ಕಲಘಟಗಿ –
ಗ್ರಾಮ ಪಂಚಾಯತ ಚುನಾವಣೆ ಕಾವೇರುತ್ತಿದೆ. ನಾ ಮುಂದು ನೀ ಮುಂದು ಎನ್ನುತ್ತಾ ಕಣದಲ್ಲಿರುವ ಅಭ್ಯರ್ಥಿಗಳೆಲ್ಲರೂ ಅಬ್ಬರದ ಪ್ರಚಾರ ಮಾಡ್ತಾ ಇದ್ದಾರೆ. ಇನ್ನೂ ಇವೆಲ್ಲದರ ನಡುವೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಯೊಬ್ಬರ ಮನೆ ಮುಂದೆ ವಾಮಾಚಾರ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದಲ್ಲಿ ನಡೆದಿದೆ.
ಹೌದು ಗ್ರಾಮದ ಫಾರ್ಶ್ವನಾಥ ಜೈನರ್ ಮನೆ ಈ ಒಂದು ವಾಮಚಾರ ಮಾಡಿದ ಘಟನೆ ನಡೆದಿದೆ.
ನಿಂಬೆ ಹಣ್ಣು, ಕುಂಕುಮ, ಉಪ್ಪು, ಮೊಟ್ಟೆ ಹಾಕಿ ವಾಮಾಚಾರ ಮಾಡಲಾಗಿದೆ. ಅಷ್ಟೇ ಅಲ್ಲ, ಪಾರ್ಶ್ವನಾಥ್ಗೆ ಸೂಚಕರಾಗಿರೋ ಮುನ್ನಾಸಾಬ ಮನೆ ಮುಂದೆಯೂ ಇದೇ ರೀತಿ ವಾಮಾಚಾರ ಮಾಡಲಾಗಿದೆ.
ಈ ಒಂದು ವಾಮಚಾರದ ಪ್ರಕರಣದಿಂದ ಅಭ್ಯರ್ಥಿಗಳಿಬ್ಬರೂ ಆತಂಕಗೊಂಡಿದ್ದು. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.