ರಾಮನಗರ –
ಮಾಗಡಿಯ ಪರೀಕ್ಷಾ ಕೇಂದ್ರವೊಂದರಲ್ಲಿ ಏಪ್ರಿಲ್ ನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷಾ ಅಕ್ರಮಕ್ಕೆ ಸಂಬಂ ಧಿಸಿದಂತೆ ಈಗಾಗಲೇ ಪೊಲೀಸರಿಂದ ತನಿಖೆ ತೀವ್ರ ಗೊಂಡಿದ್ದು ಇದರ ಬೆನ್ನಲ್ಲೇ ಈಗ ಒಟ್ಟು ಏಳು ಜನರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು ತನಿಖೆ ಮಾಡತಾ ಇದ್ದಾರೆ

ಕೆಂಪೇಗೌಡ ಶಾಲೆಯ ಕ್ಲರ್ಕ್ ರಂಗನಾಥ ಜೊತೆಗೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಐವರು ವಿಷಯ ತಜ್ಞರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.ಅಲ್ಲದೆ ಮಾಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯನ್ನೂ ಪೊಲೀಸರು ಈಗಾಗಲೇ ವಿಚಾರಣೆ ಮಾಡಿದ್ದು ಮತ್ತೆ ಅವಶ್ಯಕತೆ ಇದ್ದಾಗ ವಿಚಾರಣೆ ಗೆ ಬರುವಂತೆ ಸೂಚನೆ ನೀಡಿದ್ದಾರೆ.





















