ರಾಮನಗರ –
ರಾಮನಗರದ ಮಾಗಡಿಯಲ್ಲಿ SSLC ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಕುರಿತು 8 ಜನರನ್ನು ಪೊಲೀಸರು ಬಂಧನ ಮಾಡಿದ್ದಾರೆ.ಹೌದು ಡಿಡಿಪಿಐ ದೂರು ನೀಡಿದ ಬೆನ್ನಲ್ಲೇ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಎಂಟು ಜನರನ್ನು ಬಂಧಿಸಿದ್ದಾರೆ.
ವಾಟ್ಸಾಪ್ ಗ್ರೂಪ್ ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು ಡಿಡಿಪಿಐ ದೂರಿನ ಹಿನ್ನೆಲೆಯಲ್ಲಿ ಸಧ್ಯ 8ಕ್ಕೂ ಹೆಚ್ಚು ಮಂದಿ ಪೊಲೀಸರ ವಶಕ್ಕೆ ತೆಗೆದುಕೊಂಡಿದ್ದಾರೆ.ಮಾರ್ಚ್ 28 ರಿಂದ ಏಪ್ರಿಲ್ 11ರವರೆಗೆ ನಡೆದಿದ್ದ SSLC ಪರೀಕ್ಷೆ ನಡೆದಿದ್ದು ಪ್ರಶ್ನೆ ಪತ್ರಿಕೆ ವಿದ್ಯಾರ್ಥಿಗಳಿಗೆ ಕೊಡುವ ಮುನ್ನವೇ ಸೋರಿಕೆಯಾಗಿತ್ತಂತೆ.ವಾಟ್ಸಾಪ್ ನಲ್ಲಿ ಪತ್ರಿಕೆ ಕಳುಹಿಸಿ ಉತ್ತರ ಪಡೆಯುತ್ತಿದ್ದ ರಂಗೇಗೌಡ.ಹಿಂದಿ ಶಿಕ್ಷಕ ಕೃಷ್ಣಮೂರ್ತಿಯಿಂದ ಪ್ರಶ್ನೆ ಪತ್ರಿಕೆಯ ಫೋಟೋಕಾಪಿ ಬಯಲಾಗಿತ್ತು.ಫೋಟೋಕಾಪಿ ಪಡೆದು ಆನ್ಸರ್ ಕಾಪಿ ಪಡೆಯುತ್ತಿದ್ದ ರಂಗೇಗೌಡ ಅವರು.ತಡವಾಗಿ ಬೆಳಕಿಗೆ ಬಂದ ಪ್ರಕರಣದಲ್ಲಿ 8 ಮಂದಿ ವಶಕ್ಕೆ ತೆಗೆದುಕೊಂಡಿದ್ದಾರೆ ಪೊಲೀಸರು.ಕೆಂಪೇಗೌಡ ಪ್ರೌಢಶಾಲೆಯ ಮುಖ್ಯಶಿಕ್ಷಕ ಶ್ರೀನಿವಾಸ್,ಕ್ಲರ್ಕ್ ರಂಗೇಗೌಡ,ರಂಗನಾಥ ಶಾಲೆಯ ಶಿಕ್ಷಕ ಕೃಷ್ಣಮೂರ್ತಿ,ವಿಷಯ ಪರಿಣಿತರಾದ ಅರ್ಜುನ್, ನಾಗ ರಾಜ್,ಅಲೀಂ,ಶ್ರೀನಿವಾಸ್,ಸುಬ್ರಹ್ಮಣ್ಯ ಸೇರಿದಂತೆ 8ಕ್ಕೂ ಹೆಚ್ಚು ಮಂದಿ ಮಾಗಡಿ ಪೋಲಿಸರ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.ಡಿಡಿಪಿಐ ಗಂಗಣ್ಣ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳು ವಶಕ್ಕೆ ತಗೆದು ಕೊಳ್ಳಲಾಗಿದೆ.
ಪ್ರಕರಣವನ್ನು ಮುಚ್ಚಿಹಾಕಲು ಡೀಲ್ ಮಾಡಿಕೊಂಡವರು ಕೂಡಾ ಅಂದರ್ ಆಗಿದ್ದಾರೆ.ಶಿಕ್ಷಕ ಲೋಕೇಶ್, ಪತ್ರಕರ್ತ ವಿಜಯ್ ಎಂಬುವರಿಂದ ಡೀಲ್ ನಡೆದಿತ್ತು
ಪರೀಕ್ಷಾ ಅಕ್ರಮದ ಬಗ್ಗೆ ಮಾಗಡಿ ಪೊಲೀಸರಿಂದ ತನಿಖೆ ಮುಂದುವರೆದಿದ್ದು ಕ್ರಮವನ್ನು ಕೈಗೊಂಡಿದ್ದಾರೆ.