ಹಾವೇರಿ –
ಭ್ರಷ್ಟಾಚಾರ ಆರೋಪ ಕುರಿತು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಹಾವೇರಿ ಯ ಡಿಡಿಪಿಐ ಕಚೇರಿ ಮೇಲೆ ಎಸಿಬಿ ದಾಳಿ ಮಾಡಿದ ಸಮಯದಲ್ಲಿ ಡಿಡಿಪಿಐ ಸೇರಿದಂತೆ ಕಚೇರಿ ಸಿಬ್ಬಂದಿ ಬಳಿ 1 ಲಕ್ಷ 69 ಸಾವಿರ ರೂಪಾಯಿ ಅನಧಿಕೃತ ನಗದು ಹಣ ಪತ್ತೆಯಾಗಿದೆ.ಶಿಕ್ಷಣ ಇಲಾಖೆ ಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆ ಎಸಿಬಿ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದ್ದರು
ಇನ್ನೂ ದಾಳಿಯ ಸಮಯದಲ್ಲಿ ಡಿಡಿಪಿಐ ಜಗದೀಶ್ವರ ಅವರ ಬಳಿ 50,900 ರೂಪಾಯಿ ನಗದು ಹಾಗೂ ಇತರ ಸಿಬ್ಬಂದಿ ಬಳಿ 1,18,100 ರೂಪಾಯಿ ಹಣ ಪತ್ತೆಯಾಗಿದೆ. ನಗದು ಪುಸ್ತಕದಲ್ಲಿ ದಾಖಲಾಗದ ಒಟ್ಟು 1 ಲಕ್ಷದ 69 ಸಾವಿರ ಅನಧಿಕೃತ ಹಣವನ್ನು ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.ಕಚೇರಿಯಲ್ಲಿನ ದಾಖಲೆಗಳ ಪರಿಶೀಲನೆ ನಂತರ ಡಿಡಿಪಿಐ ಮತ್ತು ಸಿಬ್ಬಂದಿ ಬಳಿ ಅನಧಿಕೃತ ಹಣ ಪತ್ತೆಯಾಗಿದೆ ಎನ್ನಲಾಗುತ್ತಿದೆ.ಎಸಿಬಿ ಡಿವೈಎಸ್ಪಿ ಗೋಪಿ, ಸಿಪಿಐಗಳಾದ ಪ್ರಭಾವತಿ, ಬಸವರಾಜ ಬುದ್ನಿ ಹಾಗೂ ಎಸಿಬಿ ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದರು. ಹಾವೇರಿ ಎಸಿಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ