ತುಮಕೂರು –
ಜಾತಿ, ಮತ, ಧರ್ಮ ಯಾವುದನ್ನೂ ನೋಡದೇ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನ ,ಶಿಕ್ಷಣ ನೀಡಿದ ಶತಮಾನದ ಶ್ರೇಷ್ಠ ಸಂತ ಡಾ.ಶ್ರೀ ಸಿದ್ದಗಂಗಾ ಶ್ರೀಗಳ ಹುಟ್ಟು ಹಬ್ಬದ ಪ್ರಯುಕ್ತ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಶ್ರೀ ಶಿವಕುಮಾರ ಸ್ವಾಮಿಜಿಗಳ ಹೆಸರನ್ನು ಎಂದು ಹೆಸರಿಡು ವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.

ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಮ್ಮ ಪ್ರಾಸ್ತವಿಕ ಭಾಷಣದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಪರಮ ಪೂಜ್ಯ ಶ್ರೀಗಳ ಹೆಸರು ಇಡಬೇಕೆಂ ದು ವೇದಿಕೆಯಲ್ಲಿದ್ದ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ 115ನೇ ಜಯಂತಿ ಹಿನ್ನೆಲೆ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾ ಡಿದ ಬೊಮ್ಮಾಯಿ, ಏ.1 ಪರಮ ಪೂಜ್ಯ ಶ್ರೀಗಳ ಹುಟ್ಟು ಹಬ್ಬ.ಅವರ ಸವಿನೆನಪಿಗಾಗಿ ಕೇಂದ್ರ ಸರ್ಕಾರದ ಮಧ್ಯಾ ಹ್ನದ ಬಿಸಿಯೂಟ ಯೋಜನೆಗೆ ಅನ್ನದಾಸೋಹ ಎಂದು ಹೆಸರು ಇಡುವುದಾಗಿ ಪ್ರಕಟಿಸುತ್ತಿದ್ದಂತೆ ಸಮಾರಂಭದಲ್ಲಿ ನೆರೆದಿದ್ದ ಸಾವಿರಾರು ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು.ಮಧ್ಯಾಹ್ಯದ ಬಿಸಿ ಊಟದ ಯೋಜನೆಗೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಹೆಸರು ಇಡಲು ಸರ್ಕಾರ ಮುಂದಾಗಿದೆ.

ಶ್ರೀಘದಲ್ಲೇ ಸರ್ಕಾರಿ ಆದೇಶ ಕೊಡಿಸುವುದಾಗಿ ಹೇಳಿದರು.ನಮ್ಮ ಸರ್ಕಾರ ಶ್ರೀಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲೇ ಮುನ್ನಡೆಯುತ್ತದೆ. ಅವರು ಕಂಡ ಕನಸನ್ನು ನನಸು ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತಿ ದ್ದೇವೆ. ಭೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲದಿದ್ದರೂ ಶಾಶ್ವತವಾಗಿ ಪ್ರತಿಯೊಬ್ಬರ ಹೃದಯಲ್ಲಿ ನೆಲೆಸಿದ್ದಾರೆ ಎಂದು ಬಣ್ಣಿಸಿದರು.ಮಠದ ಭಕ್ತನಾಗಿ ಶ್ರೀಗಳ ಸೇವೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶ ಸಿಕ್ಕಿರುವುದೇ ನಮ್ಮ ಪುಣ್ಯ. ಈ ಮಠದ ಮಣ್ಣಿನಲ್ಲಿ ನಡೆದಾಡುವ ದೇವರ ಆತ್ಮವಿದೆ. 88 ವರ್ಷಗಳ ಕಾಲ ಮಠದ ಮೂಲಕ ರಾಜ್ಯದ ಸೇವೆ ಮಾಡಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳು ನಮ್ಮೆಲ್ಲರ ಹೆಮ್ಮೆ ಎಂದು ಅಭಿಪ್ರಾಯಪಟ್ಟರು.ಅನ್ನ, ಅಕ್ಷರ, ಆಶ್ರಯ ಕಲ್ಪಿಸುವುದೇ ದಾಸೋಹದ ಆಶಯ, ಅವರ ನಡೆ-ನುಡಿ ನಮಗೆ ಸೂರ್ತಿಯಾಗಲಿದೆ. ಅನೇಕ ಬಡ ಮಕ್ಕಳಿಗೆ ಬದುಕು ಕಟ್ಟಿಕೊಟ್ಟ ಮಹಾನ್ ಸಂತ ಡಾ.ಶಿವಕುಮಾರ ಸ್ವಾಮೀಜಿ ಅವರ ದೈವಶಕ್ತಿ ನಮಗೆ ಮಾರ್ಗದರ್ಶನ ನೀಡುತ್ತಿದೆ ಎಂದರು.ಸ್ವಾಮೀಜಿಗಳು ಜಾತಿ, ವರ್ಗವನ್ನೂ ಮೀರಿದವರು. ಅವರ ಸರ್ವೋದಯದ ಪರಿಕಲ್ಪನೆ ನಿತ್ಯ ನಿರಂತರವಾಗಿದ್ದು, ಅಂತ್ಯೋದಯ ಮೂಲಕ ಕಟ್ಟಕಡೆಯ ವ್ಯಕ್ತಿಗೂ ಇಲ್ಲಿ ಅವಕಾಶವಿದೆ. ಇಂತಹ ವಾತಾವರಣ ರಾಜ್ಯದೆಲ್ಲೆಡೆ ನಿರ್ಮಾಣವಾಗಬೇಕು ಎಂದು ಆಶಿಸಿದರು. ಜನಕಲ್ಯಾಣಕ್ಕಾಗಿ ಸರ್ಕಾರ ಮಾಡಲಿರುವ ಅನ್ನ, ಅಕ್ಷರ, ಆಶ್ರಯ ಮತ್ತು ಆರೋಗ್ಯ ಯೋಜನೆಗಳಿಗೆ 60 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಹಿಂದುಳಿದ, ದಲಿತರ ಅಭ್ಯುದಯಕ್ಕೆ ಶ್ರಮಿಸುವ ಮೂಲಕ ಜನ ಪರ ಆಡಳಿತವನ್ನು ನೀಡಲು ಶ್ರಮಿಸುವುದಾಗಿ ಇದೇ ಸಂದರ್ಭ ದಲ್ಲಿ ಸಿಎಂ ತಿಳಿಸಿದರು.ಸುಮಾರು 88 ವರ್ಷ ಈ ಮಠದ ಸೇವೆ ಮಾಡಿದ್ದಾರೆ. ಇದು ದಾಖಲೆ. ಇಡಿ ದೇಶದಲ್ಲೇ ಈ ಕೆಲಸ ಯಾರು ಮಾಡಿಲ್ಲ. ಆ ದಾಖಲೆ ನಮ್ಮ ಶಿವಕುಮಾರ ಸ್ವಾಮಿಗಳು ಮಾಡಿದ್ದಾರೆ. ಶ್ರೀಗಳು ಹಚ್ಚಿದ ಒಲೆಯ ಕಿಚ್ಚು ನಿರಂತರವಾಗಿ ನಡೆಯುತ್ತಿವೆ. ಅವರು ನಮ್ಮ ನಡುವೆ ಜೀವಂತ ಆಗಿದ್ದಾರೆ.ಅವರು ದೈಹಿಕವಾಗಿ ಇಲ್ಲದೆ ಇದ್ದರೂ ಅವರ ನಡೆ ಗೌರವ ನಮ್ಮ ಜೊತೆ ಸದಾ ಇರುತ್ತದೆ. ಕಷ್ಟದಲ್ಲಿರುವವರಿಗೆ ಬದುಕುಕೊಟ್ಟವರು. ಇಂದು ಮಠ ಎಲ್ಲಾ ಸಮುದಾಯದ ಮಕ್ಕಳನ್ನು ನೋಡಿಕೊಳ್ಳುತ್ತಿದೆ. ಅದು ಸಾಮಾನ್ಯ ಮಾತಲ್ಲ. ಅದು ದೈವ ಶಕ್ತಿ. ಸ್ವಾಮೀಜಿ ಯವರು ಯಾವುದೇ ಜಾತಿಬೇಧ ಮಾಡಲಿಲ್ಲ. ಸರ್ವೋ ದಯ ಅಂತ್ಯೋದಯ ಆಗಬೇಕು ಎಂದರು.