ರಾಯಚೂರು –
ಕಾಮುಕ ಶಿಕ್ಷಕನ ಪತ್ನಿಯಿಂದಲ್ಲೇ ಶಿಕ್ಷಣ ಇಲಾಖೆಗೆ ದೂರು ಹೌದು ಕಾಮುಕ ಶಿಕ್ಷಕ ಮಹಮ್ಮದ್ ಅಜರುದ್ಧೀನ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ಶಿಕ್ಷಕನ ವಿರುದ್ಧ ಕಳೆದ 2 ವರ್ಷಗಳ ಹಿಂದೆ ಖುದ್ದು ಕಾಮುಕನ ಪತ್ನಿಯೇ ಮುಂದೆ ಬಂದು 21-04-2019ರಂದು ಗಂಡ ಮಹಮ್ಮದ್ ಅಜರುದ್ಧೀನ್ ಕೃತ್ಯಗಳನ್ನು ಎಳೆಎಳೆಯಾಗಿ ಬರೆದು ಸಿಂಧನೂರು ಬಿಇಗೆ ದೂರು ನೀಡಿದ್ರು.ಆಗ ಶಿಕ್ಷಣ ಇಲಾಖೆ ಅಧಿಕಾರಿಗಳು ತೋರಿಸಿದ ನಿರ್ಲಕ್ಷ್ಯದಿಂದಾಗಿ ಇಂದು ಇಡೀ ಶಿಕ್ಷಣ ಇಲಾಖೆಯೇ ತಲೆ ತಗ್ಗಿಸುವಂತ ಘಟನೆ ನಡೆದು ಹೋಗಿದೆ.
ಹೀಗಾಗಿ ಈಗ ಅಧಿಕಾರಿಗಳ ಮತ್ತು ಶಿಕ್ಷಣ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲು ಮುಂದಾಗಿದೆ.ಒಟ್ಟಿನಲ್ಲಿ ಕಾಮುಕ ಶಿಕ್ಷಕ ಮಹಮ್ಮದ್ ಅಜರುದ್ಧೀನ್ ವಿರುದ್ಧ ಕ್ರಮ ಜರುಗಿಸಲು ಪೊಲೀಸರು ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ ಕಾನೂನು ಪ್ರಕಾರ ಶಿಕ್ಷೆ ನೀಡಲು ತಯಾರಿ ನಡೆಸಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.