ಮಂಡ್ಯ –
ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವಂತ ಕೆಲಸ ಮಾಡಬೇಕಿದ್ದಂತ ಶಿಕ್ಷಕನೊಬ್ಬರು 2ನೇ ತರಗತಿ ವಿದ್ಯಾರ್ಥಿ ನಿಗೆ ಲೈಂಗಿಕ ಕಿರುಕುಳ ನೀಡಿ ಹೀನಕೃತ್ಯವೆಸಗಿರೋ ಘಟನೆ ಕೆ ಆರ್ ಪೇಟೆ ತಾಲೂಕಿನ ಗಂಗೇನಹಳ್ಳಿ ಗ್ರಾಮ ದಲ್ಲಿ ನಡೆದಿದೆ.ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲ್ಲೂಕಿನ ಗಂಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಯೇ ಹೀಗೊಂದು ಹೀನ ಕೃತ್ಯವನ್ನು ಶಿಕ್ಷಕ ಚಂದ್ರಶೇಖರ್ ಎಂಬಾತ ನಡೆಸಿರೋದು ಬೆಳಕಿಗೆ ಬಂದಿದೆ.ಮಾರ್ಚ್ 31ರಂದು ಶಾಲೆಗೆ ಹೋಗಿ ಬಂದಿದ್ದಂತ 2ನೇ ತರಗತಿ ವಿದ್ಯಾರ್ಥಿನಿ ಇಂದು ಶಾಲೆಗೆ ಹೋಗೋದಿಲ್ಲ ಎಂಬುದಾಗಿ ಹಠ ಹಿಡಿದಳು.ಯಾಕೆ ಎಂಬುದಾಗಿ ಪೋಷ ಕರು ವಿಚಾರಿಸಿದಾಗ ಶಾಲೆಯಲ್ಲಿ ಶಿಕ್ಷಕ ಚಂದ್ರಶೇಖರ್ ಲೈಂಗಿಕ ಕಿರುಕುಳ ನೀಡಿದಂತ ವಿಷಯವನ್ನು ಹೇಳಿದ್ದಾಳೆ.

ಈ ವಿಷಯವನ್ನು ಬಿಇಒ ಗಮನಕ್ಕೆ ಗ್ರಾಮಸ್ಥರು ತಂದಿ ದ್ದಾರೆ.ಕೂಡಲೇ ವಿಷಯದ ಗಂಭೀರತೆಯನ್ನು ಅರಿತಂತ ಬಿಇಓ ಬಸವರಾಜ ಅವರು ಶಿಕ್ಷಕ ಚಂದ್ರಶೇಖರ್ ಅವರ ಮೆಲೆ ಪೋಷಕರು ಕಿಕ್ಕೇರಿ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಅವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಅಂದಹಾಗೇ ಕಳೆದ 10 ವರ್ಷಗಳಿಂದ ಗಂಗೇನಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಚಂದ್ರಶೇಖರ್ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ