ಬೆಂಗಳೂರು –
ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ರವರು ವರದಿ ನೀಡಲಿದ್ದು ಈ ಒಂದು ವರದಿಯನ್ನಾಧರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಉಡುಪಿಯಲ್ಲಿ ಮಾತನಾಡಿದ ಅವರು ಪಠ್ಯಗಳಲ್ಲಿ ಅಳವಡಿಸಿರುವ ಕೆಲ ಪಾಠಗಳ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಬರುತ್ತಿವೆ.ಹಾಗಾಗಿ ಶಿಕ್ಷಣ ಸಚಿವರಿಗೆ ವರದಿ ನೀಡುವಂತೆ ಸೂಚಿಸಿದ್ದೇನೆ.ಎಲ್ಲ ಆಯಾಮಗಳಿಂದಲೂ ಪರಿಶೀಲಿಸಿ ಶಿಕ್ಷಣ ಸಚಿವರು ವರದಿ ನೀಡುವರು ಎಂದರು.
ಕೆಲ ಸ್ವಾಮೀಜಿಗಳು ಶಿಕ್ಷಣ ತಜ್ಞರೂ ತಮಗೆ ಪತ್ರ ಬರೆದಿ ದ್ದಾರೆ.ಶಿಕ್ಷಣ ಸಚಿವರ ವರದಿ ನಂತರ ಈ ಎಲ್ಲ ಗೊಂದ ಲಗಳಿಗೂ ತೆರೆ ಎಳೆಯುವ ಕೆಲಸವನ್ನು ಸರ್ಕಾರ ಮಾಡ ಲಿದೆ.ಕೆಲ ಸಾಹಿತಿಗಳು ತಮ್ಮ ಪಠ್ಯಗಳನ್ನು ಶಾಲಾ ಪಠ್ಯ ದಿಂದ ವಾಪಸ್ ಪಡೆಯುವಂತೆ ಪತ್ರ ಬರೆದಿರುವ ಬಗ್ಗೆ ಯೂ ಪ್ರತಿಕ್ರಿಯಿಸಿದ ಅವರು ಶಿಕ್ಷಣ ಸಚಿವರ ವರದಿ ನಂತರ ಈ ಎಲ್ಲದ್ದಕ್ಕೂ ಒಂದು ತೆರೆ ಬೀಳುತ್ತದೆ.ನಾಳೆಯೇ ಶಿಕ್ಷಣ ಸಚಿವರು ವರದಿ ನೀಡುತ್ತಾರೆ ಎಂದರು.ಹಿಜಾಬ್ ಮತ್ತು ಲವ್‌ಜಿಹಾದ್‌ಗಳಿಗೆ ತೆರೆ ಎಳೆಯಲು ಕಾನೂನು ಗಳನ್ನು ಜಾರಿ ಮಾಡಲಾಗಿದೆ.ಎಲ್ಲರೂ ಕಾನೂನನ್ನು ಪಾಲಿಸಲೇಬೇಕು.ಲವ್‌ಜಿಹಾದ್ ಹೊಸದೇನೂ ಅಲ್ಲ ಮೊದಲಿನಿಂದಲೂ ಇದೆ ಅದನ್ನು ತಡೆಯಲು ಕಾನೂನನ್ನು ರೂಪಿಸಿದ್ದೇವೆ. ಅದನ್ನು ಪಾಲಿಸಲೇಬೇಕು ಎಂದರು.