ಬೆಂಗಳೂರು –
ಕಳೆದ 2019-20 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಮೌಲ್ಯಮಾಪನದಲ್ಲಿ ಲೋಪವೆಸಗಿದಂತ 1,200 ಶಿಕ್ಷಕರಿಗೆ ಕೋಕ್ ನೀಡಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬಿಗ್ ಶಾಕ್ ನೀಡಿದೆ.ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆಗೊಂಡ ನಂತ್ರ ನಡೆದಂತ SSLC ಪರೀಕ್ಷೆ ಸುಸೂತ್ರವಾಗಿ ಮುಕ್ತಾಯಗೊಂಡಿದೆ. ಇದೀಗ ಈ ತಿಂಗಳ ಕೊನೆಯ ವಾರದಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದು ಕಳೆದ ಬಾರಿ ಮೌಲ್ಯ ಮಾಪನದಲ್ಲಿ ಆದಂತ ತಪ್ಪುಗಳ ಕಡಿವಾಳಕ್ಕೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಠಿಣ ನಿರ್ಧಾರ ಕೈಗೊಂಡಿದೆ.

ಈ ಬಾರಿ ಮೌಲ್ಯ ಮಾಪನದಲ್ಲಿ ನಿರ್ಲಕ್ಷ್ಯದಿಂದ ವಿದ್ಯಾರ್ಥಿ ಗಳು ಹಾಗೂ ಪೋಷಕರಿಗೆ ಆಗುತ್ತಿದ್ದಂತತೊಂದರೆಯನ್ನು, ತಪ್ಪಿಸೋ ನಿಟ್ಟಿನಲ್ಲಿ ಮೌಲ್ಯ ಮಾಪನದಲ್ಲಿ ಲೋಪವೆಸಗು ವಂತ ಶಿಕ್ಷಕರಿಗೆ ಕೋಕ್ ನೀಡಿದೆ.1,200 ಶಿಕ್ಷಕರನ್ನು ಈ ಬಾರಿಯ ಎಸ್ ಎಸ್ ಎಲ್ ಸಿ ಮೌಲ್ಯ ಮಾಪನದಿಂದ ಹೊರಗಿಟ್ಟಿದೆ.ಅಲ್ಲದೇ ಕರ್ತವ್ಯ ಲೋಪವೆಸಗಿದ ಶಿಕ್ಷಕರನ್ನು ಕಪ್ಪುಪಟ್ಟಿಗೆ ಸೇರಿಸಿ ದಂಡ ವಿಧಿಸಿದೆ.