ಬೀದರ್ –
ರಸಗೊಬ್ಬರ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ರಸಾ ಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರ ಜೊತೆ ಮೊಬೈಲ್ ನಲ್ಲಿ ಅನುಚಿತವಾಗಿ ವರ್ತಿಸಿದ ಆರೋಪದ ಹಿನ್ನಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕ ರೊಬ್ಬರನ್ನು ಅಮಾನತುಗೊಳಿಸಿ ಡಿಡಿಪಿಐ ಗಣಪತಿ ಬಾರಾಟಕೆ ಆದೇಶ ಹೊರಡಿಸಿದ್ದಾರೆ.ಹೌದು ಔರಾದ ತಾಲೂಕಿನ ಜೀರ್ಗಾ(ಕೆ)ಸರ್ಕಾರಿ ಶಾಲಾ ಶಿಕ್ಷಕ ಕುಶಾಲ ಪಾಟೀಲ ಅಮಾನತ್ತುಗೊಂಡ ಶಿಕ್ಷಕರಾಗಿದ್ದಾರೆ.ಜೂ 10 ರಂದು ಪಾಟೀಲ ಅವರು ಸ್ವಗ್ರಾಮ ಹೆಡಗಾಪುರದಲ್ಲಿ ರಸಗೊಬ್ಬರ ಕೊರತೆ ಸಂಬಂಧ ಕೇಂದ್ರ ಸಚಿವ ಖೂಬಾ ಅವರಿಗೆ ಮೊಬೈಲ್ ಕರೆ ಮಾಡಿದ್ದರು. ಈ ವೇಳೆ ಸಚಿವರು ಮತ್ತು ಶಿಕ್ಷಕನ ನಡುವೆ ನಡೆದ ಏಕ ವಚನದಲ್ಲಿ ಮಾತಿನ ವಾಗ್ವಾದದ ಆಡಿಯೋ ವೈರಲ್ ಆಗಿತ್ತು.
ಘಟನೆಗೆ ಸಂಬಂಧ ಔರಾದ ಬಿಇಒ ಎಚ್.ಎಸ್. ನಗನೂರು ಅವರು ನೀಡಿರುವ ವರದಿ ಅನ್ವಯ ಶಿಕ್ಷಕ ಕುಶಾಲ ಅವರನ್ನು ಅಮಾನತು ಗೊಳಿಸಲಾಗಿದೆ.ಕೇಂದ್ರ ಸಚಿವರೊಂದಿಗೆ ಶಿಕ್ಷಕ ಪಾಟೀಲ, ಸರ್ಕಾರಿ ನೌಕರರಲ್ಲದ ರೀತಿಯಲ್ಲಿ ವರ್ತಿಸಿದ್ದಾರೆ ಹಾಗೂ ಸಚಿವರೊಂದಿಗೆ ಮಾತನಾಡಿದ ಆಡಿಯೋವನ್ನು ಸಾಮಾಜಿಕ ಜಾಲತಾಣ ದಲ್ಲಿ ಹಾಕಿ ವೈರಲ್ ಮಾಡಿದ್ದಕ್ಕೆ ಶಿಕ್ಷಕನನ್ನು ಅಮಾನತು ಗೊಳಿಸಲಾಗಿದೆ ಎಂದು ಡಿಡಿಪಿಐ ಹೇಳಿದರು.