ಟಿಯಿಂದ ಮನೆಯಲ್ಲಿ ಉತ್ತಮ ವಾತಾವರಣ ಮೂಡಿಸುತ್ತದೆ.
ಮಾವಿನ ತೋರಣದ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಮನೆಯೊಳಗೆ ಪ್ರವೇಶಿಸುವ ಸಣ್ಣ ಸಣ್ಣ ಕ್ರಿಮಿ ಕೀಟಗಳನ್ನು ಆಕರ್ಷಿಸಿ ಅವುಗಳನ್ನು ತೋರಣದ ತುದಿಯಲ್ಲಿಯೇ ಇರುವಂತೆ ಮಾಡಿ, ಅವುಗಳು ಮನೆಯೊಳಗೆ ಪ್ರವೇಶಿಸದಂತೆ ಬಾಗಿಲಿನ ಹೊರಗೇ ತಡೆಗಟ್ಟುತ್ತವೆ.
ಹೀಗೆ ನಾವು ಅನುಸರಿಸುವ ಪ್ರತಿಯೊಂದು ಧಾರ್ಮಿಕ ವಿಧಿವಿಧಾನಗಳ ಅಥವಾ ಪದ್ದತಿಗಳ ಮೂಲ ಆಶಯ ವೈಜ್ಞಾನಿಕ ಪ್ರಯೋಜನಗಳೇ ಆಗಿರುತ್ತವೆ. ನಮಗೆ ಅವುಗಳ ಕುರಿತಾಗಿ ಸರಿಯಾದ ಮಾಹಿತಿಯ ಕೊರತೆಯಿಂದಾಗಿ ಮೂಢನಂಬಿಕೆ ಎಂದು ತಿಳಿದು ಸರಿಯಾಗಿ ಆಚರಿಸದೇ ಹಬ್ಬ ಹರಿದಿನಗಳ ಸದುಪಯೋಗ ಪಡೆದುಕೊಳ್ಳಲು ಸಾಧ್ಯವಾಗದಿರುವುದು ನಿಜಕ್ಕೂ ನಮ್ಮ ದೌರ್ಭಾಗ್ಯವೇ ಸರಿ.
ಮಾವು ಮತ್ತು ಬೇವಿನ ತೋರಣದ ಬಳಕೆ ಈಗಲ್ಲದೇ ನಮ್ಮ ಪೂರ್ವಜರಿಂದಲೂ ಇದೆ. ಪರಿಸರದೊಂದಿಗೆ ನಾವು ನಮ್ಮೊಂದಿಗೆ ಪರಸರ ಎನ್ನುವ ಮಾತಿನೊಂದಿಗೆ ಇಷ್ಟೋಂದು ಮಹತ್ವ ತಿಳಿದ ಮೇಲೆಯಾದರೂ ನಾವುಗಳು ಬದಲಾದ ಇಂದಿನ ಜೀವನ ವ್ಯವಸ್ಥೆಯ ನಡುವೆ ಇವುಗಳನ್ನು ಬಳಕೆ ಮಾಡುವ ಬದಲಿಗೆ ಕಣ್ಣಿಗೆ ರಾರಾಜಿಸುವ ಬಗೆ ಬಗೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚಾಗುತ್ತಿದೆ. ಅಲಂಕಾರಕ್ಕೆಂದು ನಮ್ಮೆಲ್ಲರ ಮನೆಯ ಮಂದೆ ಕಟ್ಟಿರುವ ನಿಶ್ಪ್ರಯೋಜಕ ಪ್ಲಾಸ್ಟಿಕ್ ತೋರಣಗಳ ಜಾಗದಲ್ಲಿ ಇಂದೇ ಹಚ್ಚ ಹಸಿರಿನ ಮಾವಿನ ಮತ್ತು ಬೇವಿನ ತೋರಣವನ್ನು ಕಟ್ಟೋಣ. ಹಾಗೆ ತೋರಣ ಕಟ್ಟುವಾಗ ಸುಲಭ ಮತ್ತು ಅನುಕೂಲ ಎಂದು ನೈಸರ್ಗಿಕವಾದ ದಾರವನ್ನು ಬಳಕೆ ಮಾಡಿದರೆ ಇನ್ನೂ ಉತ್ತಮ. ಸ್ಟಾಪ್ಲರ್ ಪಿನ್ ಬಳೆಸದೆ, ಇದು ನಿಮ್ಮ ಸುದ್ದಿ ಸಂತೆಯ ಪರಿಸರದ ಕಾಳಜಿಯೊಂದಿಗೆ ದೀಪಾವಳಿ ಸಮಯದಲ್ಲಿರುವ ನಿಮಗೆ ನಮ್ಮ ಕಾಳಜಿ ಏನೇ ಆಗಲಿ ನಮ್ಮ ಸಂಸ್ಕ್ರತಿ ನಮ್ಮ ಹಬ್ಬಗಳು ಗತಕಾಲದ ಇತಿಹಾಸವನ್ನು ಹೊಂದಿವೆ ಎನ್ನುವುದಕ್ಕೆ ಮಾವಿನ ತೋರಣದ ಇತಿಹಾಸವೇ ಸಾಕ್ಷಿಯಾಗಿದ್ದು ಇನ್ನಾದರೂ ಹಬ್ಬ ಹರಿದಿನಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಕಡಿಮೆಯಾಗಿ ಮಾವಿನ ತೋರಣ ಬೇವಿನ ಉಪಯೋಗ ಹೆಚ್ಚಾಗಲಿ ಹಬ್ಬ ಆಚರಣೆಯೊಂದಿಗೆ ನಮ್ಮ ಆರೋಗ್ಯಕ್ಕೂ ಹೆಚ್ಚು ಅನುಕೂಲವಾಗುತ್ತದೆ.