ಬೆಂಗಳೂರು –
ಬೆಂಗಳೂರು DDPI ನಡೆ ಮತ್ತು ಆದೇಶಕ್ಕೆ ಶಿಕ್ಷಣ ಸಚಿವರು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ಇದೊಂದು ಆಘಾತಕಾರಿ ಯಾಗಿದ್ದು ಈ ಒಂದು ಆದೇಶದ ವಿರುದ್ಧ ಬೇಸರವನ್ನು ವ್ಯಕ್ತಪಡಿಸಿದ್ದಾರೆ.ಹೆಚ್ ಡಿ ಕುಮಾರ ಸ್ವಾಮಿ ಸರಣಿ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿ ಸಿದ್ದಾರೆ
ಸರ್ಕಾರವು ಹಿಂದಿ ಮಾತನಾಡುವ ಹೈಸ್ಕೂಲ್ ಮತ್ತು ಪಿಯು ಕಾಲೇಜು ವಿದ್ಯಾರ್ಥಿಗಳನ್ನು ಮಾತ್ರವೇ ಆಯ್ಕೆ ಮಾಡಿಕೊಂಡು One Bharat, Shreshta Bharat ಕಾರ್ಯಕ್ರಮದಡಿ ಇತರೆ ರಾಜ್ಯಗಳಿಗೆ ಪ್ರವಾಸ ಕಳಿಸುವ ಪ್ರೋಗ್ರಾಮ್ ಹಾಕಿಕೊಂಡಿದೆ ಎಂದು ಬೆಂಗಳೂರು ಡಿಡಿಪಿಐ ಹೊರಡಿಸಿರುವ ಈ ಪ್ರಕಟಣೆ ನಿಜಕ್ಕೂ ಆಘಾತ ಕಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನೇತಾರ ಹೆಚ್ ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.