ವಿಜಯಪುರ –
ಮುಂದಿನ ವರ್ಷದಿಂದ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಮಾಡಲಾಗುತ್ತದೆ ಎಂದು ಸಚಿವ ಬಿ ಸಿ ನಾಗೇಶ್ ಹೇಳಿದರು.ವಿಜಯಪುರ ದ ನಿಡಗುಂದಿಯ ಆಲಮಟ್ಟಿಯ ಕೆಬಿಜೆಎನ್‌ಎಲ್ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸಲಾಗು ತ್ತದೆ.ನೈತಿಕ ಶಿಕ್ಷಣ ನೀಡಬೇಕೆಂಬುವ ಚಿಂತನೆಯಿದೆ.ಹಿಂದೆ ನೈತಿಕ ಶಿಕ್ಷಣದ ಕ್ಲಾಸ್ ಇತ್ತು ಒಳ್ಳೊಳ್ಳೆ ಕಥೆ ಮಹಾಭಾರತ, ರಾಮಾಯಣ,ಸತ್ಯ ಹರಿಶ್ಚಂದ್ರ,ಗಾಂಧೀಜಿ ಕಥೆ ಹೇಳಲಾ ಗುತ್ತಿತ್ತು.ನೈತಿಕವಾಗಿ ಮಕ್ಕಳನ್ನು ತಯಾರಿ ಮಾಡೋದು ನಡೆಯುತ್ತಿತ್ತು.ಇತ್ತೀಚಿನ ದಿನಗಳಲ್ಲಿ ಶಾಲೆಯಲ್ಲಿ ಅದು ಬಿಟ್ಟು ಹೋಗಿದೆ.ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ತರಬೇಕು ಅಂತಾ ಜನ ನಿಶ್ಚಯ ಮಾಡಿದ್ದಾರೆ.ನಾವು ಇವತ್ತು ಎಲ್ಲರೂ ಒದ್ದಾಡ್ತಿರೋದು ದ್ವಂದ್ವಗಳಲ್ಲಿ.ಮನಸ್ಸು ಸರಿಯಿಲ್ಲದೆ, ಸೂಸೈಡ್ ಗಳು ಆಗುತ್ತಿರೋ ದ್ವಂದ್ವದಲ್ಲಿದ್ದೇವೆ. ಮನುಷ್ಯ ನಿಗೆ ಕ್ಲಾರಿಟಿ ಕೊಟ್ಟು ಬದುಕಿಗೆ ಅರ್ಥಕೊಡಲಿಕ್ಕೆ ಭಗವ ದ್ಗೀತೆ ಯಾಕೆ ಆಗಬಾರದು ಶಾಲೆಯಲ್ಲಿ ಹೇಗೆ ಭಗವದ್ಗೀತೆ ತರಬೇಕು ಅನ್ನೋದು ಇನ್ನೂ ನಿಶ್ಚಯ ಮಾಡಿಲ್ಲ ಶೀಘ್ರ ದಲ್ಲೇ ಪೈನಲ್ ಮಾಡೊದಾಗಿ ಹೇಳಿದರು
ಇನ್ನೂ ನೈತಿಕ ಶಿಕ್ಷಣದಲ್ಲಿ ಏನೇನು ಇರಬೇಕು ಅಂತಾ ತಜ್ಞರು ನಿಶ್ಚಯ ಮಾಡುತ್ತಾರೆ.ಈ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಶಕ್ತಿ ನೀಡಿದ್ದೇ ಭಗವದ್ಗೀತೆ ಎಂದಿ ದ್ದಾರೆ.ಭಗವದ್ಗೀತೆ ನನಗೆ ಶಕ್ತಿ ತುಂಬಿದೆ ಅಂತಾ ಅಬ್ದುಲ್ ಕಲಾಂ ಅವರು ಹೇಳಿದ್ದರು.ಗಾಂಧೀಜಿಯಂತೂ 40 ಪುಟದ ಸಾಮಾನ್ಯ ಭಗವದ್ಗೀತೆ ಓದಿ ಬದುಕು ರೂಪಿಸಿ ಕೊಂಡಿದ್ದರು.ಈ ಜನರೆಲ್ಲಾ ಭಗವದ್ಗೀತೆ ಬಗ್ಗೆ ಹೇಳಿರು ವಾಗ ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ಬರುತ್ತದೆ.ಪಠ್ಯದಲ್ಲಿ ಭಗವದ್ಗೀತೆ ಒಂದೇ ಇರಲ್ಲ.ಭಗವದ್ಗೀತೆ ತರಹ ಇತರೆ ನೈತಿಕತೆ ವಿಚಾರ ಹೆಚ್ಚು ಇರುತ್ತದೆ.ಹೇಗೆ ಏನು ಅಂತಾ ನಾವು ಇನ್ನೂ ನಿಶ್ಚಯ ಮಾಡಿಲ್ಲ.ಭಗವದ್ಗೀತೆ ಧಾರ್ಮಿಕ ವಿಚಾರವೇ ಅಲ್ಲ.ಅಲ್ಲಿ ಯಾವುದೇ ದೇವರು ಪೂಜೆ ಬಗ್ಗೆ ಹೇಳಲ್ಲ.ಭಗವದ್ಗೀತೆ ಸಾರವು ಎಲ್ಲರ ಮನೆಗಳಲ್ಲಿಯೂ ಹಾಕುವಂತಿದೆ.ಅನೇಕ ಮುಸ್ಲಿಮ ಸ್ನೇಹಿತರ ಮನೆಯಲ್ಲೂ ಹಾಕಿಕೊಂಡಿದ್ದಾರೆ.ಭಗವದ್ಗೀತೆ ಜೀವನಕ್ಕೆ ಬೇಕಾದ ಆದರ್ಶವಾಗಿದೆ ಎಂದರು.