ಬೆಂಗಳೂರು –
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಶಿಕ್ಷಣ ಇಲಾಖೆ ಯಲ್ಲಿ ಎಸಗಿರುವ ಲೋಪಗಳಿಗೆ ಸಂಬಂಧಿಸಿದಂತೆ ಬಹುತ್ವ ಕರ್ನಾಟಕ ಸಂಸ್ಥೆ ಸಾರ್ವಜನಿಕ ದೋಷಾರೋಪ ಪತ್ರವನ್ನು ಬಿಡುಗಡೆ ಮಾಡಿದೆ.ಶಿಕ್ಷಣ ಸಚಿವರು ಎಸಗಿ ರುವ ಆರು ಪ್ರಮಾದಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡುವಂತೆ ಬಹುತ್ವ ಕರ್ನಾಟಕ ಸಂಘಟನೆ ಅಗ್ರಹಿಸಿದೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಬಹುತ್ವ ಕರ್ನಾಟಕ ನ್ಯಾಯ ಸೌಹಾರ್ದತೆ ಹಾಗೂ ಐಕ್ಯತೆ ವೇದಿಕೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಕರ್ನಾಟಕದ ಮಕ್ಕಳ ಭವಿಷ್ಯವನ್ನು ಕಸಿದುಕೊಂಡಿದ್ದಾರೆ. ಸಚಿವರಾಗಿ ತಮ್ಮ ಪಾತ್ರ ನಿರ್ವಹಿಸಲು ವಿಫಲವಾಗಿರುವ ನಾಗೇಶ್ ರಾಜೀನಾಮೆ ನೀಡಬೇಕು.ಕೋವಿಡ್ ಪರಿಸ್ಥಿತಿ ಯಲ್ಲಿ ಮಕ್ಕಳ ಶಿಕ್ಷಣವನ್ನು ಪಣಕ್ಕೆ ಒಡ್ಡಿ ರಾಜ್ಯದ ಶಿಕ್ಷಣ ವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದಾರೆ.ಅಪೌಷ್ಠಿಕತೆ ಹೆಚ್ಚಿಸಿ ದ್ದರೂ ಅದನ್ನು ನಿಯಂತ್ರಿಸಲು ಯಾವುದೇ ಕ್ರಮ ಜರುಗಿ ಸಿಲ್ಲ.ಶಿಕ್ಷಣವನ್ನು ಬ್ರಾಹ್ಮಣವಾದಿ ಹಿಡಿತಕ್ಕೆ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದೆ.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹ
ವಿನೂತನ ದೋಷಾರೋಪ ಪತ್ರ ಸಾಮಾನ್ಯವಾಗಿ ಯಾವುದಾದರೂ ಅಪರಾಧ ಕೃತ್ಯ ಎಸಗಿದರೆ ಪೊಲೀಸರು ಕೃತ್ಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ತಪ್ಪಿಸ್ಥರಿಗೆ ಶಿಕ್ಷೆ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸುತ್ತಾರೆ.ಬಹುತ್ವ ಕರ್ನಾಟಕ ಶಿಕ್ಷಣ ಸಚಿವರು ಮಾಡಿರುವ ಪ್ರಮಾದಗಳನ್ನು ಅಪರಾಧ ಕೃತ್ಯಗಳೆಂದು ಪರಿಗಣಿಸಿ ಸಾರ್ವಜನಿಕ ದೋಷಾರೋಪ ಪತ್ರವನ್ನು ಬಿಡುಗಡೆ ಮಾಡಿದೆ.ಶಿಕ್ಷಣ ಸಚಿವರು ಎಸಗಿರುವ ಪ್ರಮಾ ದಗಳು ಕಾನೂನು ಉಲ್ಲಂಘನೆ ಕುರಿತ ಸಾರ್ವಜನಿಕ ದೋಷಾರೋಪಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ.