ಬೆಂಗಳೂರು –
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಕರೆ ತರಲು ಅನುಕೂಲ ಕಲ್ಪಿಸುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರ ವಾಹನಗಳನ್ನು ಖರೀದಿಸಲು ಅನುಮತಿಯನ್ನು ನೀಡಿ ಆದೇಶವನ್ನು ಮಾಡಿದೆ.ಹೌದು ಸ್ಥಳೀಯ ಶಾಸಕರ ಪ್ರದೇಶಾಭಿವೃದ್ದಿ ಅನುದಾನದಲ್ಲಿ ಮಕ್ಕಳನ್ನು ಕರೆದು ಕೊಂಡು ಬರಲು ಅವಕಾಶವನ್ನು ನೀಡಿ ಆದೇಶವನ್ನು ರಾಜ್ಯ ಸರ್ಕಾರ ಮಾಡಿದೆ.
ಇನ್ನೂ ಆ ಒಂದು ವಾಹನಕ್ಕೆ ಚಾಲಕರ ವೇತನ ಡಿಸೇಲ್ ಸೇರಿದಂತೆ ಖರ್ಚು ವೆಚ್ಚ ಕುರಿತಂತೆ ಶಾಲೆಯ ಎಸ್ ಡಿಎಮ್ ಸಿ ಯವರೇ ಭರಿಸಬೇಕು ಎಂಬ ಸೂಚನೆಯೊಂ ದಿಗೆ ಷರತ್ತುಗಳನ್ನು ವಿಧಿಸಿರುವ ರಾಜ್ಯ ಸರ್ಕಾರ ಆದೇಶ ವನ್ನು ಮಾಡಿದೆ.