This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ರಾಜ್ಯ ಗುರು ಪ್ರತಿಭಾ ಪ್ರಶಸ್ತಿಗೆ ಭಾಜನರಾದ ಬಹುಮುಖ ಪ್ರತಿಭೆಯ ಶಿಕ್ಷಕ ರಂಗನಾಥ ವಾಲ್ಮೀಕಿ ಪ್ರತಿಭಾವಂತ ಶಿಕ್ಷಕ ಸಾಹಿತಿ ಶಿಕ್ಷಕ ರಂಗನಾಥ ವಾಲ್ಮೀಕಿ ಅವರು ರಾಜ್ಯದ ಪ್ರತಿಭಾ ಪುರಸ್ಕಾರ ಗೌರವ…..

WhatsApp Group Join Now
Telegram Group Join Now

ಧಾರವಾಡ –

ರಾಜ್ಯ ಗುರು ಪ್ರತಿಭಾ ಪ್ರಶಸ್ತಿಗೆ ಭಾಜನರಾದ ರಂಗನಾಥ ವಾಲ್ಮೀಕಿ ಬಹುಮುಖ ಪ್ರತಿಭಾವಂತ ಶಿಕ್ಷಕ ಸಾಹಿತಿ ಯಾದ ಮನಗುಂಡಿ ಪ್ರೌಢ ಶಾಲೆಯ ಶಿಕ್ಷಕ ರಂಗನಾಥ ವಾಲ್ಮೀಕಿ ಅವರಿಗೆ ರಾಜ್ಯ ಹಂತದ ಗುರು ಪ್ರತಿಭಾ ಪುರಸ್ಕಾರ ಕ್ಕೆ ಭಾಜನ

ತುಮಕೂರಿನ ಸಿದ್ದಗಂಗಾ ಮಠದ ಉದ್ದಾನೇಶ್ವರ ಸಮು ದಾಯ ಭವನದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ ( ರಿ ) ಮೈಸೂರು ಇವರು ಕೊಡಮಾಡಿದ ಗುರು ಪ್ರತಿಭಾ ಪುರಸ್ಕಾರವನ್ನು ರಂಗನಾಥ ವಾಲ್ಮೀಕಿಯವರಿಗೆ ನೀಡಿ ಗೌರವಿಸಲಾಯಿತು.ಪ್ರತಿಭಾ ಪರಿಷತ್ ಆಯೋಜಿಸಿದ ವಿವಿಧ ಆನ್ ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನಾರ್ಹ ಪ್ರದರ್ಶನ ನೀಡಿದ್ದರು ಇವರ ಶೈಕ್ಷಣಿಕ ಕಾರ್ಯ ಶೈಲಿ ಆಧಾರಿಸಿ ಇವರಿಗೆ ರಾಜ್ಯ ಹಂತದ ಗುರು ಪುರಸ್ಕಾರ ನೀಡಿ ಗೌರವಿಸಲಾಯಿತು

ರಾಜ್ಯ ಹಂತದ ಗುರು ಪ್ರತಿಭಾ ಪುರಸ್ಕಾರ ಕ್ಕೆ ಭಾಜನರಾದ ರಂಗನಾಥ ವಾಲ್ಮೀಕಿ ಬಹುಮುಖ ಪ್ರತಿಭಾವಂತರು ಶಿಕ್ಷಕ ಸಾಹಿತಿಯಾದ ಇವರು ರಾಜ್ಯದ ಪ್ರತಿಷ್ಟಿತ ಪ್ರತಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದಿರುವರು.ಇದಲ್ಲದೇ ವಿನಯವಾಣಿ ದಿನಪತ್ರಿಕೆಯ ರಂಗಾಂತರಂಗ ಅಂಕಣ ಬರಹಗಾರರಾಗಿದ್ದು ಈಗಾಗಲೇ ಸದೃಢ ಮನಸ್ಸು ಸಾಧನೆಗೆ ಮೆಟ್ಟಿಲು,ದೃಷ್ಟಿ ಬದಲಿಸಿದರೆ ದೃಶ್ಯ ವೂ ಬದಲಾದೀತು,ಅರಿವಿನ ಕನ್ನಡಿ,ಜೀವನಾಮೃತ ಎಂಬ ನಾಲ್ಕು ಪುಸ್ತಕ ಬರೆದು ಪ್ರಕಟಿಸಿದ ಇವರು.ಅಂಕಣ ಬರಹ ಗಳ ಸಂಕಲನ ರಂಗಾಂತರಂಗ ಹೊತ್ತಿಗೆ ರಚಿಸುತ್ತಿದ್ದಾರೆ. ರಾಜ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮಕ್ಕಳಿಗೆ,ಶಿಕ್ಷಕರಿಗೆ ತರಬೇತಿ ನೀಡುತ್ತಾ ಬಂದಿರುವ ಇವರು.ಆಶಾಕಿರಣ,ಕವಿ ಪರಿಚಯ,ಗಾದೆ ಮಾತು,ವ್ಯಾಕರಣಕ್ಕೆ ಪೂರಕವಾದ ಅನೇಕ ಕನ್ನಡ ವಿಷಯದ ಸಂಪನ್ಮೂಲ ರಚಿಸಿ ಬಳಸಿ ದ್ದಾರೆ.ಕೊರೊನಾ ಕಾಲಘಟ್ಟದಲ್ಲಿ ಹಲವರು ಶೈಕ್ಷಣಿಕ ಕಲಿಕೆಗೆ ಪೂರಕವಾದ ಆ್ಯಪ್ ಬಳಕೆಯಲ್ಲಿ ಇವರು ಸಿದ್ದಹ ಸ್ತರು.ನಟರಾಗಿಯೂ ಇವರು ನಾಟಕ,ಕಿರುಚಿತ್ರಗಳಲ್ಲಿ ನಟಿಸಿದ್ದಾರೆ.ಹಾಗೆ ಇವರ ಅನೇಕ ಚಿಂತನಗಳು ಧಾರವಾಡ ಆಕಾಶವಾಣಿ ನಿಲಯದಲ್ಲಿ ಪ್ರಸಾರಗೊಂಡಿವೆ.ಉತ್ತಮ ವಾಗ್ಮಿಗಳಾದ ಇವರು ಹಲವಾರು ಉಪನ್ಯಾಸ ನೀಡುತ್ತಾ ಬಂದಿದ್ದಾರೆ.ಇವರ ಶೈಕ್ಷಣಿಕ ಸಾಧನೆ ಗಮನಿಸಿ ಇಲಾಖೆ ಇವರಿಗೆ ೨೦೧೮ ರಲ್ಲಿ ಧಾರವಾಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.ಇವರ ಸಾಧನೆಗೆ ಮತ್ತೊಂದು ಗರಿ ಗುರು ಪ್ರತಿಭಾ ಪುರಸ್ಕಾರ ಸೇರಿದೆ.

ಇವರ ಸಾಧನೆಗೆ ಧಾರವಾಡ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬಮ್ಮಕ್ಕನವರ,ಕ್ಷೇತ್ರ ಸಮನ್ವಯಾಧಿಕಾರಿಗಳು,ಕನ್ನಡ ವಿಷಯ ಪರಿವೀಕ್ಷಕರಾದ ಪೂರ್ಣಿಮಾ ಮುಕ್ಕುಂದಿ ಶಾಲಾ ಮುಖ್ಯೋಪಾಧ್ಯಾಯ ರಾದ ಜಗದೀಶ ಕರೆಯಮ್ಮನವರ,ಶಾಲಾ ಎಸ್.ಡಿ.ಎಮ್ ಸಿ ಸರ್ವ ಸದಸ್ಯರು,ಶಾಲಾ ಸಿಬ್ಬಂದಿ ವರ್ಗದವರು ಗ್ರಾಮ ಸ್ಥರು ಅಭಿನಂದಿಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk