ಬೆಂಗಳೂರು –
ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಪಡೆದಿದ್ದು ಸರಿ ಯಾಗಿ ಪರಿಶೀಲಿಸಿದ ನಂತರ ಆ ಕಾರ್ಡ್ ಗಳನ್ನು ರದ್ದುಪಡಿಸಲಾಗುತ್ತಿದೆ.ಬಡವರಿಗೋಸ್ಕರ ಇರುವ ಯೋಜನೆಯನ್ನು ಇತರರು ಪಡೆಯಬಾರದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸಚಿವ ಕೆ ಗೋಪಾಲಯ್ಯ ಪುನರುಚ್ಚರಿಸಿದರು
ಸ್ವಂತ ಮನೆ ಹೊಂದಿ 2-3 ಮಹಡಿಯ ಮನೆ ಕಟ್ಟಿಕೊಂಡು ರುವವರ ಬಿಪಿಎಲ್ ಕಾರ್ಡ್ ರದ್ದಾಗಲಿದೆ.ಬಿಪಿಎಲ್ ಕಾರ್ಡ್ ಗಾಗಿ ಹೊಸ ಕಾನೂನು ಜಾರಿಗೊಳಿಸಲಾಗುತ್ತಿದ್ದು ಇದರ ದುರ್ಬಳಕೆ ತಡೆಯಲು ಈ ಯೋಜನೆ ಅನುಷ್ಠಾನ ಗೊಳಿಸಲಾಗುತ್ತಿದೆ ಕೇಂದ್ರ ಸರ್ಕಾರ ದೇಶದಲ್ಲಿ ಎಂಬತ್ತು ಕೋಟಿ ಜನರಿಗೆ ಬಿಪಿಎಲ್ ಕಾರ್ಡ್ ಮುಖಾಂತರ ಆಹಾರ ಒದಗಿಸುತ್ತಿದ್ದು ಕೇಂದ್ರ ಸರ್ಕಾರದ ಜತೆಗೆ ರಾಜ್ಯ ಸರ್ಕಾರ ವೂ ಸಹ ಕೈಜೋಡಿಸಿ ಅಂತ್ಯೋದಯ ಕಾರ್ಡ್ ಗೆ ತಲಾ ಹತ್ತು ಕೆಜಿ ಅಕ್ಕಿ ನೀಡಲಾಗುತ್ತಿದೆ ಇನ್ನೂ ಇತ್ತ ರಾಜ್ಯದ ಸರ್ಕಾರಿ ನೌಕರರಿಗೆ ಕಾರ್ಡ್ ಹೊಂದಿದ್ದರೆ ಈ ಕೂಡಲೇ ಕಾರ್ಡ್ ನ್ನು ಮರಳಿಸುವಂತೆ ಸೂಚನೆ ನೀಡಿದರು